ಜಾತಿ ವ್ಯವಸ್ಥೆಯ ವಿರುದ್ಧ ಕುಲ ಕುಲವೆಂದು ಹೊಡೆದಾಡಿದಿರಿ, ನಿಮ್ಮ ಕುಲದ ನೆಲೆಯಾವುದು ಬಲ್ಲಿರಾ?
ಜಾತಿಯ ವಾಸನೆಯನ್ನು ಬಿಟ್ಟು ಮನುಷ್ಯರಂತೆ ಬದುಕಬೇಕು ಎಂದು ತಮ್ಮ ಕೀರ್ತನಗಳ ಮುಖಾಂತರ ಉಪದೇಶ ಕೊಟ್ಟ ಮಹಾನ್ ಸಂತ ಕನಕದಾಸರು.
ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಕನಕದಾಸರ ಜಯಂತಿ ದಿನಾಚರಣೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮಹಾವಿದ್ಯಾಲಯದ ಗ್ರಂಥಪಾಲಕರಾದ ಶ್ರೀ.ರಾಘವೇಂದ್ರ ಇಂಗನಾಳ ಅವರು ಮಾತನಾಡುತ್ತಾ “ಜಾತಿಯ ವಾಸನೆಯನ್ನು ಬಿಟ್ಟು ಮನುಷ್ಯರಂತೆ ಬದುಕಬೇಕು ಎಂದು ತಮ್ಮ ಕೀರ್ತನಗಳ ಮುಖಾಂತರ ಉಪದೇಶ ಕೊಟ್ಟ ಮಹಾನ್ ಸಂತ ಕನಕದಾಸರು. ಜಾತಿ ವ್ಯವಸ್ಥೆಯ ವಿರುದ್ಧ ಕುಲ ಕುಲವೆಂದು ಹೊಡೆದಾಡಿದಿರಿ, ನಿಮ್ಮ ಕುಲದ ನೆಲೆಯಾವುದು ಬಲ್ಲಿರಾ? ಎಂದು ಪ್ರಶ್ನಿಸಿದ ದಾಸ ಶ್ರೇಷ್ಠ ಕನಕದಾಸರಿಗೆ ನಾವು ಗೌರವ ಸಲ್ಲಿಸಬೇಕಾದರೆ ಮೊದಲು ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಬಿ.ಜಾಧವ ಮಾತನಾಡುತ್ತ “ದಾಸ ಸಾಹಿತ್ಯ ಪರಂಪರೆಯ ಮೇರುಶಿಖರವಾಗಿರುವ ಕನಕದಾಸರು ಕ್ಲಿಷ್ಟ ವಿಷಯಗಳು ಹಾಗೂ ವೈಚಾರಿಕ ಚಿಂತನೆಗಳನ್ನು ಆಡುಭಾಷೆಯಲ್ಲಿ ಜನರಿಗೆ ತಲುಪಿಸುವ ಮೂ¯ಕ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಅವರ ವೈಚಾರಿಕ ಕೀರ್ತನೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ.” ಎಂದು ಹೇಳಿದರು
ಈ ಕಾರ್ಯಕ್ರಮದ ನಿರೂಪಣೆಯನ್ನು ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶ್ರೀಶೈಲ, ವಂದನಾರ್ಪಣೆಯನ್ನು ಡಾ.ವಿಶ್ವಾಸ ಕೊರವಾರ ಅವರು ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, ಡಾ.ಸಿ.ಎಸ್.ಬಿರಾದಾರ, ಡಾ.ಶ್ರೀಕಾಂತ ರಾಠೋಡ, ಶ್ರೀ.ಮಲ್ಲಿಕಾರ್ಜುನ ಕೋಣದೆ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ, ಪರಶುರಾಮ ಅಜಮನಿ, ಧಾನಮ್ಮ ಪಾಟೀಲ, ಪ್ರಶಾಂತ ಹಿರೇಮಠ, ಆನಂದ ತಾಂಬೆ ಪ್ರೀತಿ ಘಾಳಿಮಠ, ಜನಾಬಾಯಿ ಪಾರೆಕರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ