ಹಿಂದು ಹಾಗೂ ಮುಸ್ಲಿಂ ಸಮಾಜದ ವತಿಯಿಂದ ಪವಿತ್ರ ಸ್ಥಳ ಮಕ್ಕಾ ಯಾತ್ರೆಗೆ ತೆರಳುತ್ತಿರುವ ಯಾತ್ರಿಯರಿಗೆ ಸನ್ಮಾನ.
ಹಿಂದು ಹಾಗೂ ಮುಸ್ಲಿಂ ಸಮಾಜದ ವತಿಯಿಂದ ಪವಿತ್ರ ಸ್ಥಳ ಮಕ್ಕಾ ಯಾತ್ರೆಗೆ ತೆರಳುತ್ತಿರುವ ಯಾತ್ರಿಯರಿಗೆ ಸನ್ಮಾನ.
ಇಂಡಿ. ತಾಲೂಕಿನ ಇಂಗಳಗಿ ಗ್ರಾಮದ ಮುಸ್ಲಿಂ ಮುಖಂಡರಾದ ಗುಡುಸಾಬ ಅಹಿರಸಂಗ ಇವರು ತಮ್ಮ ಧರ್ಮ ಪತ್ನಿಯೊಂದಿಗೆ ಪವಿತ್ರ ಸ್ಥಳ ವಾದ ಮಕ್ಕಾ ಹಾಗೂ ಮದಿನಾ ಉಮ್ರಾ ಮಾಡಲು ಹೊರಡುತ್ತಿದ್ದಾರೆ. ಇವರಿಗೆ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ಹಾಗೂ ಹಿಂದು ಭಾಂದವರು ಸನ್ಮಾನ ಮಾಡಿರು.
ಈ ಸಂದರ್ಭದಲ್ಲಿ ಬಿ.ಎಲ್.ಇ.ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸಮಾಜ ಸೇವಕರಾದ ಹಸನ ಮುಜಾವರ ಮಾತನಾಡಿ ಮುಸ್ಲಿಮರ ಪವಿತ್ರವಾದ ಸ್ಥಳ ವಾದ ಮಕ್ಕಾಮದಿನಾದಲ್ಲಿ ಎಲ್ಲರ ಪ್ರಾಥನೆ ಹಾಗೂ ದುವಾ ಅಲ್ಲಾಹನು ಖಂಡಿತವಾಗಿ ಸ್ವಿಕಾರನಾಡುತ್ತಾನೆ ಆದ್ದರಿಂದ ತಾವು ಉಮ್ರಾ ಮಾಡಿ ನಮ್ಮ ಗ್ರಾಮ ಹಾಗೂ ದೇಶದಲ್ಲಿ ಶಾಂತಿ ಗಾಗಿ ಹಾಗೂ ನಮ್ಮ ದೇಶದ ಅಭಿವೃದ್ಧಿಗಾಗಿ ಪ್ರಾಥನೆ ಮಾಡಿ ನಿಮ್ಮ ಈ ಯಾತ್ರೆ ಯಶಸ್ಸುವಾಗಳಿ ಎಂದು ದೇವರಲ್ಲಿ ಪ್ರಾಥನೆ ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಅಂಜುಮನ ಅಧ್ಯಕ್ಷ ಹುಸೇನ್ ಅಹಿರಸಂಗ, ಕಾರ್ಯದರ್ಶಿ ಶಕೀಲ ಮನೂರ, ಸದ್ದಾಂ ಹುಸೆನ ಜಮಾದಾರ, ಸುಭಾಶ ತೋರತ, ಅನ್ನಪ್ಪ ಅಹಿರಸಂಗ, ಪ್ರಭು ಹೊಸಮನಿ, ಸಿದ್ದು ಹೊಸಮನಿ, ಉಮೇಶ ಚೌಹಾನ, ಶಫೀಕ ಪಟೇಲ್ ಮಸಳಿ, ಬಾಬು ಅತ್ತಾರ, ಸಾದೀಕ ಬಿರಾದಾರ, ಬಾಶಾ ಸಾಬ ಮನೂರ, ಮಹಿಬೂಬ ಪಟೇಲ್,ಬಾಬು ಪಟೇಲ, ಬಾಬು ಮಸಳಿ,ಹುಸೇನ ನರವೆ, ಚಾಂದ ಶೇಖ್, ರಹೆಮಾನ ಮುಲ್ಲಾ, ಸಮಾಜ ಸೇವ ಹಸನ ಮುಜಾವರ, ಸೇರಿದಂತೆ ಗ್ರಾಮದ ಅನೇಕ ಜನರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ