ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ

 ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ವರದಿ 

ದಿನಾಂಕ ೧೨.೧೨.೨೦೨೪ ರಂದು ನಗರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಜಿ.ಆರ್. ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದ ಇತಿಹಾಸ ಮತ್ತು ಕನ್ನಡ ವಿಭಾಗ ಹಾಗೂ ಶಾಸನಶಾಸ್ತç ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ಸಹಯೋಗದಲ್ಲಿ ‘ಇಂಡಿ ತಾಲ್ಲೂಕು ಶಾಸನಗಳು ಮತ್ತು ಸಂಸ್ಕೃತಿ’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ  ಸಂಕಿರಣ ಕಾರ್ಯಕ್ರಮ ಜರುಗಿತು. 


ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ.ಡಿ.ವ್ಹಿ.ಪರಮಶಿವಮೂರ್ತಿ ಮಾನ್ಯ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ ಹಂಪಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ‘ಇತಿಹಾಸವೆಂದರೆ ಕೇವಲ ನಡೆದ ಘಟನೆಗಳ ಮೊತ್ತವಲ್ಲ. ಅದೊಂದು ಸಾಂಸ್ಕೃತಿಕ ಬದುಕು. ಆ ಬದುಕನ್ನು ಹೊಂದಿರುವAಥದ್ದು ಈ ಇಂಡಿ ತಾಲ್ಲೂಕಿನಲ್ಲಿ ಕಾಣಿತ್ತವೆ. ಈ ತಾಲ್ಲೂಕಿನ ಶಾಸನಗಳಲ್ಲಿ ಇಲ್ಲಿನ ಅರಸರು, ಅವರ ಸಾಧನೆಗಳು, ಅವರು ನಿರ್ಮಿಸಿದ ಸ್ಮಾರಕಗಳ ಮಾಹಿತಿಗಳಿವೆ. ತರ್ದವಾಡಿ ನಾಡೆಂದು ಗುರುತಿಸಿಕೊಂಡ ಇದು ಕೃಷ್ಣಾ-ಭಿಮಾ ನದಿಗಳ ಮಧ್ಯದ್ದಾಗಿದೆ.

 ಇಂದಿನ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಾಗೇವಾಡಿ ಹಾಗೂ ಬಿಜಾಪುರ ತಾಲ್ಲೂಕುಗಳನ್ನೊಳಗೊಂಡಿತ್ತಲ್ಲದೆ, ಮಹಾರಾಷ್ಟçದ ಜತ್ತ, ಮಂಗಳವೇಡ, ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ಗಡಿಭಾಗಗಳಾಗಿದ್ದು ಸರಿಸುಮಾರು ೧೨೪ ಹಳ್ಳಿಗಳನ್ನು ಒಳಗೊಂಡ ವಾಡೇ ಇಂಡಿಯಾಗಿತ್ತು. ಪ್ರಾಚೀನ ಕಾಲದಿಂದಲೂ ವರ್ಷಗಳ ಇತಿಹಾಸದಲ್ಲಿ ಈ ಭಾಗದಲ್ಲಿ ರಾಷ್ಟçಕೂಟರು, ಕಲ್ಯಾಣದ ಚಾಲುಕ್ಯರು, ಕಲಚೂರಿಗಳು, ಯಾಧವರು, ಮಹಾಮಂಡಳೇಶ್ವರರು, ಮಹಾ ಸಾಮಂತರು, ಮನ್ನೆಯರು ಆಳ್ವಿಕೆಯನ್ನು ಮಾಡಿ ತಮ್ಮ ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಾರೆ. ಹೀಗಾಗಿ ಇವೆಲ್ಲವುಗಳ ಕುರಿತು ಹೆಚ್ಚು ಹೆಚ್ಚು ಅಧ್ಯಯನಗಳು ಅಗತ್ಯತೆ ಇದೆ. ಅಲ್ಲದೆ ಇಲ್ಲಿಯ ಶಾಸನಗಳನ್ನು, ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ನಾವೆಲ್ಲರೂ ಪ್ರಯತ್ನಶೀಲರಾಗಬೇಕಾಗಿದೆ ಏಕೆಂದರೆ ಇವೆಲ್ಲ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳು.’ ಎಂದು ಹೇಳಿದರು.

ಈ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಡಾ.ಸುಜಾತ ಶಾಸ್ತಿç, ಸಂಶೋಧಕರು, ಪುಣ್ಯಶ್ಲೋಕ ಅಹಿಲ್ಯದೇವಿ ಹೋಳ್ಕರ್ ವಿಶ್ವವಿದ್ಯಾಲಯ, ಸೊಲಾಪುರ, ಮಹಾರಾಷ್ಟç, ಇವರು ಕಾರ್ಯಕ್ರಮದ ಬಗ್ಗೆ ತಮ್ಮ ಆಶಯ ನುಡಿಯನ್ನು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ.ಪ್ರಭಾಕರ ಎಸ್. ಬಗಲಿ, ಗೌರವ ಕಾರ್ಯದರ್ಶಿಗಳು, ಎಸ್.ಎಸ್.ವ್ಹಿ.ವ್ಹಿ ಸಂಘ ಇಂಡಿ,  ಇವರು ‘ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಹೊರಹಾಕಲು ನಮ್ಮ ಮಹಾವಿದ್ಯಾಲಯ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪ್ರತಿ ವರ್ಷವೂ ಕೂಡಾ ಇಂತಹ ವಿಚಾರ ಸಂಕಿರಣ, ಕಾರ್ಯಗಾರಗಳನ್ನು ಹಮ್ಮಿಕೊಳ್ಳಲು ನಮ್ಮ ಸಹಕಾರ ಮತ್ತು ಪ್ರೊತ್ಸಾಹ ಇದ್ದೆ ಇರುತ್ತೆ. ಹೀಗಾಗಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು  ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು.’ ಎಂದು ನುಡಿದರು.

ವೇದಿಕೆಯಲ್ಲಿ ಡಾ.ಅಮರೇಶ ಯತಗಲ್, ಮುಖ್ಯಸ್ಥರು, ಶಾಸನಶಾಸ್ತç ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಶ್ರೀ. ನೀಲಕಂಠಗೌಡ ಪಾಟೀಲ ಉಪಧ್ಯಾಕ್ಷರು ಎಸ್.ಎಸ್.ವ್ಹಿ.ವ್ಹಿ ಸಂಘ ಇಂಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಸಹಾಯಕ ಪ್ರಾಧ್ಯಾಪಕರಾದ ಶ್ರೀ.ಶ್ರೀಶೈಲ, ಪ್ರಾರ್ಥನಾಗೀತೆಯನ್ನು ಉಪನ್ಯಾಸಕಿರಾದ ಕುಮಾರಿ. ಧಾನಮ್ಮ ಪಾಟೀಲ, ಸ್ವಾಗತ & ಪರಿಚಯವನ್ನು ಪ್ರಾಚಾರ್ಯರಾದ ಡಾ.ಎಸ್.ಬಿ.ಜಾಧವ, ಮಾಲಾರ್ಪಣೆಯನ್ನು ಉಪನ್ಯಾಸಕಿರಾದ ಶ್ರೀಮತಿ.ಶ್ವೇತಾ ಕಾಂತ, ವಂದನಾರ್ಪಣೆಯನ್ನು ಐಕ್ಯೂಎಸಿ ಸಂಯೋಜಕರಾದ ಡಾ.ಜಯಪ್ರಸಾದ ಡಿ ಮಾಡಿದರು.

ಈ ಕಾರ್ಯಕ್ರಮದ ಪ್ರಥಮ ಗೋಷ್ಠಿಯಲ್ಲಿ ಡಾ.ಆರ್.ಎಂ.ಷಡಕ್ಷರಯ್ಯ, ವಿಶ್ರಾಂತ ನಿರ್ದೇಶಕರು, ಕನ್ನಡ ಸಂಶೋಧÀನ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ‘ಶಾಸನಗಳು-ರಾಜಕೀಯ ಇತಿಹಾಸ’ ವಿಷಯವನ್ನು ಮಂಡನೆ ಮಾಡಿದರು. ಮತ್ತು ಡಾ.ಜೆ.ಎಂ.ನಾಗಯ್ಯ ವಿಶ್ರಾಂತ ಪ್ರಾಧ್ಯಾಪಕರು, ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ‘ಶಾಸನಗಳು-ಸಾಂಸ್ಕೃತಿಕ ಸಂಗತಿಗಳು’’ ವಿಷಯವನ್ನು ಮಂಡನೆ ಮಾಡಿದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ.ಅಜೀತ ಧನಶೆಟ್ಟಿ ಮತ್ತು ಶ್ರೀ ಚಂದ್ರಕಾAತ ದೇವರ ರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ದ್ವಿತೀಯ ಗೋಷ್ಠಿಯಲ್ಲಿ ಡಾ.ಶ್ರೀನಿವಾಸ ವ್ಹಿ.ಪಾಡಿಗಾರ, ವಿಶ್ರಾಂತ ಪ್ರಾಧ್ಯಾಪಕರು, ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನವಿಜ್ಞಾನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ‘ಶಾಸನಗಳು-ದೇವಾಲಯ ಸಂಸ್ಕೃತಿ’ ವಿಷಯವನ್ನು ಮಂಡನೆ ಮಾಡಿದರು. ಮತ್ತು ಡಾ.ನಾರಾಯಣ ಬಿ. ಪವಾರ, ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ, ಇವರು ‘ಶಾಸನಗಳು-ಸ್ಥಳನಾಮಗಳು’ ವಿಷಯವನ್ನು ಮಂಡನೆ ಮಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಶ್ರೀ.ಎಸ್.ಆರ್.ತಾಂಬೆ ಮತ್ತು ನಿರ್ದೇಶಕರಾದ ಶ್ರೀ.ಎಸ್.ಎಮ್.ತೆನ್ನಿಹಳ್ಳಿ ರವರು ಉಪಸ್ಥಿತರಿದ್ದರು.


ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಡಾ.ಅಮರೇಶ ಯತಗಲ್, ಮುಖ್ಯಸ್ಥರು, ಶಾಸನಶಾಸ್ತç ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಸಮಾರೋಪ ನುಡಿಯನ್ನಾಡಿದರು. ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಬಿ.ಜಾಧವ ಅವರು ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ.ಭೀಮನಗೌಡ ವಾಯ್. ಪಾಟೀಲ, ಶ್ರೀ.ಸಚೀನಕುಮಾರ ಗಾಂಧಿ ಮತ್ತು ಶ್ರೀ.ವರ್ಧನ ದೋಶಿ ರವರು ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹ ಪ್ರಾಧ್ಯಾ¥ಕರಾದ ಡಾ.ಆನಂದ ನಡವಿನಮನಿ, ಸಹಾಯಕ ಪ್ರಾಧ್ಯಾಪಕರಾದ ಡಾ. ವಿಶ್ವಾಸ್. ಕೋರವಾರ, ಡಾ. ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ,  ಡಾ. ಸಿ.ಎಸ್.ಬಿರಾದಾರ, ಡಾ. ಶ್ರೀಕಾಂತ ರಾಠೋಡ, ಶ್ರೀ ಎಮ್.ಆರ್ ಕೋಣದೆ, ಗ್ರಂಥಪಾಲಕರಾದ ಶ್ರೀ.ರಾಘವೇಂದ್ರ ಇಂಗನಾಳ, ಶೃತಿ ಪಾಟೀಲ, ಶ್ವೇತಾ ಕಾಂತ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ, ಶ್ರೀ.ಪರಶುರಾಮ ಅಜಮನಿ, ನಸ್ರೀನ ವಾಲಿಕಾರ, ಧಾನಮ್ಮ ಪಾಟೀಲ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು