ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು’ ಒಂದು ದಿನದ ಕಾರ್ಯಗಾರದ.
‘ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು’ ಒಂದು ದಿನದ ಕಾರ್ಯಗಾರದ.
ದಿನಾಂಕ: ೨೭-೧೧-೨೦೨೪ ರಂದು ನಗರದ ಎಸ್.ಎಸ್.ವ್ಹಿ.ವ್ಹಿ ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಂ.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ & ವಾಣಿಜ್ಯಶಾಸ್ತç ವಿಭಾಗದ ವತಿಯಿಂದ ‘ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು’ ಒಂದು ದಿನದ ಕಾರ್ಯಗಾರ ಆಚರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ.ಸಿದ್ದನಗೌಡ, ಮುಖ್ಯ-ವ್ಯವಸ್ಥಾಪಕರು, ಕೆನೆರಾ ಬ್ಯಾಂಕ್ ಇಂಡಿ, ಇವರು ಮಾತನಾಡುತ್ತ ಬ್ಯಾಂಕಿಂಗ್ ವಲಯದ ಸುಧಾರಣೆ ಭಾರತದಲ್ಲಿನ ಬ್ಯಾಕಿಂಗ್ ವಲಯದ ಸುಧಾರಣಿಯು ೧೯೯೧ರಲ್ಲಿ ಜಾರಿಗೊಳಿಸಲಾದ ವ್ಯಾಪಕ ಆರ್ಥಿಕ ಸುಧಾರಣಿಗಳ ಒಂದು ಭಾಗವಾಯಿತು. ನರಸಿಂಮ್ ಸಮಿತಿಯು ೧೯೯೧ ಮತ್ತು ೧೯೯೮ರಲ್ಲಿ ಸಲ್ಲಿಸಿದ ಎರಡು ವರದಿಗಳು ಕಳೆದ ಕೆಲವು ವರ್ಷಗಳ ಬ್ಯಾಕಿಂಗ್ ವಲಯದ ಸುಧಾರಣೆಗಳ ಮೇಲೆ ಭಾರಿ ಪ್ರಭಾವ ಬೀರಿವೆ. ಈ ಹಿಂದೆ ಬ್ಯಾಂಕಿಂಗ್ ವಲಯದ ಕಾರ್ಯದಕ್ಷತೆಮತ್ತು ಲಾಭ ಗಳಿಕೆಯು ಭಾರೀ ಹಾನಿಗೊಳಗಾಗಿತ್ತು.ಇದರಿಂದಾಗಿ ಬ್ಯಾಕಿಂಗ್ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆ ತರಬೆಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಈ ಕಾರಣದಿಂದಾಗಿ ಸರ್ಕಾರವು ಬ್ಯಾಕಿಂಗ್ ವಲಯದಲ್ಲಿ ಸ್ಪರ್ದೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ವ್ಯಾಪಕ ಮರುಸಂಘಟನೆ ಮತ್ತು ಸುಧಾರಣೆ ಕೈಹಾಕಿತು. ಈ ಉದ್ದೆಶಕ್ಕಾಗಿ ಸರ್ಕಾರವು ಆಗಸ್ಟ್ ೧೪, ೧೯೯೧ರಲ್ಲಿ ಎಂ.ನರಸಿಮ್ ಅಧ್ಯಕ್ಷತೆಯ ಒಂಬತ್ತು ಸದಸ್ಯ ಸಮಿತಿಯನ್ನು ನೇಮಿಸಿತು. ಈ ಸಮಿತಿಯು ೧೯೯೧ರ ನವೆಂಬರ್‌ನಲ್ಲಿ ತನ್ನ ಅಂತಿಮ ವರದಿಯನ್ನು ನೇಮಿಸಿತು. ಈ ಸಮಿತಿಯು ೧೯೯೧ರ ನವೆಂಬರ್‌ನಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿತು. ಮತ್ತೊಮ್ಮೆ ೧೯೯೮ರಲ್ಲಿ ಸರ್ಕಾರವು ಎಂ.ನರಸಿAಮ್ ಅಧ್ಯಕ್ಷತೆಯ ಇನ್ನೊಂದು ಬ್ಯಾಕಿಂಗ್ ವಲಯದ ಸುಧಾರಣಾ ಸಮಿತಿಯನ್ನು ರಚಿಸಿತು. ಈ ಸಮಿತಿಯು ಏಪ್ರಿಲ್ ೧೯೯೮ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಈ ಎರಡು ವರದಿಗಳು ಚರಿತ್ರರ್ಹ ದಾಖಲಾತಿಗಳಾಗಿದ್ದು ಬ್ಯಾಕಿಂಗ್ ವಲಯದ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಿವೆ.’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷಸ್ಥಾನನವನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಬಿ.ಜಾಧವ ಮಾತನಾಡುತ್ತ ‘ಭಾರತೀಯ ಬ್ಯಾಂಕಿಂಗ್ ಕ್ಷೇತ್ರವನ್ನು ಸ್ಥೂಲವಾಗಿ ಶೆಡ್ಯೂಲ್ಡ್ ಬ್ಯಾಂಕ್‌ಗಳು ಮತ್ತು ನಾನ್ ಶೆಡ್ಯೂಲ್ಡ್ ಬ್ಯಾಂಕ್‌ಗಳಾಗಿ ವರ್ಗೀಕರಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, ೧೯೩೪ ರ ಎರಡನೇ ಶೆಡ್ಯೂಲ್‌ನಲ್ಲಿ ಸೇರಿಸಲಾದ ಎಲ್ಲಾ ಬ್ಯಾಂಕುಗಳು ಶೆಡ್ಯೂಲ್ಡ್ ಬ್ಯಾಂಕ್‌ಗಳಾಗಿವೆ. ಈ ಬ್ಯಾಂಕುಗಳು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು ಮತ್ತು ಶೆಡ್ಯೂಲ್ಡ್ ಕೋ-ಆಪರೇಟಿವ್ ಬ್ಯಾಂಕ್‌ಗಳನ್ನು ಒಳಗೊಂಡಿರುತ್ತವೆ. ಪರಿಶಿಷ್ಟ ಸಹಕಾರಿ ಬ್ಯಾಂಕುಗಳು ಪರಿಶಿಷ್ಟ ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಪರಿಶಿಷ್ಟ ನಗರ ಸಹಕಾರಿ ಬ್ಯಾಂಕುಗಳನ್ನು ಒಳಗೊಂಡಿರುತ್ತವೆ.’ ಎಂದು ಹೇಳಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಸಹಾಯಕ ಪ್ರಾಧ್ಯಾಪಕರಾದ ಡಾ. ಜಯಪ್ರಸಾದ್ ಡಿ, ಸ್ವಾಗತ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ. ಪಿ.ಕೆ.ರಾಠೋಡ, ವಂದನಾರ್ಪಣೆಯನ್ನು ಸಹಾಯಕ ಪ್ರಾಧ್ಯಾಪಕರಾದ ಶ್ರೀ ಎಮ್.ಆರ್ ಕೋಣದೆ ಅವರು ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಸಿಬ್ಬಂದಿಗಳಾದ ಶ್ರೀ.ಅಂಬರೀಶ ಮೇತ್ರಿ, ಶ್ರೀ.ಶಶಿಧರ ಬಾಪ್ರಿ, ಪ್ರವೀಣ ನಮ್ಮ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಆನಂದ ನಡವಿನಮನಿ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ವಿಶ್ವಾಸ ಕೋರವಾರ, ಡಾ.ಸುರೇಂದ್ರ ಕೆ, ಶ್ರೀ.ಶ್ರೀಶೈಲ, ಡಾ. ಸಿ.ಎಸ್.ಬಿರಾದಾರ, ಡಾ.ಶ್ರೀಕಾಂತ ರಾಠೋಡ ಶ್ರೀ.ಆರ್.ಪಿ.ಇಂಗನಾಳ, ಶೃತಿ ಪಾಟೀಲ, ಶ್ರೀಮತಿ.ಶ್ವೇತಾ ಕಾಂತ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ, ಶ್ರೀ.ಪರಶುರಾಮ ಅಜಮನಿ, ಧಾನಮ್ಮ ಪಾಟೀಲ, ಬೋಧಕೇತರ ಸಿಬ್ಬಂದಿ & ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ