ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು
ಇಂಡಿ-ನಗರದ ಮಿನಿವಿಧಾನಸೌಧಾ ೨ನೇ ಮಹಡಿಯಲ್ಲಿ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ನೂತನ ಕಚೇರಿಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ತಾಲೂಕಾ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಪ್ರಶಾಂತ ಕಾಳೆ ಜಂಟಿಯಾಗಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಮತನಾಡಿ ಕರ್ನಾಟಕ ರಾಜ್ಯ ತನ್ನದೆಯಾದ ಇತಿಹಾಸ ಹೊಂದಿದ್ದು ಶಾಂತಿ,ಪ್ರೀತಿ , ವಿಶ್ವಾಸಕ್ಕೆ ಸಮ-ಸಮಾಜದ ನಿರ್ಮಾಣಕ್ಕೆ ೧೨ನೇ ಶತಮಾನದ ಅಣ್ಣ ಬಸವಣ್ಣನ ಸಂದೇಶ ಹಾಗೂ ಮಹಾತ್ಮಾಗಾಂಧಿಜಿಯವರ ಮತ್ತು ಅಂಬೇಡ್ಕರವರ ಜಾತ್ಯಾತೀತ ಸಮಾಜ ಕಟ್ಟುವಲ್ಲಿ ಶ್ರಮಿಸಲಾಗುತ್ತಿದೆ. ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಡವರ ದೀನ ದರ್ಬಲರ ಆಸರೆಯಾಗಿದ್ದು ಕರ್ನಾಟಕ ರಾಜ್ಯ ಹಸಿವು ಮುಕ್ತ ಮಾಡಿದ ಏಕೈಕ ಮುಖ್ಯ ಮಂತ್ರಿ ಇಂದು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿಯಲ್ಲಿ ಕುಂಟಿತವಾಗಿರಬಹುದು ಆದರೆ ಇದರಿಂದ ಸಾಕಷ್ಟು ಬಡಜನರಿಗೆ ಅನುಕೂಲವಾಗಿರುವ ಸಮಾಧಾನ ನನಗಿದೆ. ತಾಲೂಕಿನಲ್ಲಿ ಸರ್ವವಿಧದಲ್ಲಿ ಸುಧಾರಣೆ ಮಾಡಿರುವೆ. ಮಳೆ ಸಕಾಲದಲ್ಲಿ ಆಗಿರುವುದು ನಿಜ ಆದರೆ ಸರಕಾರ ರೈತರಿಗೆ ವಿತರಣೆ ಮಾಡಿದ ತೋಗರಿ ಬೀಜ ಕಳಪೆ ಮಟ್ಟದಾಗಿರುವುದರಿಂದ ಸರಿಯಾದ ಇಳುವರಿ ಇಲ್ಲದಿರುವುದು ಕಣ್ಣಾರೆ ಕಂಡಿದ್ದೇನೆ ಸರಕಾರ ಇಂತಹ ಕಷ್ಟದ ಸಂಧರ್ಬದಲ್ಲಿ ರೈತರ ಸಹಾಯಕ್ಕೆ ಬರಬೇಕು , ಬರುವ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದು ರೈತರಿಗೆ ಪ್ರಮಾಣಿಕ ನ್ಯಾಯ ಒದಗಿಸುತ್ತೇನೆ ಎಂದರು.
ಇಲಿಯಾಸ ಬೋರಾಮಣಿ,ಎಂ.ಆರ್ ಪಾಟೀಲ ಮಾತನಾಡಿದರು.
ಬಾಕ್ಸ ಹಸಿದವರ ನೋವು ಹಸಿದವರಿಗೆ ಗೊತ್ತು ಇಂದು ಗ್ಯಾರಂಟಿ ಯೋಜನೆಯಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಕೇವಲ ಅಭಿವೃದ್ದಿ ಅಷ್ಠೆ ಮಾಡಿಲ್ಲ ಇಡೀ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ೨೦೨೩ರ ಚುನಾವಣಾ ಪ್ರಚಾರದಲ್ಲಿಸಾರ್ವಜನಿಕರಿಗೆ ಭರವಸೆ ನೀಡಿದ ಗ್ಯಾರಂಟಿ ಯೋಜನೆಗಳು ಬದ್ದತೆಯಿಂದ ಇಡೇರಿಸಿದ ಸರಕಾರ ಕಾಂಗ್ರೆಸ್. ನಮ್ಮ ಸಮುದಾಯಕ್ಕೆ ಶಾಸಕರು ಪ್ರತಿಹಂತದಲ್ಲಿ ಕಾಳಜಿ ಮಾಡಿದ್ದಾರೆ. ನಮ್ಮ ಸಮಾಜ ಅರಿವಿನ ಸಮಾಜ ಒಂದು ಸಣ್ಣ ಸಹಾಯ ಮಾಡಿದರೆ ಜೀವನ ಪೂರ್ತಿ ಮರೆಯುವುದಿಲ್ಲ. ಡಾ.ಬಿ.ಆರ್ ಅಂಬೇಡ್ಕರವರಿಗೆ ಉನ್ನತ ಶಿಕ್ಷಣ ಕಲಿಯಲು ವಿದೇಶಕ್ಕೆ ಹೋಗಲು ಸಹಾಯ ಮಾಡಿದ ಸಾಹು ಮಹಾರಾಜರನ್ನು ಸದಾ ಸ್ಮರಿಸುತ್ತೇವೆ ಇಂತಹ ವಂಶಸ್ಥರಾದ ನಾವು ಮುಂಬರುವ ದಿನಗಳಲ್ಲಿ ನಮ್ಮ ಜನಾಂಗದವರಿಗೆ ಬೇರೆ ವಿಧದಿಂದ ಸಹಾಯ ಮಾಡಿದರೆ ಅದರಲ್ಲಿ ಸಂತೋಷಪಡುತ್ತೇವೆ.
ತಾಲೂಕಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಪ್ರಶಾಂತ ಕಾಳೆ. ಜಿಲ್ಲಾ ಅಧ್ಯಕ್ಷ ಗ್ಯಾರಂಟಿ ಯೋಜನೆಯ ಇಲಿಯಾಸ ಬೋರಾಮಣಿ, ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಶೀಲ್ದಾರ ವಿಜಯಕುಮಾರ ಕಡಕಭಾವಿ, ತಾ.ಪಂ ಅಧಿಕಾರಿ ನಂದೀಪ ರಾಠೋಡ,ಹೆಸ್ಕಾಂ ಅಧಿಕಾರಿ ಮೇಂಡೆಗಾರ, ಜಾವೀದ ಮೋಮಿನ್, ಎಂ.ಆರ್ ಪಾಟೀಲ, ಬಿ.ಕೆ ಪಾಟೀಲ, ಭೀಮಣ್ಣಾ ಗೌಲಗಿ, ಗುಣ್ಣಗೌಡ ಪಾಟೀಲ, ನಿರ್ಮಲಾ ತಳಕೇರಿ,ಸಣ್ಣಪ್ಪ ತಳವಾರ,ಮಹೇಶ ಹೊನ್ನಬಿಂದಗಿ, ಸತೀಶ ಹತ್ತಿ, ಸಂಜು ನಾಯ್ಕೋಡಿ, ಸಂಕೇತ ಜ್ಯೋಶಿ, ಶೈಲಜಾ ಜಾಧವ ಸೇರಿದಂತೆ ತಾಲೂಕಾ ವಿವಿಧ ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ