ಸಮಾಜದ ಒಳಿತಿಗಾಗಿ ಶ್ರಮಿಸಿದ ಸಿದ್ಧರಾಮರು-ಸಂತೋಷ ಬಂಡೆ
ಸಮಾಜದ ಒಳಿತಿಗಾಗಿ ಶ್ರಮಿಸಿದ ಸಿದ್ಧರಾಮರು-ಸಂತೋಷ ಬಂಡೆ
ಇಂಡಿ: ಯೌವ್ವನದಲ್ಲೇ ಸಮಾಜಮುಖಿ ಬದುಕನ್ನು ಆರಂಭಿಸಿದ್ದ ಸಿದ್ಧರಾಮರು ಕರ್ಮಯೋಗಿ, ಶಿವಯೋಗಿ, ಕಾಯಕಯೋಗಿಯಾಗಿ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿ ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಶಿವಯೋಗಿ ಸಿದ್ಧರಾಮರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ಸಿದ್ಧರಾಮೇಶ್ವರರು 12ನೇ ಶತಮಾನದಲ್ಲೇ ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸುವ ಮೂಲಕ ಜಲ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಕಾಯಕ ಮತ್ತು ಜನಹಿತಾಸಕ್ತಿ ಅವರ ಬದುಕಿನ ಎರಡು ಕಣ್ಣುಗಳಾಗಿದ್ದವು. ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರಾಗಿದ್ದಾರೆ ಎಂದು ಹೇಳಿದರು.
ಹಿರಿಯ ಶಿಕ್ಷಕಿ ಎಸ್ ಪಿ ಪೂಜಾರಿ ಮಾತನಾಡಿ, 12ನೇ ಶತಮಾನದಲ್ಲಿ ಎರಡು ಅಂಕಿತನಾಮವಿರುವ ಏಕೈಕ ವ್ಯಕ್ತಿ ಶಿವಯೋಗಿ ಸಿದ್ಧರಾಮರು. ಅವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಸಂಗತಿಗಳು, ಸಾಮಾಜಿಕ ಕಳಕಳಿ, ಸರಳ ತತ್ವಗಳು ಎದ್ದು ಕಾಣುತ್ತವೆ ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಗ್ರಾಮಸ್ಥರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ