ಇಂಡಿ ನೂತನ ಜಿಲ್ಲೆಗಾಗಿ ಮುಸ್ಲಿಂ ಧರ್ಮ ಗುರುಗಳ ಮನವಿ
ಇಂಡಿ ಜಿಲ್ಲೆಗಾಗಿ ಮನವಿ
ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆ ಹಾಗೂ ಮುಂದುವರೆದ ಸಂವಿಧಾನದ ವಿಧಿ 371(ಜೆ) ಗೆ ಇಂಡಿ ತಾಲೂಕು ಹಾಗೂ ಸಿಂದಗಿ ತಾಲೂಕಿಗೆ ಹಕ್ಕೋತ್ತಾಯ ಮಾಡುವ ಬಗ್ಗೆ ಇಂಡಿ ತಾಲೂಕಿನ ಎಲ್ಲಾ ಮುಸ್ಲಿಂ ಧರ್ಮ ಗುರುಗಳ ನೇತೃತ್ವದಲ್ಲಿ ನಗರದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ ವತಿಯಿಂದ ಮುಖ್ಯಮಂತ್ರಿ ಅವರಿಗೆ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಧರ್ಮ ಗುರುಗಳಾದ ಮೌಲಾನಾ ಶಾಕೀರ್ ಹುಸೇನ ಕಾಶ್ಮಿ , ಮೌಲಾನಾ ಜಿಯಾ ಉಲ್ ಹಕ್ ಉಮರಿ , ಮುಫ್ತಿ ಅಬ್ದುಲ್ ರೆಹಮಾನ್ ಅರಬ್, ಮಾತನಾಡಿ ವಿಜಯಪುರ ಜಿಲ್ಲೆಯಲ್ಲಿ ಇದೀಗ 13 ತಾಲೂಕಗಳಿದ್ದು ಆ ಪ್ರಕಾರ ಈಗಾಗಲೇ ಇಂಡಿ ತಾಲೂಕು ಸಬ್ - ಡಿವಿಷನ್ ಆಗಿರುವುದರಿಂದ ಆಡಳಿತಾತ್ಮಕ ದೃಷ್ಠಿಯಿಂದ ಅವಶ್ಯಕ ಸಂಪನ್ಮೂಲ, ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳೊಂದಿಗೆ ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಸಂಭಂದಿತ ಕೊಗಿಗನುಗುಣವಾಹಗಿ ಉದ್ದೇಶಿತ ಪರಿಸರದಲ್ಲಿ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟು ಇರುತ್ತೆವೆ. ದಿರ್ಘಕಾಲಿನ ಬರ ಪೀಡಿತ ಪ್ರದೇಶಕ್ಕೆ ಶಾಶತ್ವ ಪರಿಹಾರ ಹಾಗೂ ಅತ್ಯಂತ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಸಂಬಂಧಿತ ನಂಜುಡಪ್ಪ ವರದಿ ಅನುಷ್ಟಾಣಕ್ಕಾಗಿ ಇಂಡಿ ತಾಲೂಕಾ ಸಬ್ ಡಿವಿಷನಯನ್ನು ಪ್ರತೇಕ ಜಿಲ್ಲಾ ಕೇಂದ್ರವಾಗಿ ಘೋಷಿಸಲು ಆಗ್ರಹಿಸುತ್ತೆವೆ.
ಇಂಡಿ ಜಿಲ್ಲೆಗೆ ಬೇಕಾದ ಎಲ್ಲಾ ವಾತಾರಣ ಸೃಷ್ಠಿ ಮಾಡಿದ್ದಾರೆ. ಭೋಗೋಳಿಕವಾಗಿ ವಿಸ್ತೀರ್ಣ ಹೊಂದಿದೆ ಜನಸಂಖ್ಯೆ ಹೆಚ್ಚಾಗಿದ್ದು. ರಾಷ್ಟ್ರೀಯ ಹೆದ್ದಾರಿ , ಸರಕುಸಾಗಾಣಿಕೆಗೆ ರೈಲು ನಿಲ್ದಾಣ, ಲಿಂಬೆ ಅಭಿವೃದ್ದಿ ಮಂಡಳಿ ,ಉಪವಿಭಾಗ ಕೃಷಿ ವಿಜ್ಞಾನ ಕೇಂದ್ರ ಹೇಲಿಪ್ಯಾಡ , ಮಿನಿವಿಧಾನಸೌಧಾ ಹೀಗೆ ಜಿಲ್ಲಾ ಕೇಂದ್ರವಾಗಲು ಬೇಕಾದ ಎಲ್ಲಾ ಸೌಲಭ್ಯಗಳು ಇರುವದರಿಂದ ಕೂಡಲೆ ಮುಖ್ಯ ಮಂತ್ರಿಗಳು ಇಂಡಿ ಜಿಲ್ಲೆಯಾಗಿಸಿ ಗಡಿ ಭಾಗ ಮತ್ತಷ್ಟು ಅಭಿವೃದ್ದಿಪಡಿಸಬೇಕು ಎಂದರು.
ಮೌಲಾನಾ ಅಲ್ಲಾಬಕ್ಷ ಉಜ್ಜನಿ, ಹಾಫೀಜ್ ಮೊಹಮ್ಮದ್ ಭಾಷಾ ಬಾಗವಾನ, ಹಾಫೀಜ್ ಫೀರೋಜ್ ಬಾಗವಾನ, ಹಾಫೀಜ ಅಬ್ದುಲ್ ಅಝೀಜ್ ಫೈಝಿ ಇನಾಮದಾರ, ಹಾಫೀಜ್ ಮಹೇಬೂಬ, ಡಾ. ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷರು ಮೊಹಮ್ಮದ್ ಅಷ್ಪಕ್ ಕೊಂಕಣಿ, ಕಾರ್ಯದರ್ಶಿ ಬಾದಾಷಾ ಬೋರಮಣಿ, ಸದ್ಯಸರು ಮೈನುದ್ದಿನ್ ಶೇಖ, ಸಮಾಜ ಸೇವಕರು ಹಸನ ಮುಜಾವರ, ಮೊಹಮ್ಮದ್ ನಾಸಿರ್ ಇನಾಮದಾರ, ಮೌಲಾನಾ ದಾದಾಹಾಯಾತ ನಾಯಿಕೋಡಿ, ಹುಸೇನ್ ಬಾಷಾ ಮಿರಜಕರ, ಹಾಗೂ ಇಂಡಿ ತಾಲ್ಲೂಕಿನ ಮುಸ್ಲಿಂ ಧರ್ಮದ ಎಲ್ಲ ಗುರುಗಳು ಉಪಸ್ಥಿತರಿದ್ದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ