ಅಸಾಧ್ಯವಾದ ಕೆಲಸಗಳನ್ನು ಸಾಧ್ಯ ಮಾಡುವ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ.

ವಿಜಯಪುರ, ಡಿ. 09: ಅಸಾಧ್ಯವಾದ ಕೆಲಸಗಳನ್ನು ಸಾಧ್ಯ ಮಾಡುವ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.


ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂದಾಜು ರೂ. 160 ಲಕ್ಷ ವೆಚ್ಚದ ಹೊಸ ಜಿನುಗು ಕೆರೆ(ಸೈಟ್- 3) ನಿರ್ಮಾಣ ಕಾಮಗಾರಿಗೆ ಇಂದು ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.


ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಿದ ನಂತರ ಜಿಲ್ಲೆಗೆ ಮತ್ತಷ್ಟು ನೀರು ಹಂಚಿಕೆಯಾಗಲಿದ್ದು, ನೀರಾವರಿ ಕ್ಷೇತ್ರವೂ ವಿಸ್ತರಣೆಯಾಗಲಿದೆ.  ನೀರಾವರಿ, ರಸ್ತೆ, ಗುಣಮಟ್ಟದ ವಿದ್ಯುತ್ ಪೂರೈಕೆ, ಶಿಕ್ಷಣ ಕ್ಶೇತ್ರದ ಸುಧಾರಣೆ ಮೂಲಕ ಎಂ. ಬಿ. ಪಾಟೀಲರು ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ.  ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನರ ಜೀವನಮಟ್ಟ ಮತ್ತಷ್ಟು ಸುಧಾರಿಸಲಿದ್ದು, ರೈತರು ಆರ್ಥಿಕವಾಗಿ ಹೆಚ್ಚು ಸದೃಢರಾಗಲಿದ್ದಾರೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮುಖಂಡರಾದ ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹೇಶ ಗೌಡಪ್ಪಗೋಳ, ಅಲ್ಲಿಸಾಬ ಖಡಕೆ, ಪ್ರಕಾಶ ಹೂಗಾರಕರ, ಸಂಜು ಕಾಖಂಡಕಿ, ಸಂಕುಗೌಡ ಪಾಟೀಲ, ಚಂದ್ರಶೇಖರ ಸೀತಿಮನಿ, ಮಲ್ಲಿಕಾರ್ಜುನ ಪರಸನ್ನವರ, ಮಲ್ಲು ಹಿರೇಕುರಬರ, ಸುಖದೇವ ಯಕ್ಕುಂಡಿ, ಚಂದು ಸಿದರೆಡ್ಡಿ. ಗ್ರಾ. ಪಂ. ಕಾರ್ಯದರ್ಶಿ ರಫೀಕ ವಾಲಿಕಾರ, ಗ್ರಾಮದ ಹಿರಿಯರು, ಯುವಕರು ಉಪಸ್ತಿತರಿದ್ದರು.  


ಜಿನುಗು ಕೆರೆ ಕಾಮಗಾರಿಗೆ ಶಾಸಕ ಸುನೀಲಗೌಡ ಪಾಟೀಲ ಭೂಮಿಪೂಜೆ*: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಮದ ಬಳಿ ಅಂದಾಜು ರೂ. 160 ಲಕ್ಷ ವೆಚ್ಚದ ಹೊಸ ಜಿನುಗು ಕೆರೆ(ಸೈಟ್- 3) ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ ಶಾಕ ಸುನೀಲಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು.  ಈ ಸಂದರ್ಭದಲ್ಲಿ ಮುಖಂಡರಾದ ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹೇಶ ಗೌಡಪ್ಪಗೋಳ, ಅಲ್ಲಿಸಾಬ ಖಡಕೆ, ಪ್ರಕಾಶ ಹೂಗಾರಕರ ಮುಂತಾದವರು ಉಪಸ್ತಿತರಿದ್ದರು.  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು