ವಚನಗಳು ಶರಣರ ಅನುಭಾವದ ದಿವ್ಯಬೆಳಕು-ಸಂತೋಷ ಬಂಡೆ

 ವಚನಗಳು ಶರಣರ ಅನುಭಾವದ ದಿವ್ಯಬೆಳಕು-ಸಂತೋಷ ಬಂಡೆ



ಇಂಡಿ: ವೃತ್ತಿ ಪ್ರವೃತ್ತಿಯನ್ನು ಒಂದಾಗಿಸಿಕೊಂಡು ಬದುಕಿನ ಶಿಸ್ತನ್ನು ಸಮಾಜಕ್ಕೆ ನೀಡಿದ ಶರಣರ ಸಂದೇಶಗಳು ಗೀತಮಾತುಗಳಾಗಿದ್ದು, ಅವುಗಳು ಅನುಭಾವದ ದಿವ್ಯಬೆಳಕು ಮತ್ತು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.

           ಅವರು ಪಟ್ಟಣದ ಶ್ರೀ ಬಸವರಾಜೇಂದ್ರ ದೇವಸ್ಥಾನದಲ್ಲಿ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವ ರಾಜೇಂದ್ರ ಗಜಾನನ ಮಂಡಳಿ,ಇವರ ಸಹಯೋಗದಲ್ಲಿ ಜರುಗಿದ 88 ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದ ನಿಮಿತ್ತ "ಶರಣರ ವಚನಗಳ ಸಂದೇಶಗಳು" ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.

         ಶರಣ ಸಂದೇಶಗಳು ಪ್ರಸಕ್ತ ಸನ್ನಿವೇಶಕ್ಕೆ, ಸಮಕಾಲೀನ ಸವಾಲುಗಳಿಗೆ ಸಿದ್ದೌಷದವಿದ್ದಂತಾಗಿವೆ. ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ, ಕಾಯಕ, ದಾಸೋಹ, ಸಾಮಾಜಿಕ ನ್ಯಾಯದಂತಹ ಮೌಲ್ಯಗಳ ಮೂಲಕ ಶರಣರು ಪರಿಶುದ್ಧ ಬದುಕಿಗೆ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು.

           ದಿವ್ಯಸಾನಿಧ್ಯ ವಹಿಸಿದ್ದ ಅರ್ಜುಣಗಿ ಜೈನಾಪುರ ಮಠದ ಷ ಬ್ರ ರೇಣುಕ ಶಿವಾಚಾರ್ಯರು ಮಾತನಾಡಿ,

ವಚನಗಳು ಭವಿಷ್ಯದ ಬದುಕಿನ ಸೂತ್ರಗಳಾಗಿವೆ. ತಾರತಮ್ಯವಿಲ್ಲದ ಜೀವನವನ್ನು ಸಾಕ್ಷೀಕರಿಸಿದ ವಚನಗಳು ಇಂದು ನಾಳೆಗೂ ನಿತ್ಯ ಸತ್ಯಗಳಾಗಿವೆ ಎಂದರು.



          ಸತ್ಸಂಗ ಸಮಿತಿಯ ಅಧ್ಯಕ್ಷ ಪ್ರೊ ಐ ಬಿ ಸುರಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನ ಸಾರ್ಥಕತೆಯ ಒಳ ನೋಟಗಳನ್ನು ನೀಡಿದ ವಚನಗಳು ಮನುಕುಲದ ಸಂಪತ್ತು. ಇಂದಿನ ಪೀಳಿಗೆ ಅವನ್ನು ಅರಿತು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

         ಲಿಂ.ಜಾನನಗೌಡ ಕ ಪಾಟೀಲ ಸ್ಮರಣಾರ್ಥ ನಿವೃತ್ತ ಉಪನ್ಯಾಸಕ ಪ್ರೊ ಎಮ್ ಜೆ ಪಾಟೀಲ ಕಾರ್ಯಕ್ರಮ ಪ್ರಾಯೋಜಿಸಿ, ಅನ್ನದಾಸೋಹ ವ್ಯವಸ್ಥೆ ಮಾಡಿದರು.

          ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ಆರ್ ವ್ಹಿ ಪಾಟೀಲ, ಪ್ರೊ ಎ ಎಸ್ ಗಾಣಿಗೇರ, ಜಿ ಎಸ್ ವಾಲಿ,ಬಿ ಎಸ್ ಪಾಟೀಲ,ಕೆ ಜಿ ನಾಟೀಕಾರ, ಎಸ್ ಎಸ್ ಈರನಕೇರಿ, ಎಚ್ ಎಸ್ ಎಳೆಗಾಂವ, ಜಿ ಎಸ್ ಪಾಟೀಲ,ಎಸ್ ವಿ ಹೂಗಾರ, ಸಿ ಎಂ ಉಪ್ಪಿನ, ಬಿ ಆರ್ ಬಿರಾದಾರ, ಶ್ರೀಮತಿ ಎನ್ ಟಿ ಸಂಗಾ ಹಾಗೂ ಜಯಶ್ರೀ ಪತ್ತಾರ ಸೇರಿದಂತೆ ಅನೇಕರು  ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು