ಕನ್ನಡ ಜಾನಪದ ಪರಿಷತ್ತಿನ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ-ಶ್ರೀ ಪಂಡಿತ ಭೀ ಅವಜಿ ನೇಮಕ.
ಕನ್ನಡ ಜಾನಪದ ಪರಿಷತ್ತಿನ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ-ಶ್ರೀ ಪಂಡಿತ ಭೀ ಅವಜಿ ನೇಮಕ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ , ಕನ್ನಡ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷ ರನ್ನಾಗಿ ಶ್ರೀ ಪಂಡಿತ ಭೀ ಅವಜಿ ಇವರನ್ನು ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿ ಅವರು ಆದೇಶ ಹೊರಡಿಸಿದ್ದಾರೆ.ಆದೇಶದಲ್ಲಿ ಕರ್ನಾಟಕ ರಾಜ್ಯಾದ್ಯಾಂತ ಜಾನಪದ ಕಲೆಗಳ ಕ್ಷೇತ್ರಕಾರ್ಯ, ದಾಖಲೀಕರಣ, ತರಬೇತಿ ಮೂಲಕ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಿಯಾ ಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಸ್ತು ಸಮಗ್ರಹ, ಧ್ವನಿ ಮುದ್ರಣ, ಜಾನಪದ ಕಲಾವಿದ ಮಾನ-ಸನ್ಮಾನ-ಪ್ರಶಸ್ತಿ ಪ್ರಧಾನ ಇತ್ಯಾದಿ ಕೆಲಸಗಳನ್ನು ನಿರ್ವಹಿಸುವತ್ತ ಕಾರ್ಯಪ್ರವೃತ್ತವಾಗಿದೆ.
ಇದೀಗ ತನ್ನ ಎಲ್ಲಾ ನಗರ ಕೇಂದ್ರಿತ ಜಾನಪದೀಯ ಚಟುವಟಿಕೆಗಳನ್ನು ತಮ್ಮ ತಾಲ್ಲೂಕಿನ ಗ್ರಾಮ/ಯೊಬ್ಬಳಿ ಹಂತದಿಂದಲು ನಿರ್ವಹಿಸಲು ತಮ್ಮನ್ನು "ಕನ್ನಡ ಜಾನಪದ ಪರಿಷತ್‌ನ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ" ಈ ದಿನದಿಂದ ಮುಂದಿನ ಆದೇಶದವರೆಗೂ ನೇಮಕ ಮಾಡಲಾಗಿದೆ. ಹಾಲಿ ಇದ್ದ ತಾಲೂಕು ಅಧ್ಯಕ್ಷ ಶ್ರೀ ಆರ್ ವಿ ಪಾಟೀಲ ಇವರನ್ನು ವಿಜಯಪುರ ಜಿಲ್ಲಾ ಘಟಕದ ಸಮಿತಿಗೆ ಬಡ್ತಿ ನೀಡಲಾಗಿದೆ.ತಾಲ್ಲೂಕು ಸಮಿತಿಯನ್ನು ರಚಿಸಿ ಅದರ ಪಟ್ಟಿಯನ್ನು 15 ದಿನದೊಳ್ಳಗಾಗಿ ಈ ಕಛೇರಿಗೆ ಜಿಲ್ಲಾಧ್ಯಕ್ಷರ ಮೂಲಕ ಅನುಮೋದನೆಗೆ ಕಳುಹಿಸಲು ಕೋರಿದೆ ಎಂದು ತಿಳಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ