ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!
ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!
ಇಂಡಿ ಪುರಸಭೆ ಇನ್ನು ನಗರಸಭೆ
ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ-3, 9 ಮತ್ತು 361 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ವಿಜಯಪುರ ಜಿಲ್ಲೆಯ ಇಂಡಿ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ಇಂಡಿ ನಗರಸಭೆ ಪ್ರದೇಶವೆಂದು ಉದ್ಘೋಷಿಸಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ವಿಜಯಪುರ ಜಿಲ್ಲೆಯ ಇಂಡಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಲಾಗಿತ್ತು.
ಇಂಡಿ: ತಾಲೂಕು ಕೇಂದ್ರವಾದ ಇಂಡಿ ಜನತೆಗೆ ಉಲ್ಲಾಸ ತಂದ ಬೆಳವಣಿಗೆ ಇಂದು ಅಧಿಕೃತವಾಗಿ ಪ್ರಕಟವಾಗಿದೆ. ಇಂದು ಕರ್ನಾಟಕ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಇಂಡಿ ಪುರಸಭೆಯನ್ನ ನಗರಸಭೆಯಾಗಿ ಮೇಲ್ದರ್ಜೆಗಯಾಗಿ ಮಾಡಲಾಗಿದೆ ಎಂದು ವಿಷಯ ತಿಳಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಹಾಗೂ ಪಟ್ಟಣದ ಬಸ್ವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಮಹತ್ವದ ಯಶಸ್ಸಿನ ಹಿಂದೆ ಸ್ಥಳಿಯ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ಸತತ ಪರಿಶ್ರಮ ಮತ್ತು ಬದ್ಧತೆ ಇದ್ದು.
ಇಂಡಿ ಪುರಸಭೆ ಇಷ್ಟು ದಿನ ಕೇವಲ ಪುಟ್ಟ ಉದ್ದಿಮೆಗಳ ಆಡಳಿತಕ್ಕೆ ಸೀಮಿತವಾಗಿತ್ತು. ಆದರೆ ಪಟ್ಟಣದ ಜನಸಂಖ್ಯೆ, ವಾಸ್ತವಿಕ ನಗರೀಕರಣ, ಹಾಗೂ ಮೂಲಭೂತ ಸೌಲಭ್ಯಗಳ ಅಗತ್ಯತೆ ಹೀಗಾಗಿಯೆ ನಗರಸಭೆಯ ಸ್ಥಾನಮಾನ ಅತಿ ಅಗತ್ಯವಿತ್ತು. ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಹಲವು ಬಾರಿ ವಿಧಾನಸಭೆಯಲ್ಲಿ, ಸರ್ಕಾರದ ಮಟ್ಟದಲ್ಲಿ ಹಾಗೂ ಇಲಾಖೆಯ ಅಧಿಕಾರಿಗಳ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ, ಅಧಿಕೃತ ತಾಂತ್ರಿಕ ವರದಿ ಮಂಡಿಸಿ, ವಿಚಾರದ ಹತ್ತಿರವಾಗಿದ್ದ ಹಲವಾರು ಅಡಚಣೆಗಳನ್ನೂ ಸಮರ್ಥವಾಗಿ ನಿವಾರಣೆ ಮಾಡಿದರು.
ಈ ತೀರ್ಮಾನದೊಂದಿಗೆ ಈಗ ಇಂಡಿಗೆ ಹೆಚ್ಚಿನ ಅನುದಾನಗಳು ಲಭ್ಯವಾಗುವ ಸಾಧ್ಯತೆ ಇದೆ. ನಗರಸಭೆಯಾಗಿ ರೂಪಾಂತರವಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ನಗರಾಭಿವೃದ್ಧಿ ಯೋಜನೆಗಳ ಲಾಭವನ್ನು ಇಂಡಿ ಪಡೆಯಬಹುದು. ಇದರಿಂದಾಗಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ಬೀದಿ ಬೆಳಕು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳಲ್ಲಿ ಗುಣಾತ್ಮಕ ಸುಧಾರಣೆಗೆ ದಾರಿ ಬಿಡುತ್ತದೆ.
ಶಾಸಕರ ಈ ಸಾಧನೆಗೆ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಜನಸಾಮಾನ್ಯರು ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಪ್ರಶಾಂತ ಕಾಳೆ, ಸತೀಶ ಕುಂಬಾರ, ಪುರಸಭೆ ಸದಸ್ಯರಾದ ಅಯುಬ ಬಾಗವಾನ, ದೇವೆಂದ್ರ ಕುಂಬಾರ, ಶಬ್ಬಿರ ಖಾಜಿ,ಅನೀಲಗೌಡ ಬಿರಾದಾರ, ಅಸ್ಲಂ ಕಡಣಿ, ಉಮೇಶ ದೇಗಿನಾಳ, ಭೀಮಣ್ಣ ಕೌಲಗಿ, ಜಟ್ಟೆಪ್ಪ ರವಳಿ, ಶ್ರೀಕಾಂತ ಕೋಡಿಗನೂರ, ಅತೀಕ್ ಮೋಮಿನ, ಉಸ್ಮಾನ ಶೇಖ್, ಯಮನಾಜಿ ಸಾಳೊಂಕೆ,ಮುನ್ನಾ ಡಂಗೆ, ಹಮೀದ ಮುಲ್ಲಾ, ಹುಸೇನ ಜಮಾದಾರ, ಖಲಿಲ್ ಇಂಡಿಕರ, ಇಮ್ರಾನ ಮಕಾನದಾರ, ಸೇರಿದಂತೆ ಅನೇಕರು ಇದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ