ಉರ್ದು ಭಾಷೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಲ್ಲ, ಅದು ಒಂದು ಸಂಸ್ಕೃತಿ, ಪರಂಪರೆ ಮತ್ತು ಬೌದ್ಧಿಕ ಪರಂಪರೆಯ ಗುರುತು ಕೂಡಾ ಆಗಿದೆ. ಎಂದು ಜೆಒಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಹ ಬಕ್ಷ್ ವಾಲೀಕಾರ

 ಇಂಡಿ: ಉರ್ದು ಭಾಷೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಲ್ಲ, ಅದು ಒಂದು ಸಂಸ್ಕೃತಿ, ಪರಂಪರೆ ಮತ್ತು ಬೌದ್ಧಿಕ ಪರಂಪರೆಯ ಗುರುತು ಕೂಡಾ ಆಗಿದೆ. ಎಂದು ಜೆಒಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಹ ಬಕ್ಷ್ ವಾಲೀಕಾರ ಅವರು ಹೇಳಿದರು.

ಇಂಡಿ ತಾಲ್ಲೂಕಿನ ಇಂಗಳಿಗಿ ಗ್ರಾಮದ ಸರಕಾರಿ ಉರ್ದು ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಉರ್ದು ಶಾಲೆಗಳು ಕೇವಲ ಉತ್ತಮ ಶಿಕ್ಷಣ ನೀಡುವ ಸ್ಥಳವಲ್ಲ, ಅವು ವಿದ್ಯಾರ್ಥಿಗಳ ನೈತಿಕ, ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ."

"ಉರ್ದು ಶಾಲೆಗಳು ನಮ್ಮ ಸಮುದಾಯದ ಮಕ್ಕಳಿಗೆ ಜ್ಞಾನ ಮತ್ತು ಸಾಹಿತ್ಯದ ಬೆಳಕು ಹರಡುತ್ತವೆ. ಇಲ್ಲಿ ಕೇವಲ ಆಧುನಿಕ ಶಿಕ್ಷಣವಲ್ಲ, ವಿದ್ಯಾರ್ಥಿಗಳನ್ನು ಧಾರ್ಮಿಕ, ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೂ ಪರಿಚಯ ಮಾಡಲಾಗುತ್ತದೆ. ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಮತ್ತು ಇತರ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಆದ್ದರಿಂದ, ಶಿಕ್ಷಕರು ಮತ್ತು ಗ್ರಾಮಸ್ಥರು ಒಗ್ಗೂಡಿ ಉರ್ದು ಶಾಲೆಗಳ ಉಳಿವಿಗಾಗಿ ಹೋರಾಟ ಮಾಡಬೇಕು. ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಅವರನ್ನು ಉರ್ದು ಶಾಲೆಗಳಲ್ಲಿ ಪ್ರವೇಶಿಸಬೇಕು ಎಂದರು. 



ಈ ಸಂದರ್ಭದಲ್ಲಿ ಬಶೀರ್ ಇನಾಮದಾರ ಮಾತನಾಡಿ, "ಈಗಿನ ಯುಗದಲ್ಲಿ ಉರ್ದು ಶಾಲೆಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ. ವಿದ್ಯಾರ್ಥಿಗಳ ಸಂಖ್ಯೆಯ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ಆಧುನಿಕ ಶಿಕ್ಷಣ ಸೌಲಭ್ಯಗಳ ಕೊರತೆಯಂತಹ ಸಮಸ್ಯೆಗಳು ಇದೆ. ಇವೆಲ್ಲವನ್ನು ನಿವಾರಿಸಲು ಪೋಷಕರು, ಶಿಕ್ಷಕರು, ಸಾಮಾಜಿಕ ನಾಯಕರು ಮತ್ತು ಶಿಕ್ಷಣ ಸಂಸ್ಥೆಗಳು ಒಂದಾಗಬೇಕಾಗಿದೆ. ನಮ್ಮ ಮಕ್ಕಳನ್ನು ಉರ್ದು ಶಾಲೆಗಳಲ್ಲಿ ಪ್ರವೇಶಿಸುವ ಮೂಲಕ, ನಾವು ಕೇವಲ ಅವರ ಭವಿಷ್ಯವನ್ನು ಮಾತ್ರ ಸುಧಾರಿಸುವುದಲ್ಲ, ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನೂ ಉಳಿಸಬಹುದು."


ಯಾಸೀನ್ ತುರ್ಕಿ ಅವರು ಮಾತನಾಡಿ, "ಅಲ್ಲಾಹ ಬಕ್ಷ್ ವಾಲೀಕರ ಸರ್ ಅವರು ಈ ಶಾಲೆಯ ಯಶಸ್ಸಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ತಾಲ್ಲೂಕಿನ ಅನೇಕ ಶಾಲೆಗಳು ಈ ದಿನಗಳ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ, ಆದರೆ ನಾವು ಒಗ್ಗೂಡಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉರ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಅತೀ ಮನೋಜ್ಞವಾದ ಭಾಷಣಗಳು ಮತ್ತು ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ಮಕ್ಸೂದ್ ಅಹ್ಮದ್ ಮುಲ್ಲಾ ಸದಸ್ಯರು ಅಂಜುಮನ್ ಇಸ್ಲಾಂ ಅಥಣಿ,  ಅವರಿಂದ ಬಹುಮಾನಗಳನ್ನು ನೀಡಲಾಯಿತು, ಮತ್ತು ಅಮಾನುಲ್ಲಾ ಮುಲ್ಲಾ ಕಾರ್ಯದರ್ಶಿ ಅಂಜುಮನ್ ಇಸ್ಲಾಂ ಅಥಣಿ  ಅವರಿಂದ ಮಕ್ಕಳಿಗೆ ಅಲ್ಪ ಉಪಹಾರ ವ್ಯವಸ್ಥೆ ಮಾಡಲಾಯಿತು.


ಈ ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಬು ಅತ್ತಾರ್, ಸಿಆರ್‌ಪಿ ಪ್ರವೇಜ್ ಪಟೇಲ್, ಮುಖ್ಯಗುರುಗಳಾದ  ಕಾಸಿಂ ಮಕಾಂದಾರ್, ರಫೀಕ್ ಜಂಬಗಿ, ಅತೀಕ್ ನಾಗಠಾನ್, ಮುನ್ನಾ ಇಂಡಿಕರ್, ಇಂಡಿ ಅಂಜುಮನ್  ಕಾರ್ಯದರ್ಶಿ ಹುಸೇನ್ ಜಮದಾರ್, ಹುಸೇನ್ ಬೀಪಾರಿ, ಖಲೀಲ್ ಇಂಡಿಕರ್,  ಇಂಗಳಗಿ ಅಂಜುಮನ್ ಇಸ್ಲಾಂ ಅಧ್ಯಕ್ಷ ಹುಸೇನ್ ಅಹಿರಸಂಗ ಶಕೀಲ್ ಮನೋರ್, ಪೈಗಂಬರ್ ಮನೋರ್, ಮದ್ಸರ್ ಬಳಗಾನೂರ, ಕೋಕನಿ ಸರ್, ಇಸ್ಮಾಯಿಲ್ ವಾಲೀಕರ,ಇದ್ದರು. ಈ ಸಮಾರಂಭದ ನಿರುಪಣೆಯನ್ನು ಇಂಡಿ ತಾಲ್ಲೂಕು ಕರಾಟಾ ಕಾರ್ಯದರ್ಶಿ ಮಹಿಬೂಬ  ಪಟೇಲ್ ನೆರವೆಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು