Your voice
ಇಂಡಿ. ನೂತನವಾಗಿ ಇಂಡಿ, ಸಿಂದಗಿ ಹಾಗೂ ಚಡಚಣ ತಾಲೂಕಿಗೆ ಡಿವೈಎಸ್ಸಿಯಾಗಿ ಶ್ರೀಧರ ದೊಡ್ಡಿ ಇವರಿಗೆ ರಯಿಸ್ ಆಸ್ಟೇಕರ ಇವರಿಂದ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ರಯಿಸ್ ಆಸ್ಟೇಕರ ದಕ್ಷ ಅಧಿಕಾರಿಗಳು ನಮ್ಮ ಭಾಗಕ್ಕೆ ಬಂದಿದ್ದು ನಮ್ಮ ಸೌಭಾಗ್ಯ. ಸಾಹೇಬರು ಇಂಡಿ ಪಟ್ಟಣದಲ್ಲಿ ಈ ಮೊದಲು ಸಿಪಿಐ ಯಾಗಿ ಕರ್ತವ್ಯವನ್ನು ನಿರ್ವಹಿಸಿ ತಾಲೂಕಿನಲ್ಲಿ ಅಪರಾಧಗಳ ತಡೆದು ಹಾಗೂ ಶಾಂತಿ ಕಾಪಾಡಿಸಿ ದಕ್ಷತೆ ಮೆರೆದಿದ್ದಾರೆ. ಈಗ ಮತ್ತೆ ನಮ್ಮ ಭಾಗಕ್ಕೆ ಬಂದಿದ್ದು ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗುತ್ತದೆ ಎಂದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ