ಇಂಡಿ ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಕಠಿಣ ಕ್ರಮ
ಇಂಡಿ ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪಿ.ಎಸ್.ಐ ಮಹೇಶ ಸಂಖ ಕಠಿಣ ಕ್ರಮ.
ಇಂಡಿ: ಸಂಚಾರಿ ನಿಯಮಗಳು ಇರುವುದೇ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು, ವಾಹನ ಸವಾರರ ಸುರಕ್ಷತೆಗಾಗಿ. ಆದರೆ ಕೆಲವು ವಾಹನ ಸವಾರರು, ಚಾಲಕರು ಟ್ರಾಫಿಕ್ ರೂಲ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳದೆ, ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ತಮ್ಮ ಜೀವದ ಜೊತೆಗೆ ಸಾರ್ವಜನಿಕರ ಜೀವದ ಜೊತೆಗೂ ಚಲ್ಲಾಟವಾಡುತ್ತಾರೆ.
ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಇಂಡಿ ಪೊಲೀಸ್ ಠಾಣೆಯ ಪಿ.ಎಸ್.ಐ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್) ಅವರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.
ನಗರದ ಪ್ರಮುಖ ರಸ್ತೆ ಬಿಜಾಪುರ ರಸ್ತೆ, ಸಿಂದಗಿ ರಸ್ತೆ ಸ್ಟೇಶನ್ ರಸ್ತೆ ಅಗರಖೇಡ ರಸ್ತೆಯಲ್ಲಿ ಅಡ್ಡಾದಿಡ್ಡಿ ಯಾಗಿ ಮೋಟರ್ ಸೈಕಲ್ ಹಾಗೂ ವಿವಿಧ ವಾಹನಗಳ ನಿಲ್ಲು ತಿದ್ದರು ಇದಕ್ಕೆ ಸಾರ್ವಜನಿಕರ ತೊಂದರೆ ಅನುಭವಿಸುತಿದ್ದರು.
ಇಂಡಿ ಶಹರ್ ಪಿ.ಎಸ್.ಐ ಮಹೇಶ್ ಸಂಖ ಅವರು ಪ್ರಮುಖ ರಸ್ತೆಗಳಲ್ಲಿ ನಿಗಾವಹಿಸಿ, ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕರ ವಿರುದ್ಧ ದಂಡ ವಿಧಿಸಿದ್ದಾರೆ. ಯಾವುದೇ ರಿಯಾಯಿತಿ ನೀಡದೆ, ವಾಹನ ಪರವಾನಿಗೆ ಇಲ್ಲದವರು, ಹೆಲ್ಮೆಟ್ ಹಾಕದ ದ್ವಿಚಕ್ರ ವಾಹನ ಸವಾರರು, ಮತ್ತು ಮಿತಿಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸುವವರ ಮೇಲೆ ತಕ್ಷಣ ದಂಡ ಹಾಕಲಾಗುವುದು ಎಂದರು. ಸಾರ್ವಜನಿಕರಿಗೆ ತಮ್ಮ ಸಹಕಾರವನ್ನು ನೀಡುವಂತೆ ಮತ್ತು ನಿಯಮಗಳನ್ನು ಪಾಲಿಸಲು ಕೋರಿದ್ದಾರೆ ಪಿ.ಎಸ್.ಐ ಮಹೇಶ ಸಂಖ.
ಇಂಡಿ. ಶಹರ್ ಪಿ.ಎಸ್.ಐ ಅವರ ಈ ಕ್ರಮಕ್ಕೆ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದ್ದು, ಇದು ಶಿಸ್ತಿನ ರಸ್ತೆ ಸಂಚಲನಕ್ಕೆ ಸಹಾಯ ಮಾಡುತ್ತದೆ ಎಂದು ರಯೀಸ್ ಆಸ್ಟೇಕರ ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ