ಇಂಡಿ ವಿಭಾಗದ ಸರಕಾರಿ ಉರ್ದು ಶಿಕ್ಷಕರ ಪತ್ತಿನ ಸಹಕಾರಿ ನಿ ಕಟ್ಟಡ ಉದ್ಘಾಟನೆ

 ಇಂಡಿ ವಿಭಾಗದ ಸರಕಾರಿ ಉರ್ದು ಶಿಕ್ಷಕರ ಪತ್ತಿನ ಸಹಕಾರಿ ನಿ ಕಟ್ಟಡ ಉದ್ಘಾಟನೆ:



ಇಂಡಿ. ಇಂಡಿ  ವಿಭಾಗದ ಸರಕಾರಿ ಪ್ರಾಥಮಿಕ ಶಾಲೆಗಳ  ಉರ್ದು ಶಿಕ್ಷಕರ ಪತ್ತಿನ ಸಹಕಾರಿ ನಿ.  ಇಂಡಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ   8 ಡಿಸೆಂಬರ್ 2024 ರಂದು ನಡೆಯಿತು. ಈ ಕಾರ್ಯಕ್ರಮವನ್ನು ಇಂಡಿ ಕ್ಷೇತ್ರದ  ಶಾಸಕರಾದ ಯಶವಂತರಾಗೌಡ ಪಾಟೀಲ ಅವರ ಪುತ್ರರಾದ  ವಿಠ್ಠಲ ಗೌಡ ಪಾಟೀಲ  ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ವಿಠ್ಠಲಗೌಡ ಪಾಟೀಲ  "ಶಿಕ್ಷಕರ ಒಗ್ಗಟ್ಟಿನಿಂದಾಗಿ ಈ ರೀತಿಯ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸಬಹುದು. ಉರ್ದು ಭಾಷೆಯ ಮತ್ತು ಉರ್ದು ಶಿಕ್ಷಣದ ಅಭಿವೃದ್ಧಿಗಾಗಿ ಈ ಸಂಘಟನೆಯ ಕೊಡುಗೆ ಮಹತ್ತರವಾಗಿದೆ" ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಶಿಕ್ಷಕರ ಪತ್ತಿನ ಸಹಕಾರಿ ನಿ ಕಟ್ಟಡವು ಉರ್ದು ಶಿಕ್ಷಣಕ್ಕಾಗಿ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಲಾಯಿತು. ಈ ಸಂದರ್ಭದಲ್ಲಿ ಉರ್ದು ಭಾಷೆ, ಸಾಹಿತ್ಯ ಹಾಗೂ ಶಿಕ್ಷಣದ ಪ್ರಸ್ತುತ ಸ್ಥಿತಿಗತಿ ಕುರಿತು ಚರ್ಚೆಗಳು ನಡೆಯುವಂತಾಯಿತು.

ಸಮಾರಂಭದ ಅಧ್ಯಕ್ಷತೆ ಉರ್ದು ಶಿಕ್ಷಕರ ಪತ್ತಿನ ಸಹಕಾರ ನಿ.  ಅಧ್ಯಕ್ಷರಾದ ಶ್ರೀಮತಿ ಸೈಪನಮಾ ಮಕಾನದಾರ ವಹಿಸಿದರು. ಮುಖ್ಯ ಅತಿಥಿಗಳು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವಿದ ಮೀಮಿನ, ಇಸ್ಮಾಯಿಲ್ ಇನಾಂದಾರ, ಎಸ್.ಡಿ.ಪಾಟೀಲ, ಎಸ್.ಆರ್.ಪಾಟೀಲ, ಅಲ್ತಾಫ ಬೋರಾಮಣಿ, ಅಸ್ಲಂ ಪಟೇಲ, ಸರಕಾರಿ ನೌಕರರ ಸಂಘದ ಇಂಡಿ ನಿರ್ದೇಶಕ ಅಬುತಾಲಿಬ ಹೊಸುರ, ಮಕಬುಲಶಾ ಮಕಾನದಾರ, ಶ್ರೀಮತಿ ಅಂಜುಮ ಜಮಾದಾರ, ಕಮರುದ್ದಿನ ಬೇದರೆಕರ,  ಬಸವರಾಜ ಗೊರನಾಳ, ಜಾಫರ ಸಾದಿಕ ಮಾಶಾಳಕರ,  ಬಾಬು ಬೇಪಾರಿ,  ಸೇರಿದಂತೆ ಅನೇಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು