ಮಾದಕ ದ್ರವ್ಯಗಳ ಸೇವೆನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ: ಡಾ.ಅಶೋಕ ಜಾಧವ
ಮಾದಕ ದ್ರವ್ಯಗಳ ಸೇವೆನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ: ಡಾ.ಅಶೋಕ ಜಾಧವ
ದಿನಾಂಕ ೨೩-೧೧-೨೦೨೪ ರಂದು ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿÂಜ್ಯ ಹಾಗೂ ಶ್ರೀ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯ ಇಂಡಿಯಲ್ಲಿ ಎನ್‌ಎಸ್‌ಎಸ್ ಘಟಕ, ರೆಡ್‌ಕ್ರಾಸ್ ಘಟಕÀ & ಎಬಿವ್ಹಿಪಿ ಘಟಕ ಇಂಡಿ ಅಡಿಯಲ್ಲಿ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮ ಆಚರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಅಶೋಕಕುಮಾರ ಜಾಧವ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ದೇವರಹಿಪ್ಪರಗಿ, ಇವರು ಮಾತನಾಡುತ್ತ ‘ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ೨೦೨೦ ರಲ್ಲಿ ಪ್ರಾರಂಭಿಸಿದ ಕಾರ್ಯಕ್ರಮವನ್ನು ೨೭೨ ಅತ್ಯಂತ ದುರ್ಬಲ ಜಿಲ್ಲೆಗಳ ಗುರಿಯೊಂದಿಗೆ ಪ್ರಾರಂಭಿಸಲಾಯಿತು. ಇದು ಈಗ ದೇಶಾದ್ಯಂತ ೩೭೨ ಜಿಲ್ಲೆಗಳಲ್ಲಿ ೩.೧೦ ಕೋಟಿ ಯುವ ವ್ಯಕ್ತಿಗಳು ಸೇರಿದಂತೆ ೯.೫೦ ಕೋಟಿ ಜನರನ್ನು ಮತ್ತು ೩ ಲಕ್ಷಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತಲುಪಿದೆ. ಎನ್‌ಎಮ್‌ಬಿಎ ಮಾದಕ ವ್ಯಸನದ ಅಪಾಯಗಳನ್ನು ಒತ್ತಿಹೇಳುವ ವಿವಿಧ ಚಟುವಟಿಕೆಗಳನ್ನು ನಡೆಸಿದೆ. ಮಾದಕ ವ್ಯಸನವನ್ನು ನಿಭಾಯಿಸುವಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಉತ್ತೇಜಿಸಲು ಮತ್ತು ಆರೋಗ್ಯಕರ, ಉತ್ಪಾದಕ ಸಮಾಜವನ್ನು ಉತ್ತೇಜಿಸಲು ಸಮುದಾಯದ ಒಳಗೊಳ್ಳುವಿಕೆಗೆ ಕಾರ್ಯಕ್ರಮವು ಆದ್ಯತೆ ನೀಡುತ್ತದೆ. ಮಾದಕ ದ್ರವ್ಯಗಳ ಸೇವೆನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ’ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಬಿ.ಜಾಧವರವರು ಮಾತನಾಡುತ್ತ ‘ಇಡೀ ಜಗತ್ತು ಈ ಪಿಡುಗನ್ನು ಎದುರಿಸುತ್ತಿದೆ ಮತ್ತು ಮಾದಕ ವ್ಯಸನವು ವ್ಯಸನಿ, ವ್ಯಕ್ತಿ, ಕುಟುಂಬ ಮತ್ತು ಸಮಾಜದ ದೊಡ್ಡ ವರ್ಗದ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ ಮತ್ತು ಗಂಭೀರ ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಔಷಧದ ಬೇಡಿಕೆಯನ್ನು ಕಡಿಮೆ ಮಾಡಲು ಕಡ್ಡಾಯಗೊಳಿಸಲಾಗಿದೆ. ಇದು ಸಮಸ್ಯೆಯ ವ್ಯಾಪ್ತಿಯ ಮೌಲ್ಯಮಾಪನ, ತಡೆಗಟ್ಟುವ ಕ್ರಮ, ಚಿಕಿತ್ಸೆ ಮತ್ತು ವ್ಯಸನಿಗಳ ಪುನರ್ವಸತಿ, ಮಾಹಿತಿಯ ಪ್ರಸರಣ ಮತ್ತು ಸಾರ್ವಜನಿಕ ಜಾಗೃತಿ ಸೇರಿದಂತೆ ಮಾದಕ ವ್ಯಸನ ತಡೆಗಟ್ಟುವಿಕೆಯ ಎಲ್ಲಾ ಅಂಶಗಳನ್ನು ಸಮನ್ವಯಗೊಳಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಡಿ-ಡಿಕ್ಷನ್ ಸೆಂಟರ್‌ಗಳನ್ನು ನಡೆಸಲು ಕಡ್ಡಾಯವಾಗಿದೆ. ದೇಶಾದ್ಯಂತ ಎನ್‌ಜಿಒಗಳಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ ಎಂದು ಶ್ರೀ ಕಟಾರಿಯಾ ಹೇಳಿದರು. ಈ ಸಂದರ್ಭದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು’ ಎಂದು ತೀಳಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಆಯ್‌ಕ್ಯೂಎಸಿ ಸಂಯೋಜಕರಾದ ಡಾ.ಜಯಪ್ರಸಾದ ಡಿ, ಸ್ವಾಗತ ಡಾ. ಪಿ.ಕೆ.ರಾಠೋಡ, ವಂದನಾರ್ಪಣೆಯನ್ನು ಉಪನ್ಯಾಸಕಿಯಾದ ಶೃತಿ ಬಿರಾದಾರ ಅವರು ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಆನಂದ ನಡವಿನಮನಿ, ಡಾ. ವಿಶ್ವಾಸ್. ಕೋರವಾರ, ಡಾ.ಸುರೇಂದ್ರ ಕೆ, ಶ್ರೀ ಶ್ರೀಶೈಲ, ಡಾ. ಸಿ.ಎಸ್.ಬಿರಾದಾರ, ಶ್ರೀ ಶ್ರೀಕಾಂತ ರಾಠೋಡ, ಶ್ರೀ ಎಮ್.ಆರ್ ಕೋಣದೆ, ಶ್ರೀ ರಾಘವೇಂದ್ರ ಇಂಗನಾಳ, ಶೃತಿ ಪಾಟೀಲ, ಶ್ವೇತಾ ಕಾಂತ, ಪಂಕಜಾ ಕುಲಕರ್ಣಿ, ನಸ್ರೀನ ವಾಲಿಕರ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು & ಎಬಿವ್ಹಿಪಿ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ