ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಕಡುಬಿನ ಊಟ ಜೋರು

 *ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಕಡುಬಿನ ಊಟ ಜೋರು*



ಇಂಡಿ: ಎಳ್ಳು ಅಮಾವಾಸ್ಯೆ ಅಂದರೆ ಉತ್ತರ ಕರ್ನಾಟಕ ರೈತರ  ಬಹು ದೊಡ್ಡ ಹಬ್ಬ ಎಂದರೆ ತಪ್ಪಾಗಲಾರದು.

  ಹೌದು ಇದರ  ಹಿಂದಿನ ದಿನ‌ ಕಾಯಿ ಪಲ್ಲೆ ಖರೀದಿಸುವದು ಹಾಗೂ ಬಿಡಿಸುವದು ಅಥವಾ ಕಾಯಿಪಲ್ಲೆ ಸೋಸುವದೇ ಈ ಭಾಗದ ಹೆಣ್ಣು ಮಕ್ಕಳ ಸಂಭ್ರಮವೋ ಸಂಭ್ರಮ.

ಈ ಹಬ್ಬವನ್ನು ಮಾಘ ಮಾಸದಲಿ ಹೇರಳವಾಗಿ ಸಿಗುವ ತರತರಹದ ಕಾಯಿಪಲ್ಲೆ, ವಿವಿದ ಪ್ರಕಾರದ ಕಾಳುಗಳನ್ನು ಸೇರಿಸಿ ಪಲ್ಲೆ ಮಾಡಿ, ಅದರ ಜೊತೆಗೆ ಸಜ್ಜಿ ರೂಟ್ಟಿ, ಸೆಂಗಾ ಹೋಳಿಗೆ, ಹೂರಣ ಹೋಳಿಗೆ, ಕಡುಬಿನ ಊಟ ಮಾಡುವುದು ವಿಶೇಷ.

ರೈತನ ಜೀವನಾಡಿ ಬೆಳೆ ಜೋಳ. ಆ ಜೋಳದ ಗದ್ದೆಯ ಮಧ್ಯೆ ಕಲ್ಲು ಇಟ್ಟು ಪೂಜೆ ಮಾಡಿ ನೈವೇದ್ಯ ಹಿಡಿದು, ಹೊಲದ ತುಂಬಾ ತಿರುಗುತ್ತಾ ಸಜ್ಜಿ ರೊಟ್ಟಿ ಚವಳಿಕಾಯಿ ಚಾಂಗ್ ಬೊಲೋ ಎಂದು ಜೈಕಾರ ಹಾಕುವುದು ಹಿಂದಿನಿಂದ ಬಂದ ಸಂಪ್ರದಾಯ.

ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ಇಂಡಿ ಪಟ್ಟಣದ ಏಕೈಕ ಮನೆತನ ಅದು ಕಾಸುಗೌಡ ಬಿರಾದಾರ ಅವರ ಮನೆತನ.

ಈ ಸಂದರ್ಭದಲ್ಲಿ ಕಾಸುಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಸುನೀಲಗೌಡ ಬಿರಾದಾರ, ಸತ್ತಾರ ಬಾಗವಾನ,  ಜಬ್ಬಾರ್ ಅಣ್ಣಾ, ಶಿವಾನಂದ ಚಾಳಿಕಾರ, ಸಿದ್ದು ಡಂಗಾ, ರಮೇಶ ರಾಠೋಡ, ದಯಾನಂದ ಪಾಟೀಲ, ಅಜಿತ್ ಸ್ವಾಮಿ, ಮಲ್ಲು ಪಾಟೀಲ, ಸಿದ್ದು ಬಿರಾದಾರ, ಶಿವನಗೌಡ ಸಿಂಗ್ಪಾಟೀಲ, ಸಂಜು ಪವಾರ, ರಾಚು ಬಡಿಗೆರ, ಸೊಮು ಬ್ಯಾಳಿ ಸೇರಿದಂತೆ ಹಲವು ಮುಖಂಡರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು