ಸುಚಿತ್ವದಿಂದ ರೋಗಗಳನ್ನು ತಡೆಗಟ್ಟಲು ಸಾಧ್ಯ-ಶಿಫಾ ಜಮಾದಾರ

ಸುಚಿತ್ವದಿಂದ ರೋಗಗಳನ್ನು ತಡೆಗಟ್ಟಲು ಸಾಧ್ಯ-ಶಿಫಾ ಜಮಾದಾರ


ತಿಕೋಟಾ - ಸುಚಿತ್ವ ಮತ್ತು ಆರೋಗ್ಯ ಪರಸ್ಪರ ಸಂಬಂಧ ಹೊಂದಿರುವದರAದ ನೀವು ಶುದ್ಧವಾಗಿದ್ದರೆ ನೀವು ಅನೇಕ ಸಾಂಕ್ರಾಮಿಕ ರೋಗಗಳಿಂದ ಹೋರಾಡಬಹುದು ಮತ್ತು ತಡೆಗಟ್ಟಬಹುದು ಎಂದು ಲಾಡಲಿ ಫೌಂಡೇಶನ್ ಟ್ರಸ್ಟಿನ ರಾಯಭಾರಿ ಶಿಫಾ ಜಮಾದಾರ ಹೇಳಿದರು.



ಇಂದು ತಿಕೋಟಾ ಗ್ರಾಮದ ಕೆ.ಬಿ.ಎಂ.ಪಿ.ಎಸ್. ಬಾಲಕರ ಸರಕಾರಿ ಶಾಲೆಯಲ್ಲಿ ಲಾಡಲಿ ಫೌಂಡೇಶನ ಟ್ರಸ್ಟ ವತಿಯಿಂದ ತಿಕೋಟಾ, ಬಬಲೇಶ್ವರ, ತಾಜಪೂರ ಸರಕಾರಿ ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಗೂ ಸದಸ್ಯರಿಗೆ ಸ್ವಚ್ಚತಾ ತರಬೇತಿ ಹಾಗೂ ಸ್ವಚ್ಚತಾ ಕಿಟ್ಟ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸುಚಿತ್ವವು ನಿಮ್ಮ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಸ್ವಚ್ಚತೆಯಿಂದ ಇರುವುದು ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. ಅಸಮರ್ಪಕ ಕುಡಿಯುವ ನೀರು ನೈರ್ಮಲ್ಯದ ಮೇಲೆ ಪರಿಣಾಮವಾಗಿ ಅನೇಕ ರೋಗಗಳಿಗೆ ಹಾಗೂ ಸಾವಿಗೆ ಕಾರಣವಾಗುತ್ತಿದೆ. ಸ್ವಚ್ಚವಾದಂತಹ ನೀರನ್ನು ಪ್ರತಿ ವಿದ್ಯಾರ್ಥಿ ಬಳಸುವುದನ್ನು ರೂಢಿಸಿಕೊಳ್ಳಬೇಕು. ಲಾಡಲಿ ಫೌಂಡೇಶನ ಟ್ರಸ್ಟ ವಿಜಯಪುರ ಜಿಲ್ಲೆಯ ೨೧ ಸರಕಾರಿ ಶಾಲೆಯಲ್ಲಿ ಹೊಸದಾಗಿ ಅತ್ಯಾಧುನಿಕ ಶೌಚಾಲಯ ಕಟ್ಟುತ್ತಿದೆ. ಇದರ ಜೊತೆಗೆ ಒಂದು ವರ್ಷದ ಅವಧಿವರೆಗೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಾನಿಟ್ರಿ ಪ್ಯಾಡಗಳನ್ನು ಪೂರೈಸುತ್ತಿದೆ. ಮತ್ತು ೨೧ ಶಾಲೆ ಮಕ್ಕಳಿಗೆ ಇದೇ ಡಿಸೆಂಬರ ಕೊನೆಯ ವಾರದಲ್ಲಿ ೪೦೦೦ ಶಾಲಾ ಬ್ಯಾಗಗಳನ್ನು ಉಚಿತವಾಗಿ ಹಂಚುತ್ತೇವೆ ಎಂದು ಹೇಳಿದರು.



ಲಾಡಲಿ ಫೌಂಡೇಶನ ಟ್ರಸ್ಟಿನ ರಾಷ್ಟ್ರೀಯ ಸಲಹೆಗಾರ ಡಾ. ಜಾವಿದ ಜಮಾದಾರ ಮಾತನಾಡಿ ಸರಕಾರಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರಿಗೆ ತರಬೇತಿ ನೀಡಿ ಶಾಲೆಯಲ್ಲಿ ಸ್ವಚ್ಚತೆ ಕಾಪಾಡಲು ಅವರ ಸೇವೆ ಬಳಸಿಕೊಳ್ಳುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಉತ್ತಮ ನೈರ್ಮಲ್ಯ ಉತ್ತಮ ಆರೋಗ್ಯ ಆತ್ಮವಿಶ್ವಾಸ ಮತ್ತು ಒಟ್ಟಾರೆ ಬೆಳವಣಿಗೆಗೆ ಕಾರಣವಾಗುತ್ತದೆ. ಮತ್ತು ಮಕ್ಕಳ ದೀರ್ಘ ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡಲು ಉತ್ತಮ ನೈರ್ಮಲ್ಯವು ನಿರ್ಣಾಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ  ತಿಪ್ಪಣ್ಣ ಕೊಣ್ಣೂರ ವಹಿಸಿದ್ದರು. ತಿಕೋಟಾ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ  ವಿಜುಗೌಡ ಪಾಟೀಲ, ಪಿ.ಕೆ.ಪಿ.ಎಸ್. ತಿಕೋಟಾ ಉಪಾಧ್ಯಕ್ಷ ಹಾಜಿಭಾಯಿ ಕೊಟ್ಟಲಗಿ, ಲಾಡಲಿ ಫೌಂಡೇಶನ ಟ್ರಸ್ಟದ ಜಿಲ್ಲಾ ವ್ಯವಸ್ಥಾಪಕ ಯುಸೂಫ ಕೊಟ್ಟಲ, ಮುಖ್ಯೋಧ್ಯಾಪಕ ವಾಯ್.ಬಿ. ವಾಲಿಕಾರ, ಎಸ್.ಎಸ್. ಸಾಲಿಮಠ, ಹುಸೇನಬಾಶಾ ಮುಲ್ಲಾ, ಬಿ.ವಾಯ್. ಮೆಂಡೆಗಾರ, ಪ್ರೀತಿ ಪತ್ತಾರ, ಸರಿತಾ ಚಕ್ರಸಾಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಿಕೋಟಾ, ಬಬಲೇಶ್ವರ, ತಾಜಪೂರ ಆಯ್ದ ಸರಕಾರಿ ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಗೂ ಸದಸ್ಯರಿಗೆ ಮತ್ತು ವಿದ್ಯಾರ್ಥಿಗಳ ಪಾಲಕರಿಗೆ ಸ್ವಚ್ಚತಾ ಕಿಟ್ಟ ವಿತರಿಸಲಾಯಿತು. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು