ಈಗೀನ ಕಿರಿ ಇಂಡಿ ಪುರ ಹುಟ್ಟುವ ಮುನ್ನ ಮೊದಲು ಹಿರೇ ಇಂಡಿ ಅವತರಣವಾಗಿತ್ತು. ಈಗಲೂ ಹಿರೇ ಇಂಡಿಯ ಪ್ರಾಚೀನ ಇತಿಹಾಸ ನೋಡಲು ಸಿಗುತ್ತದೆ...

 ಇಂಡಿಯ ಶಾಂತೇಶ್ವರ ದೇವರ ದಿವ್ಯದರ್ಶನ.!

---------------------------------------------------------

'ಹರಗೃಹದಿಂದ ಹರಿ ಗೃಹದಿಂ ಸುರಗೃಹದಿಂ ಬೌದ್ದಾಲಯದಿಂ ಗೊರವರ ಸವಣರ ನೆರವಿಗಳಿಂದಿಂಡಿ ನಾಡೆ ಸೋಗೈಸಿ ತೋರ್ಕಂ' ಎನ್ನುವ ಭಾವೈಕ್ಯತೆ ಸಾರುವ ಇಂಡಿ ಶಾಸನದ ಉಲ್ಲೇಖದಂತೆ ಇಂಡಿ ಇಂದು ಸರ್ವ ಧರ್ಮಗಳ ಸಮನ್ವಯದ ಬೀಡಾಗಿ ಇಂದು ಪವಾಡ ಪುರುಷ ಶ್ರೀ ಶಾಂತೇಶ್ವರನ ನೆಲವೀಡಾಗಿ 



ಶ್ರೀ  ಶಾಂತೇಶ್ವರನ ಚಾರಿತ್ರಿಕ ಹಿನ್ನಲೆ.!

---------------------------------------------

  ಕ್ರಿ. ಶ. ೧೨ ನೇ ಶತಮಾನದ ಇಂಡಿ  ಶಾಸನದ ಪ್ರಕಾರ ತನ್ನದೆಯಾದ ಆಚಾರ-ವಿಚಾರ ಸಂಪ್ರದಾಯಗಳಿಂದ ಇಂಡಿ 

ಪಟ್ಟಣ ವೈಭವದೊಂದಿಗೆ ಕಂಗೊಳಿಸುತ್ತಿತ್ತು.ಶಾಸನದ ಪ್ರಕಾರ ಅಂದು ಇಂಡಿಯಲ್ಲಿ ಎರಡು ದೇವಸ್ಥಾನಗಳಿದ್ದು  ಮೊದಲನೆಯದು ಬಂದಿನಾಥ ಎರಡನೇಯದು ಕರ ಕಂಠೇಶ್ವರ ದೇವಸ್ಥಾನಗಳು ತಮ್ಮ ಮಠಗಳೊಂದಿಗೆ ಅಸ್ತಿತ್ವದಲ್ಲಿದ್ದವು.... 


ಈಗೀನ ಕಿರಿ ಇಂಡಿ ಪುರ ಹುಟ್ಟುವ ಮುನ್ನ  ಮೊದಲು 

ಹಿರೇ ಇಂಡಿ ಅವತರಣವಾಗಿತ್ತು. ಈಗಲೂ ಹಿರೇ ಇಂಡಿಯ ಪ್ರಾಚೀನ ಇತಿಹಾಸ ನೋಡಲು ಸಿಗುತ್ತದೆ...

ಇಂಡಿ ಎಂದರೆ ಇದರ ಅರ್ಥ ಒಟ್ಟಾಗಿರುವುದು ಇನ್ನೊಂದು ಅರ್ಥದಲ್ಲಿ ಹೂವುಗಳ ಗೊಂಚಲು ಎನ್ನುವ ಸೊಗಸಾದ ಅರ್ಥಪೂರ್ಣವಾದ ಹೆಸರಿದೆ.

ಪ್ರಾಚೀನ ಕಾಲದಲ್ಲಿ ಇಂಡಿಗೆ ಪಯಕ್ಷೇತ್ರವೆಂದು ಕರೆಯುತ್ತಿದ್ದರು ಎನ್ನುವ ಪ್ರತೀತಿಯಿದೆ.....


ಇಂಡಿಯ ಶಾಂತೇಶ್ವರನ ಕುರಿತು ಸಂಶೋಧನೆ.!

----------------------------------------------------------

ಯಾವುದೇ ಒಂದು ಕ್ಷೇತ್ರದ ಸಂಶೋಧನೆಗೆ ಶಾಸನಗಳ ಆಧಾರ, ಪುರಾಣ, ಜನಪದ ಕತೆ, ಐತಿಹ್ಯಗಳು,

ಧಾರ್ಮಿಕ ನಂಬಿಕೆಗಳು ಬೇಕೆ ಬೇಕು.!ಅದರಂತೆ 

ಇಂಡಿಯ ಶಾಂತೇಶ್ವರನ ಹಿನ್ನಲೆಯನ್ನು ಹುಡುಕಿದಾಗ 

16ನೇ ಶತಮಾನದಲ್ಲಿ ಬೈರವೇಶ್ವರ ಕಥಾ ರತ್ನಾಕರ ಸೂತ್ರ ಮಣಿಯಲ್ಲಿ ಇಂಡಿಯ ಶ್ರೀಶಾಂತೇಶ್ವರನ ಉಲ್ಲೇಖ ಕಂಡು ಬರುತ್ತದೆ.ಇನ್ನೂ ಇಂಡಿ ತಾಲೂಕಿನಲ್ಲಿ 16 ನೇಯ ಶತಮಾನಕ್ಕಿಂತ ಪೂರ್ವದಲ್ಲಿ (ಹಿಂದೆ)12ನೇ ಶತಮಾನದ ಬುಯ್ಯಾರ ಶಾಸನದಲ್ಲಿ  ಪ್ರಪ್ರಥಮವಾಗಿ ನೆಲ್ಲಗಿಯ ಶಾಂತಯ್ಯ/ಕೋಲು ಶಾಂತಯ್ಯನ ಉಲ್ಲೇಖ ಕಂಡು ಬರುತ್ತದೆ. ಆ ಕಾಲದಲ್ಲಿ ಹಿರೇಬೇವನೂರ ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಶಾಂತೇಶ್ವರನ ಶಾಸನ ಮತ್ತು ದೇವಸ್ಥಾನಗಳಿರುವದು ಕೂಡಾ ನಮಗೆ ಶಾಸನಗಳ ಉಲ್ಲೇಖಗಳು ಮೇಲೆ ಬರುತ್ತವೆ. ಈ ಎರಡು. ವಿಷಯವನ್ನು ನಾವು  ಸೂಕ್ಷವಾಗಿ ಜಾಣ್ಮೆಯಿಂದ ಗಮನಿಸಿ ಬೈರವೇಶ್ವರ ಕತೆಯನ್ನು ನೋಡಿದಾಗ ಅದರಲ್ಲಿ ನಾಲ್ಕೈದು ಸಾಲಿನ 

ಶ್ರೀ ಶಾಂತೇಶ್ವರ ಶರಣನು ಒಮ್ಮೆ ಈಗೀನ ದೇವಸ್ಥಾನದಲ್ಲಿದ್ದು ಶಿವನು ಆತನನ್ನ ಪರಿಕ್ಷೆ ಮಾಡಿದಾಗ ತನ್ನ ಪ್ರಾಣವನ್ನು ಲೆಕ್ಕಿಸದೆ ಸೇವೆ ಮಾಡಿರುವ ದೃಷ್ಟಾಂತವನ್ನು ಕವಿ ದೇಶಲಿಂಗ ಶಾಂತರು ಉಲ್ಲೇಖಿಸುತ್ತಾರೆ.ಆದರೂ ಈ ಚರಿತ್ರೆಯಲ್ಲಿ ಇಂಡಿಯ ಶಾಂತೇಶ್ವರನ ಹಿನ್ನಲೆ ಮುನ್ನಲೆ ಓದುಗರಿಗೆ ಪರಿಪೂರ್ಣವಾಗಿ ಕಂಡು ಬಂದಿರುವದಿಲ್ಲ.!


ಇನ್ನೂ ಇಂಡಿ ತಾಲೂಕಿನ ಬುಯ್ಯಾರದ ನೆಲುವಿಗೆ 

ಶಾಂತಯ್ಯನೇ ನಮಗೆ ಕೋಲು ಶಾಂತಯ್ಯನಾಗಿ

ಡಾ. ಚಿದಾನಂದ ಮೂರ್ತಿಯವರ ಪ್ರಕಾರ ಕಂಡು ಬರುತ್ತಾನೆ.! ಕೋಲು ಶಾಂತಯ್ಯನು ವಚನಾಂಕಿತ ಪುಣ್ಯಾರಣ್ಯ ಘನ ಭೀಮೇಶ್ವರ ಲಿಂಗ ನಿರಂಗ ಸಂಗ.!

ಎನ್ನುವದಾಗಿದೆ. ಬುಯ್ಯಾರ ಪಕ್ಕದಲಿರುವ ಬೆಟ್ಟದ ಭೀಮೇಶ್ವರ (ಈಗಲೂ) ಲಿಂಗವಿದೆ.ಇದನ್ನು ಕೋಲು ಶಾಂತಯ್ಯರು ತಮ್ಮ ವಚನಾಂಕಿತವಾಗಿ ಬಳಸಿಕೊಂಡಿದ್ದಾರೆ.

ಎಂದು ನಾವು ಅಭಿಪ್ರಾಯಸಬಹುದು...


ಇನ್ನೂ ನೆಲ್ಲಗಿಯ (ಕೋಲು)ಶಾಂತಯ್ಯರ ವಂಶಾವಳಿಯನ್ನು

ಹಾಸನ ಜಿಲ್ಲೆಯ ಅರಕಲಗೂಡಿನ ಬಸವಾ ಪಟ್ಟಣದ ಕೇರಳಾಪುರದ ವೀರಭದ್ರನ ದೇವಸ್ಥಾನದಲ್ಲಿ ಈ ರೀತಿಯಾಗಿ ನಮಗೆ ಕಂಡು ಬರುತ್ತದೆ.

ನೆಲವಿಗಿ ಶಾಂತಯ್ಯ ಆತನ ಮಗ ರೇವಣ ದೇವ ->ಇಮ್ಮಡಿ ಸಾತಿ ದೇವ > ಕುಮಾರ ರೇವಣದೇವ >ಸಾತಿದೇವ ಹೀಗೆ ಕಂಡು ಬರುತ್ತದೆ.ಈ ಶಾಸನವನ್ನು ನಾಡಿನ ಹೆಹರಾಂತ ಸಂಶೋಧಕ  ಸೀತಾರಾಮ ಜಹಾಗೀರದಾರ ಸಂಶೋಧನೆ ಮಾಡಿ ಬೆಳಕು ಚೆಲ್ಲಿದ್ದಾರೆ....


ಬಸವೋತ್ತರ ಶರಣೆಯಲ್ಲಿ ಇಂಡಿಯ ರೇಕಮ್ಮ ಎನ್ನುವ ಹೆಸರಿನ ಶಿವಶರಣೆ ನಮಗೆ ಕಂಡು ಬರುತ್ತಾಳೆ.! ಅವಳ ಪತಿಯ ಹೆಸರು ರೇವಣಸಿದ್ದ (ದೇವ).! ಅಧ್ಯಯನದ ಪ್ರಕಾರ ಇತನ ತಂದೆ ಶಾಂತಯ್ಯನೆಂದು ಕಂಡು ಬರುತ್ತದೆ.!ಈಗಾಗಲೇ  ಬಸವಾ ಪಟ್ಟಣದ ಶಾಸನದಲ್ಲಿ ನಮಗೆ ಶಾಂತಯ್ಯರ ಮಗ> ರೇವಣದೇವನಂಬುವನು ಕಂಡು ಬರುತ್ತಾನೆ.!ಇತನ ಪತ್ನಿಯ ಹೆಸರು ರೇಕಮ್ಮ ರೇಕಮ್ಮಳಬರುವದು.ಉಲ್ಲೇಖವನ್ನು ಸಾನಂದ ಚರಿತೆಯಲ್ಲಿ ಗಮನಿಸಿದಾಗ'ಇಂಡೆಯ ರೇಕಮ್ಮ' ಎಂದು ಕಂಡು ಬರುವದು.ಇದು ಇಂಡಿಯ ಶಾಂತೇಶ್ವರನ ಸಂಶೋಧನೆಯಲ್ಲಿ ನಮಗೆ ಅತೀ ಮಹತ್ವದ ವಿಚಾರವಾಗಿ ಕಂಡು ಬರುವದು...!


ಇಡೀ ಸಂಶೋಧನೆಯನ್ನು ಗಮನಿಸಿದಾಗ ನಮಗೆ ಕಂಡು ಬರುವ ತೌಲನಿಕ ಅಧ್ಯಯನ ಪ್ರಕಾರ ನೆಲ್ಲಗಿಯ ಶಾಂತಯ್ಯನೇ>ಕೋಲು ಶಾಂತಯ್ಯ>ಕೋಲು ಶಾಂತಯ್ಯನೆ>ಇಂಡಿಯ ಶಾಂತೇಶ್ವರ ಎನ್ನುವದು ಕಂಡು ಬರುತ್ತದೆ..!!!


ಹಾಗಂತ ಯಾವುದು ಅಂತಿಮ ನಿರ್ಣಯವಲ್ಲ 

ಏಕೆಂದರೆ ಸಂಶೋಧನೆ ಎನ್ನುವದು ನಿಂತ ನೀರಲ್ಲ.!


ಜನಪದ ಕತೆಯಲ್ಲಿ ಶ್ರೀ ಶಾಂತೇಶ್ವರ.!

----------------------------------------------

ನೂರಾರು ವರ್ಷಗಳ ಹಿಂದೆ ಈಗಿನ ಶಾಂತೇಶ್ವರ ದೇವಾಲಯದ ಪ್ರದೇಶದಲ್ಲಿ ಒಂದು ದೊಡ್ಡದಾದ ಬನ ಪ್ರದೇಶವಿತ್ತು.ಅತೀ ವಿರಳ ಜನಸಂಖ್ಯೆಯಿರುವ ಈ ಕಾಡು ಪ್ರದೇಶದಲ್ಲಿ ದಿನಾಲೂ ಒಂದು ಆಕಳು ಬಂದು ಇಲ್ಲಿನ ಹುತ್ತದಲ್ಲಿ ಬಂದಿಯಾಗಿದ್ದ ಬನದ ಲಿಂಗಕ್ಕೆ ಹಾಲನ್ನು ಹಿಂಡುತ್ತಿತ್ತು.ಒಮ್ಮೆ ಈ ಕೌತುಕವನ್ನು ಗಮನಿಸಿದ  

ವ್ಯೆಕ್ತಿಯೊರ್ವ ಪುರದ ಪ್ರಮುಖ ಜನರಿಗೆ ಮಾಹಿತಿ ತಿಳಿಸಿದಾಗ ಜನರು ಕುತೂಹಲದಿಂದ ಓಡೋಡಿ ಬಂದು ಹುತ್ತು ಅಗೆದು ನೋಡಿದಾಗ ಅದರಲ್ಲಿ ಲಿಂಗವೊಂದು ಕಂಡು ಬಂದಿತು.....


ಇದರಿಂದ ಆಶ್ಚರ್ಯ ಚಕಿತರಾದ ಜನರು ನಿತ್ಯವು ಇಲ್ಲಿನ ಲಿಂಗಕ್ಕೆ ಭಯ ಭಕ್ತಿಯಿಂದ ಪೂಜಿಸ ತೊಡಗಿದರು.ಇಲ್ಲಿ ಪೂಜೆಗೊಳ್ಳುತ್ತಿದ್ದ ಲಿಂಗ ದೇವಾಲಯದ ಪ್ರದೇಶಕ್ಕೆ ಮುಂದೆ ಕೆಲ ವರ್ಷಗಳ ನಂತರ ಶ್ರೀ ಸದ್ಗುರ ಶಾಂತೇಶ್ವರರೆಂಬ ಪವಾಡ ಪುರುಷನ ಆಗಮನವಾಯಿತು. 

ಶ್ರೀ ಶಾಂತೇಶ್ವರರು ಹಲವಾರು ವರ್ಷಗಳಿಂದ ಇಲ್ಲಿನ ದೇವಸ್ಥಾನದಲ್ಲಿ ನೆಲೆನಿಂತು ಅನೇಕ ರೀತಿಯ ಆಧ್ಯಾತ್ಮಿಕ ಕ್ರಾಂತಿ,ಯೋಗ, ಜೀವನ ದರ್ಶನ,

ಪಾಠ-ಪ್ರವಚನ ಪವಾಡಗಳನ್ನು ಮಾಡಿ ಜನಮಾನಸದಲ್ಲಿ ನೆಲೆ ನಿಂತರು.ಅವರು ಇಂಡಿಯನ್ನು ತಮ್ಮ ಧಾರ್ಮಿಕ ಸೇವೆಗಳಿಂದ ಕಾರ್ಯಕ್ಷೇತ್ರ,ಕರ್ಮಕ್ಷೇತ್ರ,

ಧರ್ಮಕ್ಷೇತ್ರವಾಗಿ ಮಾಡಿಕೊಂಡ ಪರಿಣಾಮ ಇಂದು ಇಂಡಿ ಶ್ರೀ ಶಾಂತೇಶ್ವರನ ಸುಕ್ಷೇತ್ರವೆಂದು ಪರಿಚಯವಾಗಿ ಲೋಕ ಪ್ರಸಿದ್ಧಿಯಾಗಿ ಇತಿಹಾಸವಾಗಿದೆ.....


ಶ್ರೀ ಶಾಂತೇಶ್ವರನ ಪವಾಡಗಳು.!

---------------------------------------

ಇಂಡಿಯ ಶ್ರೀ ಸದ್ಗುರು ಶಾಂತೇಶ್ವರರ ಮಾಡಿದ ಪವಾಡಗಳ ಕುರಿತು ಇಲ್ಲಿನ ಭಕ್ತರು ಈಗಲೂ ಕೊಂಡಾಡುತ್ತಾರೆ.ಒಮ್ಮೆಊರಿನ ಬಡವಿ ಹೆಣ್ಣು ಮಗಳೊಬ್ಬಳ ಕೂಸು ದುರಂತದಿಂದ ಅಸು ನೀಗಿದಾಗ ದೇವಸ್ಥಾನದ ದಿಬ್ಬದ ಮೇಲೆ ನಿಂತ ಶಾಂತೇಶ್ವರ ಮಹಾ ಮಹೀಮರು ಸತ್ತ ಹಸುಗೂಸನ್ನು ಬದುಕಿಸಿ ಪವಾಡ 

ಮೆರೆದು ಜನಪ್ರೀಯರಾದರು.....


ಇಂಡಿಯ ಶ್ರೀ ಶಾಂತೇಶ್ವರರು ನಿತ್ಯವು ಕಲ್ಯಾಣದ 

ಅನುಭವ ಮಂಟಪಕ್ಕೆ ಹೂವುಗಳ ದಂಡೆಯ ಹಾರವನ್ನು ಕಳುಹಿಸುತಿದ್ದರು ಎನ್ನುವ ವಾಡಿಕೆಯ ಮಾತುಗಳು 

ಕೂಡಾ ಇಂಡಿಯಲ್ಲಿ ಈಗಲೂ ಚಾಲ್ತಿಯಲ್ಲಿವೆ... 

ಹಾಗೂ ಇವರು ಇಂಡಿಯಲ್ಲಿ ಚಮತ್ಕಾರದ ಅಕ್ಕಿಯ ಪವಾಡವನ್ನು ಮಾಡಿದ ಪ್ರತೀತಿಯಿದೆ. 

ಈಗಲೂ ಶಾಂತೇಶ್ವರ ದೇವಸ್ಥಾನದ ಲಿಂಗಕ್ಕೆ ಕ್ವಿಂಟಾಲ್ ಗಟ್ಟಲೆ ಅಕ್ಕಿಯನ್ನು ಬರೀ ಒಂದೇ ಒಂದು ದಾರದ ಎಳೆಯಿಂದ ಕಟ್ಟುತ್ತಾರೆ.ಸೂಜಿಗಲ್ಲಿನಂತೆ ಸೆಳೆಯುವ ಈ ಮನ ಮೋಹಕ ದೃಶ್ಯವನ್ನು ಕಾಣಲು ಜನರು ಕಾತುರದಿಂದ ಕಾಯುತ್ತಾರೆ.....



ಇಲ್ಲಿನ ಭಕ್ತರ ಸಣ್ಣಪುಟ್ಟ 

ಕಾಯಿಲೆಗಳಿಗೆ ಶ್ರೀ ಶಾಂತೇಶ್ವರನ

ಬೆತ್ತದ ಸ್ಪರ್ಶದಿಂದ ಭಕ್ತರ ಶಾರೀರಿಕ ಪೀಡೆಗಳು ಮರೆಯಾಗಿರುವ ಅನೇಕ ನಿದರ್ಶನಗಳನ್ನು ನಾವು ಕಾಣಬಹುದು.ಸೂಫಿ ಸಂತ ಮಂಜಲೇಪೀರನಿಗೆ ದೃಷ್ಠಿ ನೀಡಿದ ಉದಾಹರಣೆಯೂ ಕೂಡಾ ಒಂದಾಗಿದೆ.


ಇಂಡಿ ನಗರದ ಆರಾಧ್ಯ ದೇವನಾಗಿರುವ ಶ್ರೀಶಾಂತೇಶ್ವರನಿಗೆ ನೆಲ್ಲಕ್ಕಿಯ ನೈವಿದ್ಯ ಅತ್ಯಂತ ಇಷ್ಟವಾದ ಸಂಗತಿಯಾಗಿದೆ. ಇದರಿಂದ ಇಲ್ಲಿನ ಜನರು ಮೊದಲು ಶಾಂತೇಶ್ವರನಿಗೆ ತಮ್ಮ ಹೊಲ ಗದ್ದೆಗಳಲ್ಲಿ ನೆಲ್ಲಕ್ಕಿ ಬಿತ್ತಿ ಬೆಳೆಯುವ ಪದ್ದತಿ ರೂಡಿಯಲ್ಲಿತ್ತು.. ಇದಕ್ಕೊಂದು ಉದಾಹರಣೆಯ ಜನಪದ ನುಡಿ ಹೇಳಬೇಕಾದರೆ ಚಡಚಣ ಮುಂದ ಚವಣಕ್ಕಿ.! 

ಅದು ಆಯ್ಕೊಂಡು ತಿನ್ನವದು ಅವಲಕ್ಕಿ! ಇಂಡಿ ಶಾಂತಯ್ಯಗೇರುವದ ನೆಲ್ಲಕ್ಕಿ...!!ನೆಲ್ಲಕಿಯನ್ನು ಲಿಂಗ ಪೂಜೆಗೆ ಕಟ್ಟುವ, ನೈವಿದ್ಯೆ ಹಿಡಿಯುವ ಭಕ್ತಿಯ ಪದ್ದತಿ ಇಂದಿಗೂ ಕೂಡಾ ಬಹಳಷ್ಟು ರೂಡಿಯಲ್ಲಿದೆ....


ಶ್ರೀ ಶಾಂತೇಶ್ವರ ದೇವಸ್ಥಾನದ ಹಿನ್ನಲೆ!

-----------------------------------------------

ಈಗಿನ ಶ್ರೀ ಶಾಂತೇಶ್ವರ ದೇವಾಲಯವು ಹೋಳ್ಕರ ಶೈಲಿಯಿಂದ ನಿರ್ಮಿತವಾಗಿದ್ದು ಬಹಳಷ್ಟು ಸುಂದರ ಕಲಾಕೃತಿಯನ್ನು ಹೊಂದಿದೆ. ಇದು ಮೊದಲು ವೈಷ್ಣವ ಶೈಲಿಯ ಶಿವನ ಆರಾಧನ ಮಂದಿರವಾಗಿತ್ತು.ಈ ರೀತಿಯ ಮತ ಪಂಥಗಳ ಸಾಮರಸ್ಯ ಸಾರುವ ದೇವಾಲಯಗಳು ರಾಷ್ಟ್ರಕೂಟರ ಕಾಲದಲಿ ಹೆಚ್ಚಾಗಿ ನಿರ್ಮಿತವಾಗಿದ್ದವು. ಈ ದೇವಸ್ಥಾನವು ಕೆಲವು ಬಾರಿ ಜೀರ್ಣೋದ್ದಾರವಾಗಿದೆ.

ಇಲ್ಲಿನ ದೇವಾಸ್ಥಾನದ ಲಿಂಗಕ್ಕೆ ಶ್ರೀಶೈಲ ಪದ್ಧತಿಯಂತೆ ತ್ರಿಕಾಲ ಪೂಜೆ ನಡೆಯುತ್ತದೆ...ಅದು ಬಾಲ್ಯ- ಯೌವ್ವನ-ಮುಪ್ಪನ್ನು ಹೋಲುತ್ತ ಮನುಷ್ಯನ ಜೀವನ ಚಕ್ರವನ್ನು ಹೋಲುವ ಅದ್ಭುತವಾದ ಮೌಲ್ಯಾದಾರಿತ ಸಂಯೋಜನೆ ಹೊಂದಿದೆ ಎಂದು ಅಭಿಪ್ರಾಯಸಲಾಗಿದೆ..


ಜಾತ್ರೆಯ ವೈಶಿಷ್ಟಗಳು.!

-----------------------------

ಶಾಂತೇಶ್ವರ ಜಾತ್ರೆ ಮೂರು ದಿನಗಳ ಕಾಲ ನಿರಂತರವಾಗಿ ಜರಗುವದು. ಈ ಜಾತ್ರೆಯಲ್ಲಿ ಪುರವಂತರ ವೀರಗಾಸೆ, ಸಾಮೂಹಿಕ ವಿವಾಹ, ಅಕ್ಕಿಯ ಪೂಜೆ, ಅಣ್ಣ ತಮ್ಮರೆಂಬ ಎರಡು ನಂದಿಕೋಲ ಮೆರವಣಿಗೆ,ಸಿಡಗಾಯಿ ಒಡೆಯುವ ಪದ್ದತಿ, ಮಂಜಲೆ ಪೀರನಿಗೆ ಗಂಧ ಗಲೀಪು ಅರ್ಪಣೆ, ಜಂಗಿ ನಿಖಾಲಿ ಕುಸ್ತಿ, ಚಿತ್ರ ವಿಚಿತ್ರ ಮದ್ದು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ಜರಗುತ್ತವೆ.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು