ಶಿಕ್ಷಕರ ಆಂತರಿಕ ಪ್ರೇರಣೆ ಮತ್ತು ವೃತ್ತಿಪರ ಕೌಶಲ ಹೆಚ್ಚಿಸುವಲ್ಲಿ ಸಮಾಲೋಚನಾ ಸಭೆ ತುಂಬಾ ಸಹಕಾರಿ.ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲ್ಗೂರ

 ಇಂಡಿ. ಶಿಕ್ಷಕರ ಆಂತರಿಕ ಪ್ರೇರಣೆ ಮತ್ತು ವೃತ್ತಿಪರ ಕೌಶಲ ಹೆಚ್ಚಿಸುವಲ್ಲಿ ಸಮಾಲೋಚನಾ ಸಭೆ ತುಂಬಾ ಸಹಕಾರಿ. ಸಮಾಲೋಚನಾ ಸಭೆಗಳು ಮಕ್ಕಳ ಕಲಿಕೆ ಪ್ರೇರೇಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲ್ಗೂರ  ಹೇಳಿದರು.

ಪಟ್ಟಣದ ಸರಕಾರಿ ಉರ್ದು ಗಂಡ ಮಕ್ಕಳ ಶಾಲೆಯಲ್ಲಿ ಆಶ್ರಯ ಕಾಲೋನಿಯಲ್ಲಿ  ನಡೆದ ಮೂರರಿಂದ ಐದನೇ ತರಗತಿ ಬೋಧಿಸುತ್ತಿರುವ ಶಿಕ್ಷಕರ ಸಮಾಲೋಚನೆ ಸಭೆ ಉದ್ಘಾಟಸಿ ಹಾಗೂ  ಜುಲೈ 2024 ರಿಂದ ಜನವರಿ 2025ರ ವರೆಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದ ಅವರು   ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ತರಬೇತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಶಿಕ್ಷಕರು ಸಮಾಲೋಚನೆ ಸಭೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. 


ಮಕ್ಕಳು ದಿನನಿತ್ಯ ಚಟುವಟಿಕೆಗಳಲ್ಲಿ ತೊಡುಗುವ ಮೂಲಕ ಕಲಿಕೆಯನ್ನು ಸಾಧಿಸಲು ನಿರಂತರ ಪ್ರಯತ್ನ ನಡೆದಿದೆ. ತರಗತಿ ಅಭಿವೃದ್ಧಿ ಮಾಡುವುದು ,ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಶಿಕ್ಷಕರಿಗೆ ಬೋಧನೆಯಲ್ಲಿ ಬರುವ ತೊಂದರೆಗಳು ಸಮಸ್ಯೆ ನಿವಾರಿಸಿಕೊಳ್ಳಲು ಸಮಾಲೋಚನಾ ಸಭೆ ಸಹಕಾರಿಯಾಗಲಿದೆ ಎಂದ ತಿಳಿಸಿದರು.

ಈ ಸಂದರ್ಭದಲ್ಲಿ , ಕ್ಷೇತ್ರ ಸಮನ್ವಾಯ ಅಧಿಕಾರಿಗಳು ಎಸ್. ಆರ್. ನಡುಗಡ್ಡಿ, ಬಿ ಆರ್ ಪಿ ಗಳಾದ ಎ. ಜಿ. ಚೌದ್ರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಅಲ್ತಾಫ್ ಬೋರಾಮಣಿ, ಇಂಡಿ ಸಿಆರ್‌ಪಿ  ಪರವೇಜ ಅಹಮದ್  ಪಟೇಲ್, ಸಾತಲಗಂವ  ಸಿ ಆರ್ ಪಿ ಇಲಾಹಿ  ಸಿಕ್ಕಲ್ಗಾರ್,  ಮತ್ತು ಇಂಗಳಗಿ  ಸಿಆರ್‌ಪಿ ಭಾಷಾ ಕುಮಸಗಿ ಉಪಸ್ಥಿತ ಇದ್ದರು.


 ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ  ಸನ್ಮಾನಿಸಲಾಯಿತು.  ಅತಿಕಾ ಮಾಣಿಕಪುರಿ,  ನಾಜಿಯಾ ಕಲಾದಗಿ, ನಸ್ರಿನ ಬಾನು ತುರ್ಕಿ, ಶಬಾನ ಅತ್ತಾರ್,  ಶಾಹಿಸ್ತಾ ಉಕ್ಕಲಿ, ಫಯಾಜ್ ಅಹ್ಮದ್ ಚೌದರಿ,  ಎಂ. ಡಿ. ಹೆಬ್ಬಾಳ, ಸರಕಾರಿ ನೌಕರರ ಸಂಘದ ನಿರ್ದೇಶಕ  ಅಬುತಾಲಿಬ್ ಹೊಸೂರ್, ಎಂ. ಎಂ. ಅರಬ್ ನಿವೃತ್ತ ಶಿಕ್ಷಕರು ಇವರನ್ನು ಸನ್ಮಾನಿಸಲಾಯಿತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು