ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ-ಸಂತೋಷ ಬಂಡೆ

ಇಂಡಿ: ದೈನಂದಿನ ಜೀವನದಲ್ಲಿ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ರಕ್ತಹೀನತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

         ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸೋಮವಾರದಂದು 'ರಕ್ತಹೀನತೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ'ವನ್ನು ಉದ್ಧೇಶಿಸಿ ಮಾತನಾಡಿದರು.

        ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣುಗಳಂತಹ ಆಹಾರ ಸೇವನೆಯಿಂದ ದೇಹಕ್ಕೆ ಹೇರಳವಾಗಿ ಕಬ್ಬಿಣಾಂಶ ದೊರೆಯುತ್ತದೆ. ಆಗ ರಕ್ತಹೀನತೆ ಮುಕ್ತವಾಗಿ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

       ಹಿರಿಯ ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ,  ರಕ್ತಹೀನತೆಗೆ ಮುಖ್ಯ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆದಾಗ

ನಿಶ್ಯಕ್ತಿ, ಸುಸ್ತು, ಜೀರ್ಣಶಕ್ತಿ ಮತ್ತು ಉಸಿರಾಟದಲ್ಲಿ ಸಮಸ್ಯೆ ಕಾಣುವುದು. ಹಾಗಾಗಿ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

        ಶಿಕ್ಷಕರಾದ ಎಸ್ ಪಿ ಪೂಜಾರಿ, ಅಲ್ಫಿಯಾ ಅಂಗಡಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು