ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾಲೇಜು ಶಿಕ್ಷಣ ಬಹುಮುಖ್ಯವಾಗಿದ್ದು,
2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮದ ವರದಿ
ದಿನಾಂಕ 22.11.2024 ರಂದು ನಗರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಜಿ.ಆರ್. ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ೨೦೨೪-೨೫ ನೇ ಸಾಲಿನ ಶೈಕ್ಷಣಿಕ ವರ್ಷದ ಬಿಎ/ಬಿಕಾಂ/ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ರೆಡ್‌ಕ್ರಾಸ್ ಸ್ಕೌಟ್ಸ್ಸ ಘಟಕಗಳ ಉದ್ಘಾಟನಾ ಸಮಾರಂಭ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಅಶೋಕಕುಮಾರ ಜಾಧವ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ದೇವರಹಿಪ್ಪರಗಿ, ಇವರು ಮಾತನಾಡುತ್ತ ‘ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾಲೇಜು ಶಿಕ್ಷಣ ಬಹುಮುಖ್ಯವಾಗಿದ್ದು, ಕಠಿಣ ಪ್ರಯತ್ನ ಮಾಡಿದ್ದಾದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ವಿದ್ಯಾರ್ಥಿಗಳು ಸಂಸ್ಕೃತಿ ಆಧಾರಿತ ಕೆಲವು ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸುವದರ ಜೊತೆಗೆ ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಕಲಿಕೆಯಲ್ಲಿ ಕುತೂಹಲಗಳಾಗಿದ್ದರೆ ವಿಚಾರ ಶಕ್ತಿ, ಆಸಕ್ತಿ, ಸಕಾರಾತ್ಮಕ ಚಿಂತನೆ ಹೆಚ್ಚಿಸುತ್ತದೆ. ನಾವೇಲ್ಲರೂ ಒಂದೇ ಎಂಬ ಭಾವನೆ ಬೆಳೆಯುತ್ತವೆ. ಪರೋಪಕಾರಾಯ ವಹಾಂತಿ ನದ್ಯಃ ಪರೋಪಕಾರಾಯ ದುಹಾಂತಿಗಾವಃ ಪರೋಪಕಾರಾಯ ಫಲಾಂತಿವೃಕ್ಷಃ ಪರೋಪಕಾರಾರ್ಥಂ ಇದಂ ಶರೀರಂ ಎಂಬ ವಾಣಿಯಂತೆ ಪರೋಪಕಾರ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸಿದ್ದಣ್ಣ ತಾಂಬೆ ಸಹ ನಿರ್ದೇಶಕರು ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ. ನೀಲಕಂಠಗೌಡ ಪಾಟೀಲ ಉಪಧ್ಯಾಕ್ಷರು ಎಸ್.ಎಸ್.ವ್ಹಿ.ವ್ಹಿ ಸಂಘ ಇಂಡಿ ಇವರು ‘ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಹೊರಹಾಕಲು ನಮ್ಮ ಮಹಾವಿದ್ಯಾಲಯ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪ್ರತಿ ವರ್ಷದಂತೆ ಈ ವರ್ಷವೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತರಬೇಕೆಂದು’ ನುಡಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ.ಜಯಪ್ರಸಾದ ಡಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕುಮಾರಿ. ಲಕ್ಷಿö್ಮ ಜಾಡರ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ.ಬಿ.ಹೆಚ್.ಬಗಲಿ, ಪ್ರಾರ್ಥನಾಗೀತೆಯನ್ನು ಕುಮಾರಿ. ಪ್ರೀಯಂಕಾ ಬಗಲಿ & ಭಾಗ್ಯಶ್ರೀ ಬಿರಾದಾರ, ಸ್ವಾಗತ & ಪರಿಚಯವನ್ನು ಪ್ರಾಚಾರ್ಯರಾದ ಡಾ.ಎಸ್.ಬಿ.ಜಾಧವ, ಮಾಲಾರ್ಪಣೆಯನ್ನು ಶ್ರೀ.ಶ್ರೀಶೈಲ, ವಂದನಾರ್ಪಣೆಯನ್ನು ವಿದ್ಯಾರ್ಥಿ ಪ್ರತಿನಿಧಿಯಾದ ಕುಮಾರಿ ಲಕ್ಷಿö್ಮ ಜಾಡರ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹ ಪ್ರಾಧ್ಯಾ¥ಕರಾದ ಡಾ.ಆನಂದ ನಡವಿನಮನಿ, ಸಹಾಯಕ ಪ್ರಾಧ್ಯಾಪಕರಾದ ಡಾ. ವಿಶ್ವಾಸ್. ಕೋರವಾರ, ಡಾ. ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, ಡಾ. ಸಿ.ಎಸ್.ಬಿರಾದಾರ, ಡಾ. ಶ್ರೀಕಾಂತ ರಾಠೋಡ, ಶ್ರೀ ಎಮ್.ಆರ್ ಕೋಣದೆ, ಗ್ರಂಥಪಾಲಕರಾದ ಶ್ರೀ.ರಾಘವೇಂದ್ರ ಇಂಗನಾಳ, ಶೃತಿ ಪಾಟೀಲ, ಶ್ವೇತಾ ಕಾಂತ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ, ಶ್ರೀ.ಪರಶುರಾಮ ಅಜಮನಿ, ನಸ್ರೀನ ವಾಲಿಕಾರ, ಧಾನಮ್ಮ ಪಾಟೀಲ, ಬೋಧಕೇತರ ಸಿಬ್ಬಂದಿ & ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ