ಕೇವಲ ರಾಜಧಾನಿಗಳಂತ ನಗರಗಳಲ್ಲಿ ಸಿಮೀತವಾಗಿದ್ದ ಇಂತಹ ಸಮ್ಮೇಳನಗಳನ್ನು ನಮ್ಮ ವಿಜಯಪುರ ಜಿಲ್ಲೆಯಲ್ಲಿ ಸತತವಾಗಿ ಆಯೋಜನೆ ಮಾಡಿರುವುದಕ್ಕೆ ಆತ್ಮಸಂತೃಪ್ತಿ ಭಾವ ನಮಗಿದೆ ಎಂದು ಸಂತಸ ಖ್ಯಾತ ಮಧುಮೇಹ ತಜ್ಞ ಡಾ.ಬಾಬುರಾಜೇಂದ್ರ ಬಿ ನಾಯಿಕ

 ಕೇವಲ ರಾಜಧಾನಿಗಳಂತ ನಗರಗಳಲ್ಲಿ ಸಿಮೀತವಾಗಿದ್ದ ಇಂತಹ ಸಮ್ಮೇಳನಗಳನ್ನು ನಮ್ಮ ವಿಜಯಪುರ ಜಿಲ್ಲೆಯಲ್ಲಿ ಸತತವಾಗಿ ಆಯೋಜನೆ ಮಾಡಿರುವುದಕ್ಕೆ ಆತ್ಮಸಂತೃಪ್ತಿ ಭಾವ ನಮಗಿದೆ ಎಂದು ಸಂತಸ ಖ್ಯಾತ ಮಧುಮೇಹ ತಜ್ಞ ಡಾ.ಬಾಬುರಾಜೇಂದ್ರ ಬಿ ನಾಯಿಕ   


ವಿಜಯಪುರ - ವಚನ ಪಿತಾಮಹ ಫ.ಗು.ಹಳಕಟ್ಟಿ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಸಂಶೋದನೆ ಕೇಂದ್ರದ ನೇತೃತ್ವದಲ್ಲಿ ಶ್ರೀ ತುಳಸಿಗಿರೀಶ ಫೌಂಡೇಶನ್, ಎ.ಸಿ.ಪಿ ಇಂಡಿಯಾ ಚಾಪ್ಟರ್, ಐ.ಎ.ಸಿ.ಸಿ ಮತ್ತು ವಿಜಯಪುರದ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಮಧುಮೇಹ ವೈದ್ಯಕೀಯ ಸಮ್ಮೇಳನದಲ್ಲಿ‌(ಡೈಕಾನ್) ಭಾರತದ ವಿವಿಧ ಕಡೆಯಿಂದ ಹಾಗೂ ಕರ್ನಾಟಕದ ವಿವಿಧ ನಗರಗಳಿಂದ ಖ್ಯಾತ ವೈದ್ಯರು ಮತ್ತು ವೈದ್ಯಕೀಯ ವಿಧ್ಯಾರ್ಥಿಗಳು ಭಾಗವಹಿಸಿದರು. 


ಸಮ್ಮೇಳನವನ್ನು ಸಂಘಟಿಸಿದ ನಗರದ ಖ್ಯಾತ ಮಧುಮೇಹ ತಜ್ಞರಾದ ಡಾ.ಬಾಬುರಾಜೇಂದ್ರ ಬಿ ನಾಯಿಕ ಮಾತನಾಡಿ ಕೇವಲ ರಾಜಧಾನಿಗಳಂತ ನಗರಗಳಲ್ಲಿ ಸಿಮೀತವಾಗಿದ್ದ ಇಂತಹ ಸಮ್ಮೇಳನಗಳನ್ನು ನಮ್ಮ ವಿಜಯಪುರ ಜಿಲ್ಲೆಯಲ್ಲಿ ಸತತವಾಗಿ ಆಯೋಜನೆ ಮಾಡಿರುವುದಕ್ಕೆ ಆತ್ಮಸಂತೃಪ್ತಿ ಭಾವ ನಮಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಧುಮೇಹ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿದ್ದ ದೇಶದ ಖ್ಯಾತ ವೈದ್ಯರುಗಳು ಆಗಮಿಸಿ ಅವರ ವಿಷಯಗಳನ್ನು ಮಂಡಿಸಿ ಚರ್ಚೆ ಮಾಡುವದರಿಂದ ಅನೇಕ ವೈದ್ಯರಿಗೆ ಮತ್ತು ವೈದ್ಯಕೀಯ ವಿಧ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು. 


ಬೆಂಗಳೂರಿನ ಆದಿಚುಂಚನಗಿರಿ ಮಹಾವಿದ್ಯಾಲಯ ಉಪಕುಲಪತಿಗಳಾದ ಡಾ.ಎಂ.ಎ.ಶೇಖರ ಅವರು ಉತ್ತಮ ಆರೋಗ್ಯದ ಕುರಿತಾಗಿ ಉಪನ್ಯಾಸ ನೀಡಿದರು, ಇದೇ ಸಮಯದಲ್ಲಿ ಸಮ್ಮೇಳನದ ಪರವಾಗಿ ಅವರಿಗೆ ಜೀವಮಾನ ಸಾಧನೆಯ ಗೌರವವನ್ನು ನೀಡಿ ಸತ್ಕರಿಸಲಾಯಿತು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಡಾ.ಎನ್.ಕೆ.ಸಿಂಗ್, ಡಾ.ಅರ್ಪಣದೇವ ಭಟ್ಟಾಚಾರ್ಯ, ಡಾ.ವಾಗೀಶ್ ಅಯ್ಯರ್, ಡಾ.ದೀಪಕ್ ಜುಮಾನಿ ತಮ್ಮ ವಿಚಾರಗಳನ್ನು ಮಂಡಿಸಿದರು. ಈ ರಾಷ್ಟ್ರೀಯ ಮಟ್ಟದ ಸಮ್ಮೇಳನ ನಾಳೆ ಸಮಾರೋಪಗೊಳ್ಳಲಿದೆ.


ಸಮ್ಮೇಳನದ ಕಾರ್ಯದರ್ಶಿಗಳಾದ ಡಾ.ನಿತಿನ್ ಅಗರವಾಲ್ ಸ್ವಾಗತಿಸಿದರು,  ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಡಾ.ಸೌರ್ವಭಾಮ್ ಬಗಲಿ, ಬಾಡಗಂಡಿಯ ಎಸ್.ಆರ್.ಪಾಟೀಲ ವೈದ್ಯಕೀಯ ಕಾಲೇಜಿನ ಡೀನ್ ಡಾ.ಧರ್ಮರಾಯ ಇಂಗಳೆ, ಡಾ.ಎಸ್.ಎನ್.ಬೆಂತೂರ, ಡಾ.ರವಿಕುಮಾರ ಚೌಧರಿ, ಡಾ.ಬಾಬು ಕಟ್ಟಿಮನಿ, ಡಾ.ರವೀಂದ್ರ ಮಡ್ರಕಿ, ಅಶೋಕ ಬಿರಾದಾರ, ಮುತ್ತು ಗುಡದಿನ್ನಿ ಸೇರಿದಂತೆ ನಗರದ ಪ್ರಖ್ಯಾತ ವೈದ್ಯರು ಉಪಸ್ಥಿತರಿದ್ದರು, ಡಾ.ಶೀತಲ್ ಬಿ ನಾಯಿಕ್ ನಿರೂಪಣೆ ಮಾಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು