ದೇಶ ಉದ್ದಾರವಾಗಲು ಆಧ್ಯಾತ್ಮ ಅತಿ ಅವಶ್ಯ.

 

ದೇಶ ಉದ್ದಾರವಾಗಲು ಆಧ್ಯಾತ್ಮ ಅತಿ ಅವಶ್ಯ. 

ಇಂಡಿ : ಈ ದೇಶ ಉದ್ದಾರವಾಗಲು ಪ್ರತಿಯೊಬ್ಬ ಪ್ರಜೆಗೂ ಆಧ್ಯಾತ್ಮದ ಜ್ಞಾನ ನೀಡಿ,ಇದರತ್ತ ಆಕರ್ಷಣೆ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ  ಎಂಬುದು ಸ್ವಾಮಿ ವಿವೇಕಾನಂದರ ವಿಚಾರವಾಗಿತ್ತು ಎಂದು ಡಿವೈನ್ ಪಾರ್ಕಿನ ಎಲ್‌ - 2 ಅಧಿಕಾರಿ ಯಶವಂತ ಡಿ ಎಸ್ ಹೇಳಿದರು.  


                ಅವರು ಇಂಡಿ ಪಟ್ಟಣದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಹಾಗೂ ಶ್ರೀ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಇವರ ಸಹಯೋಗದಲ್ಲಿ ನಡೆದ 89ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದ ನಿಮಿತ್ತವಾಗಿ  ಇಂಡಿ ಪಟ್ಟಣದ ವಿವೇಕ ಜಾಗೃತ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಆತ್ಮೋನ್ನತಿ ಶಿಬಿರದಲ್ಲಿ ಅತಿಥಿ ಉಪನ್ಯಾಸಕರಾಗಿ ಉಪನ್ಯಾಸ ನೀಡಿದರು. 
                     ದೇವರನ್ನು ಕಾಣಿಸುವವರೆಗೂ ನಾನು ನಿಲ್ಲುವುದಿಲ್ಲ ಎಂದು ವಿವೇಕಾನಂದರು ಶಪಥ ಮಾಡಿದ್ದರು.ಅದಕ್ಕಾಗಿ ಅವರು ನಿರಂತರವಾಗಿ ಭಗವಂತನ ಧ್ಯಾನದಲ್ಲಿ ತಲ್ಲಿನರಾದಾಗ ಅವರ ಗುರುಗಳಾದ ರಾಮಕೃಷ್ಣ ಪರಮಹಸರು ಭಗವಂತನ ದರ್ಶನ ಮಾಡಿಸಿದರು.ಈ ಆತ್ಮಗಳಿಗೆ ಮರಣವಿಲ್ಲ.ಆದರೆ, ನಮಗೆ ಮರಣವಿದೆ ಆತ್ಮ ನಿನ್ನಲ್ಲಿರದಿದ್ದರೆ ನಿನಗೆ ಎಂದಿಗೂ ಬೆಲೆ ಇಲ್ಲ.ಅದಕ್ಕಾಗಿ ಆತ್ಮೋನ್ನತಿ ಹೊಂದಲು ಯಾವತ್ತೂ ಭಗವಂತನ ಧ್ಯಾನ ಮಾಡುತ್ತಿರಬೇಕು.ಧರ್ಮ ಶಿಕ್ಷಣ ಮತ್ತು ದೇಶಭಕ್ತಿ ಶಿಕ್ಷಣ ಇಂದಿನ ಯುವಕರಿಗೆ ಅತಿ ಅವಶ್ಯವಾಗಿದೆ.ಯಾರು ದೇವರನ್ನು ಕಂಡಿದ್ದಾರೊ ಅವರು ದೇವರನ್ನು ತೋರಿಸಬಲ್ಲರು.ಗುರು ಪರಂಪರೆ ಋಷಿ ಪರಂಪರೆಯು ದೇಶ ಇದಾಗಿದೆ.ತೋರಿಕೆಯ ಭಕ್ತಿ  ನಮ್ಮಲ್ಲಿ ಇರಬಾರದು.ಬದುಕು ಎಂಬುದು ಜಟಕಾ ಬಂಡಿ ಅದನ್ನು ಸಾರ್ಥಕ ಪಡಿಸಿಕೊಳ್ಳಿ, ಭಗವಂತ ನನ್ನನ್ನು ಕೈಹಿಡಿದು ಮೇಲೆತ್ತು ಎಂದು ಬೇಡಿಕೊಳ್ಳಿ.ನಾವು ಭಗವಂತನ ದಾಸರಾಗಬೇಕು.ಆಗ ಮಾತ್ರ ನಾವು ಉದ್ಧಾರವಾಗಲು ಸಾಧ್ಯ ಎಂಬುದು ವಿವೇಕಾನಂದರ ವಿಚಾರವಾಗಿತ್ತು ಎಂದರು. 
              ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಿವೈನ್ ಪಾರ್ಕ್ ಎಲ್ -2 ಅಧಿಕಾರಿ ಶ್ರೀಮತಿ ಸುಜಾತಾ ರಾಮಕೃಷ್ಣನ್ ಅವರು ಮಾತನಾಡಿ, ಭಗವಂತನಿಗೆ ಧನ್ಯತೆ ಹೇಳುವ ಗುಣವನ್ನು ನೀವೆಲ್ಲರೂ ಬೆಳೆಸಿಕೊಳ್ಳಿರಿ. ಏನನ್ನು ಒಳ್ಳೆಯದೆಂದು ನಾವು ಪಡೆದುಕೊಂಡಿದ್ದೆಯೋ ಅದನ್ನು ಇತರರಿಗೂ ಹಂಚಿಕೊಡಬೇಕು.ಸರ್ವೇ ಜನ ಸುಖಿನೋ ಭವಂತು ಎಂಬಂತೆ ಎಲ್ಲವೂ ಭಗವಂತನೆ ಕೊಟ್ಟಿದ್ದಾನೆ.ಇಲ್ಲಿ ನನ್ನದೆಂಬುದು ಎನೂ ಇಲ್ಲ.ಆತ ಅವಕಾಶ ಮತ್ತು ಶಕ್ತಿಯನ್ನು ಕೊಟ್ಟಿದ್ದಾನೆ .ಅದನ್ನು ನಾವೆಲ್ಲರೂ ಸದುಪಯೋಗಪಡಿಸಿಕೊಳ್ಳಲು ದಿನಾಲು ಭಗವಂತನ ಇಷ್ಟನಾಮ ಸ್ಮರಣೆ ಮಾಡಿರಿ ಎಂದು  ಎಂದು ಹೇಳಿದರು.
              ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹಿರೇಮಠ ಜೈನಾಪುರ-ಅರ್ಜುಣಗಿ ಗ್ರಾಮದ ರೇಣುಕಾ ಶಿವಾಚಾರ್ಯರು ಆಶೀರ್ವಚನ ನೀಡಿ,ನಾವೆಲ್ಲರೂ ದೈವಿಕೃಪೆಗೆ  ಒಳಗಾಗ ಬೇಕಾದರೆ  ಇಂಥ ಸತ್ಸಂಗದಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಶರಣರ ವಚನಗಳ ಸಾರವನ್ನು ಅರಿತುಕೊಳ್ಳಬೇಕೆಂದು ಭಕ್ತರಿಗೆ ಕರೆ ನೀಡಿದರು. ವಿವೇಕ ಜಾಗೃತೆ ಬಳಗದ ಅಧ್ಯಕ್ಷರಾದ ದ್ರಾಕ್ಷಾಯಿಣಿ ವ್ಹಿ ಮೈದರಗಿ ಅಧ್ಯಕ್ಷತೆ ವಹಿಸಿದ್ದರು.
             ಕಾರ್ಯಕ್ರಮದ ಪ್ರಾಯೋಜಕರಾದ ಬಾಲಾಜಿ ನರಸಯ್ಯ ಇಪ್ಪಕಾಯಲ್ ಹಾಗೂ ಸತ್ಸಂಗ ಸಮಿತಿ ಅಧ್ಯಕ್ಷರಾದ ಪ್ರೊ ಐ ಬಿ ಸುರಪುರ ಅತಿಥಿಗಳಾಗಿ ವೇದಿಕೆ ಮೇಲೆ ಆಸೀನರಾಗಿದ್ದರು. 
                ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಶ್ರೀಮತಿ ಪಾರ್ವತಿ ಬ ಸೊನ್ನದ ಇವರು ರಚಿಸಿದ ಹೆಮ್ಮೆಯ ಪುತ್ರ ಮಕ್ಕಳ ಕಥಾ ಸಂಕಲನ ಕೃತಿಯನ್ನು ಬಿಡುಗಡೆ ಮಾಡಲಾಯಿತು. 
                    ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಆರ್ ವಿ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ,ಯುವಕ ಮಂಡಳಿ ಅಧ್ಯಕ್ಷ ಗಿರೀಶ ಪೋಪಡಿ, ಪ್ರೊ ಎಂ ಜೆ ಪಾಟೀಲ ಪ್ರೊ ಎ ಎಸ ಗಾಣಿಗೇರ, ಎಸ್ ಎಸ್  ಈರನಕೇರಿ,ಸಿ ಎಂ ಉಪ್ಪಿನ, ಕೆ ಜಿ ನಾಟೀಕಾರ, ಜಾಗೃತ ಬಳಗದ ಶ್ರೀಮತಿ ಎನ್ ಟಿ ಸಂಗಾ ಹಾಗೂ ಜಯಶ್ರೀ ಪತ್ತಾರ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು