ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

 ನ್ಯಾಯಯುತ ಬೇಡಿಕೆಗಳಿಗೆ ಸದಾ ಸರ್ಕಾರದ ಸ್ಪಂದನೆ 

: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ಸಾರ್ವಜನಿಕ ಜೀವನದಲ್ಲಿ ಲೆಕ್ಕ ಕೇಳುವುದು ,ಲೆಕ್ಕ ಕೊಡುವದು ಸಾಮಾನ್ಯ ಸಂಗತಿ ಇದರಲ್ಲಿ ಯಾವ ವಿಶೇಷ ಇಲ್ಲ. ಇದನ್ನು ಅರಿತುಕೊಂಡು ಸದ್ಗುರು ಶ್ರೀ ಶಾಂತೇಶ್ವರನ ಆಶೀರ್ವಾದದಿಂದ ಸಾರ್ವಜನಿಕರ ಆಶಯದಂತೆ ಲೆಕ್ಕಪತ್ರ ಮಂಡಿಸುವುದು ಕಮಿಟಿಯ ಕರ್ತವ್ಯ ಇದರಲ್ಲಿ ಲೋಪದೋಷಗಳಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಇಂತಹ ನ್ಯಾಯಯುತ ಹೋರಾಟಕ್ಕೆ ಘನ ಕರ್ನಾಟಕ ಸರ್ಕಾರ ಅದರಲ್ಲಿ ವಿಶೇಷವಾಗಿ ಸರಕಾರದ ಪ್ರತಿನಿಧಿಯಾಗಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ ಹೋರಾಟ ಸಮಿತಿಯಲ್ಲಿರುವ ತಾವೆಲ್ಲರೂ ಈಗಾಗಲೇ 17 ದಿನಗಳಿಂದ ಶಾಂತ ರೀತಿಯಿಂದ ಟ್ರಸ್ಟ್ ಕಮಿಟಿ ವಿರುದ್ಧ ಹೋರಾಟ ಮಾಡುತ್ತಿದ್ದೀರಿ ಇದನ್ನು ಕಮಿಟಿಯವರು ಹಾಗೂ ಊರಿನ ಸಾರ್ವಜನಿಕರೆಲ್ಲರೂ ಕೂಡಿಕೊಂಡು ಬಗೆಹರಿಸಬಹುದು ಯಾಕೆಂದರೆ ದೇಶ ದೇಶಗಳ ಮಧ್ಯೆ ಇರುವ ಸಮಸ್ಯೆಯನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಂಡು ಬರುತ್ತಿರುವ ಉದಾಹರಣೆಗಳನ್ನು ನಾವು ಕಾಣುತ್ತೇವೆ ಹೀಗಾಗಿ ಸದ್ಗುರು ಶಾಂತೇಶ್ವರನ ಕೃಪಾಶೀರ್ವಾದದಿಂದ ಕಮಿಟಿಯವರು ಹಾಗೂ ಸಾರ್ವಜನಿಕರೆಲ್ಲರೂ ಕೂಡಿಕೊಂಡು ಈ ಸಮಸ್ಯೆಗೆ ಇತಿಶ್ರೀಯನ್ನು ನೀಡಬಹುದು.ತಾವು ಈಗಾಗಲೇ ಇಂಡಿ ಉಪವಿಭಾಗಾಧಿಕಾರಿಗಳಿಗೆ ಹೋರಾಟದ ಮನವಿ ಪತ್ರವನ್ನು ನೀಡಿದ್ದೀರಿ ಅದನ್ನು ಅವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದಾರೆ ಈ ಬೆಳವಣಿಗೆ ಮದ್ಯೆ ಹೋರಾಟ ಶಾಂತಿಯುತವಾಗಿ ಅಂತ್ಯ ಕಾಣಬೇಕು ಬರಲಿರುವ ದಿನಗಳಲ್ಲಿ ನಡೆಯುವ ಶಾಂತೇಶ್ವರ ಜಾತ್ರೆ ಊರ ಜನರೆಲ್ಲರೂ ಕೂಡಿ ಕೊಂಡು ಅತ್ಯಂತ ಪ್ರಾಂಜಲ ಮನಸಿನಿಂದ ,ಭಕ್ತಿ ಭಾವದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರಬೇಕು ಎಂದರು .ತಾವು ನಮಗೆ  ಮಧ್ಯಪ್ರದೇಶಕ್ಕೆ ಕೋರಿದ್ದೀರಿ ತಮಗೆಲ್ಲರಿಗೂ ಈ ಸಭೆಯ ಮೂಲಕ ತಿಳಿಸುವುದೇನೆಂದರೆ ನಮಗೆ 30 ದಿನಗಳ ಕಾಲಾವಕಾಶ ನೀಡಬೇಕು ಅಷ್ಟರಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ನ್ಯಾಯಯುತ ಹೋರಾಟಕ್ಕೆ ಕರ್ನಾಟಕ ಸರ್ಕಾರದ ಪ್ರತಿನಿಧಿಯಾದ ನಾನು ಸ್ವಂದಿಸುವದು ನನ್ನ ಜವಾಬ್ದಾರಿಯಾಗಿದೆಯಂದರು.


ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಕಂದಾಯ ಉಪ ವಿಭಾಗಾಧಿಕಾರಿಗಳಾದ ಅಭೀದ್ ಗದ್ಯಾಳ ಬರಲಿರುವ ಜಾತ್ರೆಗೆ ತಾವೆಲ್ಲರೂ ಸಹಕಾರಿ ನೀಡಿ ,ತಾವು ನೀಡಿದ ಮನವಿಯನ್ನು ಈಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೇನೆ ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದೆಂದರು. ಸಭೆಯಲ್ಲಿ ಜಿಲ್ಲಾ ನೊಂದಣಿ ಅಧಿಕಾರಿಗಳಾದ ಭಾಗ್ಯಶ್ರೀ ಕುಂಬಾರ ಮಾತನಾಡಿ ಟ್ರಸ್ಟ ಕಮಿಟಿಯ ಪೂರ್ವಾಪರ ದಾಖಲೆಗಳ ಮಾಹಿತಿಯನ್ನು ಕಲೆಹಾಕಲು ನಮಗೆ ಸಮಯ ಅವಕಾಶ ಕೊಡಿ ಖಂಡಿತವಾಗಿ ಮಾಹಿತಿ ನೀಡುತ್ತೇವೆ ಎಂದರು.

ಸಭೆಯಲ್ಲಿ ಅನೇಕ ಸಾರ್ವಜನಿಕರು ಕಮಿಟಿ ವಿರುದ್ಧ ಆರೋಪಗಳನ್ನು ಮಾಡಿದರು.ಕೊನೆಗೆ ಹೋರಾಟ ಸಮಿತಿಯ ಸದಸ್ಯರಾದ  ಶಂಕರಗೌಡ ಪಾಟೀಲ, ಮಲ್ಲಪ್ಪ ಹದಗಲ, ಭೀಮನಗೌಡ ಪಾಟೀಲ,ಸಾತಪ್ಪ ತೆನಹಳ್ಳಿ,ಮಹದೇವ ಬಾರಿಕಾಯಿ,ಸಿದ್ದಣ್ಣ ತಾಂಬೆ,ಶಾಂತುಗೌಡ ಬಿರಾದಾರ, ರವಿಗೌಡ ಪಾಟೀಲ, ನೀಲಕಂಠಗೌಡ ಪಾಟೀಲ,ರಾಜುಗೌಡ ಪಾಟೀಲ, ಅನಿಲ ಜಂಪಾ,ಸತೀಶ ಕುಂಬಾರ,ರಾಜು ಪತಂಗೆ,ರಾಜು ಕುಲಕರ್ಣಿ,ಚನ್ನು ಬೋಡಿ,ಪಾಪು ಕಿತ್ತಲಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಹೋರಾಟ ಸಭೆಯಲ್ಲಿ ನೂರಾರು ಜನ ಸಾರ್ವಜನಿಕರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು