ಅಂಬೇಡ್ಕಕರ್ ಭಾವಚಿತ್ರಕ್ಕೆ ಅವಮಾನ

ಯಾರೋ ದುಷ್ಕರ್ಮಿಗಳು  ಅಂಬೇಡ್ಕಕರ್ ಭಾವಚಿತ್ರಕ್ಕೆ ರಾತ್ರಿ ಚಪ್ಪಲಿ ಹಾರ ಹಾಕಿ ಪರಾರಿ.



ಇಂಡಿ. ತಾಲೂಕಿನ ಮಾಸ್೯ನಹಳ್ಳಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಸಮಯದಲ್ಲಿ ಅಲ್ಲಿಯ ಅಂಬೇಡ್ಕರ್ ವೃತದಲ್ಲಿರುವ ಭಾವಚಿತ್ರಕ್ಕೆ ಯಾರೋ ದುಷ್ಕಮಿ೯ಗಳು ರಾತ್ರಿ ಸಮಯದಲ್ಲಿ ಚಪ್ಪಲಿ ಹಾರ ಹಾಕಿ ಪರಾರಿಯಾದ ಘಟನೆ ನಡೆದಿದೆ.ಬೆಳಗ್ಗೆ 8 ಗಂಟೆ ಸುಮಾರಿಗೆ ಅಲ್ಲಿಯ ಸಾವ೯ಜನಿಕರಿಗೆ ತಿಳಿದ ತಕ್ಷಣ  ಅನೇಕ ದಲಿತ ಸಂಘಟನಾಕಾರರು ಸ್ಥಳಕ್ಕಾಗಮಿಸಿ ,ದುಷ್ಕಮಿ೯ಗಳನ್ನು ಕೂಡಲೆ ಬಂಧಿಸಬೇಕೆಂದು ಕೆಲವು ಸಮಯವರೆಗೆ ಪ್ರತಿಭಟನೆ ಪ್ರಾರಂಭಿಸಿದರು.ನಂತರ ಸ್ಥಳಕ್ಕೆ ಡಿ.ವಾಯ.ಎಸ್ಪಿ ಸಾಹೇಬರು ಮತ್ತು ಸಿಬ್ಬಂದಿ ವಗ೯ದವರು ಆಗಮಿಸಿ,ದುಷ್ಕಮಿ೯ಗಳನ್ನು ಯಾರೆ ಆಗಲಿ ಅವರನ್ನು ಕೂಡಲೇ ಬಂಧಿಸಿ ,ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.  ಭಾವಚಿತ್ರಕ್ಕೆ  ಹಾಕಿರುವ ಚಪ್ಪಲಿ ಹಾರವನ್ನು ತೆಗೆಸಿ ಕ್ಷೀರಾಭೀಷೇಕ ಮಾಡಿಸಿ ವಂದನೆ ಸಲ್ಲಿಸಲಾಯಿತು.ಹಾಗೂ ಇಂಡಿ ಮಾನ್ಯ ತಹಶೀಲ್ದಾರ ಸಾಹೇಬರು ಅಂಬೇಡ್ಕರ್  ವೃತ ಕ್ಕೆ ಸಿಸಿ ಕ್ಯಾಮರ ,ಅಂಬೇಡ್ಕರ್  ಪುತ್ಥಳಿ ಕೊಡಿಸುವ ವ್ಯವಸ್ಥೆ ಮಾಡಿಸುವುದಾಗಿ ಹೇಳಿದರು. ನಂತರ ದಲಿತರು ಶಾಂತರೀತಿಯಿಂದ ಪ್ರತಿಭಟನೆಯನ್ನು ಹಿಂಪಡಿಯಲಾಯಿತು.


ಈ ಪ್ರತಿಭಟನೆಯಲ್ಲಿ  ದಲಿತ ಮುಖಂಡರಾದ ಜೈಭೀಮ ನಾಯ್ಕೋಡಿ ,  ರಾಜು  ಯಂಟಮಾನ  ,ಸೋಮು   ಮೇಕೆರಿ  ,ಹರೀಶ ಎಂಟಮನ,ಶಿವಾನಂದ ಹರಿಜನ,ಶಿವು ಮೇಲಿನಮನಿ, ರಾಮು  ಕಾಂಬಳೆ,ಮಂಜು ಯಂಟಮಾನ,ಸಂಜು  ಮೇಲನಮನಿ  ,ಶಶಿ  ನಾಯ್ಕೋಡಿ ,ಚಂದ್ರಕಾಂತ ಮೇಲಿನಮನಿ ,ಅಶೋಕ  ಬಬಲಾದ ,ವಿನಾಯಕ ಗುಣಸಾಗರ ,ನಿತ್ಯಾಂದ ಕಾಂಬಳೆ,ಸಿದ್ದಪ್ಪ ಮಾದರ,ಮುತ್ತು ಮಾಡ್ಯಾಳ,ಕೃಷ್ಣ  ತಳ್ಳೋಳ್ಳಿ ,ಬಾಬು ದೇವರಮನಿ ,ರಾಘು ದೇವರಮನಿ  ,ಹೊನ್ನಪ್ಪ ಸೋಂಪೂರ ,ಶಂಕರ  ಕಾಂಬಳೆ,ಪರಶು  ಉಕ್ಕಲಿ,ದತ್ತು ಬನಸೋಡೆ ,ಗುರುಸಿದ್ಧ ಗುಂದಗಿ ,ಮರೇಪ್ಪ ಬನಸೋಡೆ,   ಸಾವಿರಕ್ಕೂ ಹೆಚ್ಚು ದಲಿತ ಸಂಘಟನಾಕಾರರು ಭಾಗವಹಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು