ಮಕ್ಕಳ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪೋಷಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ. ಅಬೀದ ಗದ್ಯಾಳ

 ಇಂಡಿ. ಉಮ್ಮೆ ಸುಲೇಮ್ ಮಸೀದಿ ಮತ್ತು ಮದರಸಾ ವತಿಯಿಂದ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು  ಸಮಾರಂಭವನ್ನು ಆಯೋಜಿಸಲಾಯಿತು.


ಈ ಸಂದರ್ಭದಲ್ಲಿ ಇಂಡಿ ಉಪ ವಿಭಾಗಾಧಿಕಾರಿಗಳಾದ ಆಭೀದ ಗದ್ಯಾಳ ಅವರು ಮಾತನಾಡಿ, "ಇಂದಿನ ಯುಗದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸರಿಯಾದ ದಾರಿಯನ್ನು ತೋರಿಸುವುದು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಅತ್ಯಗತ್ಯ.  "ಮಕ್ಕಳ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪೋಷಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ, ಏಕೆಂದರೆ ಶಿಕ್ಷಣಯುಕ್ತ ಸಮಾಜವೊಂದೇ ಪ್ರಗತಿಯ ದಾರಿಯಲ್ಲಿ ಸಾಗಲು ಸಾಧ್ಯ" ಎಂದರು ಹೇಳಿದರು.


ಈ ಸಂದರ್ಭ ಮೌಲಾನಾ ನೂರುದ್ದೀನ್ ಉಮರಿ ಅವರು ವಿದ್ಯಾರ್ಥಿಗಳ ಶಿಸ್ತುಬದ್ಧ ಜೀವನ ಮತ್ತು ಶಿಕ್ಷಕರ ಗೌರವದ ಮಹತ್ವದ ಕುರಿತು ಮಾತನಾಡಿದರು. "ಯಶಸ್ಸಿಗಾಗಿ ಕೇವಲ ಶೈಕ್ಷಣಿಕ ಪ್ರಗತಿಯೇ ಸಾಕಾಗದು  ನೈತಿಕ ಬೆಳೆಸುವಿಕೆಯೂ ಮುಖ್ಯವಾಗಿದೆ. ಶಿಕ್ಷಕರ ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಜವಾಬ್ದಾರಿ, ಏಕೆಂದರೆ ಒಬ್ಬ ಉತ್ತಮ ಶಿಕ್ಷಕವೇ ಉತ್ತಮ ಪೀಳಿಗೆ ನಿರ್ಮಿಸಬಲ್ಲನು.


ಈ ಸಮಾರಂಭದಲ್ಲಿ ಹಾಫಿಝ್, ಡಾಕ್ಟರ್, ಇಂಜಿನಿಯರ್ ಆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪೋಷಕರು, ಶಿಕ್ಷಕರು ಮತ್ತು ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ಸಹಕಾರಿ ಹೆಜ್ಜೆ ಎಂದು ಶ್ಲಾಘಿಸಿದರು.


ಕಾರ್ಯಕ್ರಮಕ್ಕೆ ಮೌಲಾನಾ ತಾಹಿರ್ ಬೇಗ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ ರಹೀಂ ಸಗ್ರಿ, ಮೌಲಾನಾ ಡಿ.ಎಂ. ಅಹ್ಮದ್ ಸಾಬ್ ಉಮರಿ, ಮೌಲಾನಾ ಅಬ್ದುಲ್ ಜಬ್ಬಾರ್ ಉಮರಿ, ಗುಮ್ಮಟ ನಗರಿ ಪತ್ರಿಕೆಯ ಸಂಪಾದಕ ಇರ್ಫಾನ್ ಶೇಖ್, ಪುರಸಭೆ ಉಪಾಧ್ಯಕ್ಷ ಜಹಾಂಗೀರ್ ಸೌದಾಗರ್, ಸತ್ತಾರ್ ಭಾಗವಾನ್, ಜಬ್ಬಾರ್ ಅಣ್ಣಾ ಅರಬ್, ಮಹಮ್ಮದ್ ಬೇಪಾರಿ, ಹಾಫಿಝ್ ಸಿದ್ದೀಕಿ, ಯಾಕೂಬ್ ಮಾಶಳ್ಕರ್, ಅಂಜುಮನ್ ಕಾರ್ಯದರ್ಶಿ ಜಮಾದಾರ್ ಸರ್, ಯಾಕೂಬ್ ನಾಟೀಕರ, ಅಸ್ಲಂ ಪಟೇಲ್, ಪುರಸಭೆ ಸದಸ್ಯ ಮುಸ್ತಾಕ್ ಇಂಡಿಕರ್ ಮತ್ತು ಅನೇಕ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ಮೌಲಾನಾ ಝಿಯಾಉಲ್ ಹಕ್ ಉಮರಿ ನೇಸಾಮತ್ ವಹಿಸಿದರು ಮತ್ತು ಮೌಲಾನಾ ಮುಖ್ತಾರ್ ಉಮರಿ ಧನ್ಯವಾದಗಳನ್ನು ಅರ್ಪಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು