ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಚಟುವಟಿಕೆಗಳಿಗೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಅಬುತಾಲಿಬ ಹೂಸೂರ.

 ಇಂಡಿ. ಪಟ್ಟಣದ  ಮಾಡಲ್ ಪಬ್ಲಿಕ್ ಉರ್ದು ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವವು ಉತ್ಸಾಹಭರಿತ ವಾತಾವರಣದಲ್ಲಿ ಆಚರಿಸಲಾಯಿತು. ಈ ಕ್ರೀಡೋತ್ಸವವು ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಮಹತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನವಾಗಿತ್ತು.

ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ನಿರ್ದೇಶಕ ಅಬುತಾಲಿಬ ಹೂಸುರ ಮಾತನಾಡಿ ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಆರೋಗ್ಯವಾದ ಶರೀರದಲ್ಲಿ ಆರೋಗ್ಯಕರವಾದ ಮನಸ್ಸಿರುತ್ತದೆ ಎಂದು ಪ್ರತಿಪಾದಿಸಿದರು. ಕ್ರೀಡೆಗಳು ವಿದ್ಯಾಭ್ಯಾಸದ ಒಂದು ಅಂಗವಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕ ಆರೋಗ್ಯ ಚೆನ್ನಾಗಿರುವವರಿಗೆ ಮಾನಸಿಕ ಏಕಾಗ್ರತೆ ಹಾಗೂ ಆರೋಗ್ಯ ಲಭಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಚಟುವಟಿಕೆಗಳಿಗೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಕ್ರೀಡಾಪಟುಗಳು ಸೋಲು-ಗೆಲುವಿಗಿಂತ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಭಾಗವಹಿಸದವರೆಲ್ಲ ಗೆಲ್ಲಲು ಸಾಧ್ಯವಿಲ್ಲ. ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಸೋಲು ಗೆಲುವಿನ ಸೋಪಾನ. ಶ್ರಮವಹಿಸಿ ಸತತ ಅಭ್ಯಾಸ ಮಾಡಿದರೆ ಜಯ ದೊರೆಯುತ್ತದೆ. ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಇಂಡಿ  ಪುರಸಭೆ ನಾಮ ನಿರ್ದೇಶಕ ಸದಸ್ಯ ಅಬ್ದುಲ್ ರಶೀದ ಅರಬ ಮಾತನಾಡಿ ಕ್ರೀಡೆಗಳು ಶಾರೀರಿಕ ಆರೋಗ್ಯ ಮಾತ್ರವಲ್ಲ, ಭಾವನಾತ್ಮಕ ಸಮತೋಲನ ಮತ್ತು ತಂಡದಾತ್ಮವನ್ನು ರೂಪಿಸುತ್ತವೆ. ಇಂತಹ ಕ್ರೀಡೋತ್ಸವಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. 

ಯುವ ಮುಖಂಡ ಇಮ್ರಾನ್ ಮುಜಾವರ ಈ ಕ್ರೀಡೋತ್ಸವವು ಮಕ್ಕಳಲ್ಲಿ ಶಾರಿರಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತದೆ. ಮಕ್ಕಳಿಗೆ ಕ್ರೀಡೆಗಳ ಮೂಲಕ ಸ್ವಸ್ಥ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುವುದು ನಮ್ಮ ಮುಖ್ಯ ಉದ್ದೇಶ ಈ ಶಾಲೆಯ ಮಕ್ಕಳು ಶಿಕ್ಷಣ ಜೋತೆಗೆ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಮಾಡಲಿ ಎಂದು ಹಾರೈಸಿದರು. 

 ಗುಮ್ಮಟ ನಗರಿ ವರದಿಗಾರ ಸದ್ದಾಂ ಹುಸೇನ್‌ ಜಮಾದಾರ ಮಾತನಾಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯದ ಜೊತೆಗೆ ಕ್ರೀಡೆಗಳು ಪೂರಕವಾಗುತ್ತವೆ. ದೈಹಿಕ, ಮಾನಸಿಕ ಸದೃಢತೆಗಾಗಿ ಆಟವಾಡಬೇಕು. ಇಂದು ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೂ ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮಾನ್ಯತೆ ಹಾಗೂ ಹಣ ಸಂಪಾದನೆಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಫ್ತಿ ಅಬ್ದುಲ್ ರಹಮಾನ್ ಅರಬ  ಅಭಿಪ್ರಾಯ ವ್ಯಕ್ತಪಡಿಸಿ, "ಕ್ರೀಡೆಗಳು ಶೈಕ್ಷಣಿಕ ಮತ್ತು ಶಾರೀರಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತವೆ. ಇಂತಹ ಕಾರ್ಯಕ್ರಮಗಳು ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳ ಬೆಳವಣಿಗೆಗೆ ಪ್ರಮುಖ ವೇದಿಕೆಗಳನ್ನು ರೂಪಿಸುತ್ತವೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿಈ ಕಾರ್ಯಕ್ರಮದಲ್ಲಿ ಮಕ್ಕಳ ಉತ್ಸಾಹವನ್ನು ನೋಡಲು ಸ್ಥಳೀಯ ಜನತೆ ಸಹ ಆಗಮಿಸಿ ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಹಾರೈಸಿದರು. ವಾಲಿಬಾಲ್, ಲಾಂಗ್ ಜಂಪ್, ಥ್ರೋ ಬಾಲ್ ಮುಂತಾದ ಹಲವು ಕ್ರೀಡೆಗಳಲ್ಲಿ ಮಕ್ಕಳ ಪ್ರತಿಭೆಯನ್ನು ಮೆರೆಯಲು ಅವಕಾಶ ಒದಗಿಸಿತು. 

ಈ ಸಂದರ್ಭದಲ್ಲಿ ಕ್ರೀಡಾ ಅಭಿಮಾನಿ  ಸಲಿಂ ಶೇಖ್,  ಶಾಲೆಯ ಮೂಖ್ಯೂಪಾಧ್ಯರು ರಫೀಕ ಮುಲ್ಲಾ,  ನಾಸೀರ ಇನಾಂದಾರ್, ಮುಜೀಬ ಅಫಜಲಪುರ, ನಬಿ ಬಾಗವಾನ, ಸಲಾವುದ್ದಿನ ನಾಗೂರ ನಿರೂಪಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು