ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ
ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ ಹೇಳಿದರು.
ಅವರು ಪಟ್ಟಣದ ಗುರು ಭವನದಲ್ಲಿ ಅಲ್ಲಾಬಕ್ಷ ವಾಲಿಕಾರ ನಿರ್ದೇಶಕರು ಜೆಒಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನಿವೃತ್ತಿ ಶಿಕ್ಷಕರಿಗೆ ಸನ್ಮಾನ ಹಾಗೂ ಸರಕಾರಿ ನೌಕರರ ಸಂಘದ ನಾಮ ನಿರ್ದೇಶಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಮ್ಮ ಶಿಕ್ಷಕರು ಇಂದು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತಿದ್ದು. ಅಲ್ಲಾಬಕ್ಷ ವಾಲಿಕಾರ ಅವರು ಪ್ರತಿವರ್ಷ ಶಿಕ್ಷಕರಿಗೆ ಟ್ಯಾಕ್ಸ್ ಫಾರ್ಮ್, ಹಾಗೂ ಶಿಕ್ಷಕರ ವೇತನದ ಮಾಹಿತಿಯನ್ನು ಮೆಸೇಜ್ ಕಳಿಸುವುದು ಸೇರಿದಂತೆ ಅವರು ಶಿಕ್ಷಕರಿಗಾಗಿ 24 ಗಂಟೆ ಶಿಕ್ಷಕರ ಸೇವೆ ಮಾಡುತಿದ್ದ. ಇವತ್ತು ಶಿಕ್ಷಕರು ಸಾಮಾಜದಲ್ಲಿ ಜಾಗೃತ ರಾಗಿರಬೇಕು ಒಗಟ್ಟಿಯಾಗಿದ್ದರೆ ಮಾತ್ರ ನಾವು ಯಶಸ್ಸು ಆಗಲು ಸಾಧ್ಯ.
ಅಲ್ಲಾಬಕ್ಷ ವಾಲಿಕಾರ ನಮ್ಮ ಮುಂದೆ ಬೆಳೆದು ಬಂದ ವ್ಯಕ್ತಿ ಅವರು ಶಿಕ್ಷಕರ ಸಮಸ್ಯೆಗಳನ್ನು ಗಮನಿಸಿ ನಮ್ಮ ಜಿಲ್ಲೆಯ ಶಿಕ್ಷಕರಿಗೆ ಅವರು ನಾವು ಯೋಚಿಸುವುದುಕಿಂಕ ಹೆಚ್ಚು ಸ್ಪಂದಿಸುವ ಕಾರ್ಯ ಮಾಡಿದ್ದಾರೆ. ಅವರು ಶಿಕ್ಷಕರಿಗೆ ಅನೇಕ ರೀತಿಯಲ್ಲಿ ಸಹಯಾ ಸಹಕಾರ ಮಾಡಿದಾರೆ. ಅವರ ಮಾಡದಿರುವ ಕಾರ್ಯಗಳನ್ನು ಇವತ್ತು ಅವರಿಗೆ ಎಲ್ಲಾ ಹುದ್ದೆಯನ್ನು ಪಡೆದು ಶಿಕ್ಷಕರ ಸೇವೆ ಮಾಡುತ್ತಿದಾರೆ. ಅಲ್ಲಾಬಕ್ಷ ವಾಲಿಕಾರ ಇವತ್ತು ಎಲ್ಲಾ ನಿವೃತ್ತಿ ಶಿಕ್ಷಕರನ್ನು ಒಟ್ಟುಗೂಡಿಸಿ ನಮ್ಮನು ವೇದಿಕೆ ಮೇಲೆ ಕುರಿಸಿ ಸನ್ಮಾನಸಿದಾರೆ. ಅವರು ಈ ಕಾರ್ಯಗಳು ಅವರು ಒಳ್ಳೆಯ ವಿಚಾರಗಳನ್ನು ಹೇಳುತ್ತದೆ.
ಕ್ಷೇತ್ರ ಸಮನವಯಾಧಿಕಾರಿ ಎಸ್.ಆರ್. ನಡಗಡ್ಡಿ ಮಾತನಾಡಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವುದು ಎಂದರೆ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಗೌರವಿಸುವುದು. ಶಿಕ್ಷಕರು ಸಮಾಜದ ಪ್ರಗತಿಗೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ, ನಿವೃತ್ತಿಯ ನಂತರವೂ ಅವರನ್ನು ಸನ್ಮಾನಿಸುವುದು ಒಂದು ಒಳ್ಳೆಯ ಸಂಪ್ರದಾಯ ಎಂದು ಹೇಳಿದರು.
ಈ ರೀತಿಯ ಕಾರ್ಯಕ್ರಮಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಹಾಯಕವಾಗಿವೆ. ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗೌರವಿಸುವುದು ಮತ್ತು ಪ್ರೋತ್ಸಾಹಿಸುವುದು ಬಹಳ ಮುಖ್ಯ.
ಅಂಬಣ್ಣ ಸುಣಗಾರ ನಿವೃತ್ತ ಶಿಕ್ಷಕರು ಮಾತನಾಡಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದು ಒಳ್ಳೆಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಗೌರವ ಸಲ್ಲಿಸುವುದರ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಿದ ಇತರ ವ್ಯಕ್ತಿಗಳನ್ನು ಗುರುತಿಸಿ, ಸನ್ಮಾನಿಸಲಾಗುತ್ತದೆ. ಇದು ಸಮಾಜಕ್ಕೆ ಒಂದು ಮಾದರಿಯಾಗಿದೆ.
ಜಿಒಸಿಸಿ ಬ್ಯಾಂಕ್ ನಿರ್ದೇಶಕರು ಅಲ್ಲಾಬಕ್ಷ ವಾಲಿಕಾರ, ಉಪಾಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಮ್.ಎಮ್.ವಾಲಿಕಾರ, ಎಸ್.ವಿ.ಹರಳಯ್ಯ, ನಿಜಣ್ಣಾ ಕಾಳೆ, ಅಣ್ಣಾರಾಯ ಬಿರಾದಾರ, ಪಿ.ಎಸ್.ಚಾಂದಕವಟೆ, ಬಸವರಾಜ ಮೇತ್ರಿ, ರವಿ ಗಿಣ್ಣಿ, ಎ.ಎಮ್. ಹೂಸುರ, ಎಫ್.ಎಂ.ಬೋರಾಮಣಿ, ಟಿ.ಕೆ.ಜಂಬಗಿ, ಸಿ.ಎಸ್.ಝಳಕಿ, ಶ್ರೀಮತಿ ಜೆ.ಎಚ್.ತೆಲಗ, ಬಿ.ಎ.ಇನಾಮದಾರ, ಟಿ.ಎ.ವಠಾರ, ವಿ.ಪಿ.ಅರವತ್ತು, ಪಿ.ಜಿ.ಕಲ್ಮನಿ, ಎಸ್.ಎನ್.ಕೋಳೆಕರ, ಪ್ರಕಾಶ ಐರೋಡಗಿ, ಎಮ್.ಸಿ. ಗಿರಣಿವಡ್ಡರ, ಎಸ್.ಎಚ್.ಏಳಗಾಂವ, ಯಾಶೀನ ತುರ್ಕಿ, ರಫೀಕ ಇಂಡಿಕರ, ಲಾಲಬಾಶಾ ಜುನೇದಿ, ಅಮೀರ ಇಂಡಿಕರ, ಸುಮೈಯ್ಯಾ ಪಠಾಣ, ಉಮರ್ ಶೇಖ್ ಇದ್ದರು.
ನಿರುಪಣೆ ಜಯರಾಮ ಚವ್ಹಾಣ, ಸ್ವಾಗತ ಎಲ್.ಕೆ. ಇಂಗಳೆ, ವಂದನಾರಪಣೆ ಆನಂದ ಕೆಂಬಾವಿ, ಪ್ರಾಸ್ತಾವಿಕ ನಡಿ ಕಾಂತು ಇಂಡಿ ಮಾಡಿದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ