ಚುನಾವಣೆಗಳು ಬರತವೇ- ಹೋಗುತ್ತವೆ ಆದರೆ ನಾವೆಲ್ಲರು ಸ್ನೇಹಮಯ ಜೀವಿಗಳಾಗಿರಬೇಕು ನಿಮ್ಮ ಎರಡು ಹಂತದ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಿಮ್ಮೆಲ್ಲರಿಗೂ ಅಬಿನಂದನೆಗಳು ಎಂದು ಶಾಸಕ ಯಶವಂತರಾಯಗೌಡ ಪಾಟೀಲ್

 ಇಂಡಿ. ಚುನಾವಣೆಗಳು ಬರತವೇ- ಹೋಗುತ್ತವೆ ಆದರೆ ನಾವೆಲ್ಲರು ಸ್ನೇಹಮಯ ಜೀವಿಗಳಾಗಿರಬೇಕು ನಿಮ್ಮ  ಎರಡು ಹಂತದ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಿಮ್ಮೆಲ್ಲರಿಗೂ  ಅಬಿನಂದನೆಗಳು ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು. 


 ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂಡಿ ಪಟ್ಟಣದ ನೌಕರ ಸಂಘದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ  ನೂತನವಾಗಿ ಆಯ್ಕೆಯಾದ ಇಂಡಿ ತಾಲೂಕಾ ನೌಕಕರ ಸಂಘದ  ಅಧ್ಯಕ್ಷರಾದ  ಬಸವರಾಜ ರಾವುರ  ಮತ್ತು ಪದಾಧಿಕಾರಿಗಳು ಹಾಗೂ ನಿರ್ದೇಶಕ ಮಂಡಳಿಯವರಿಗೂ ಹಾಗೂ ವಿಜಯಪುರ- ಬಾಗಲಕೋಟ ಅವಳಿ  ಜಿಲ್ಲೆಗಳ ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ನೂತನ  ಅಧ್ಯಕ್ಷರಾದ  ಆನಂದಗೌಡ  ಬಿರಾದಾರ ಮತ್ತು ಅವರ ಪದಾಧಿಕಾರಿಗಳ,ನಿರ್ದೇಶಕ ಮಂಡಳಿಯವರಿಗು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು 


  ನೀವು ಮಾಡುತ್ತಿರುವ ನೌಕರರ ಹಾಗೂ ಶಿಕ್ಷಕರ ಪರ ಉತ್ತಮ ಕಾರ್ಯಗಳೆ ನಿಮ್ಮನ್ನು ಗೆಲ್ಲಿಸಿದೆ. ನಾನು ಬಹಳ ದಿನಗಳಿಂದ ಗಮನಿಸುತ್ತಿರುವೆ ನಿಮ್ಮ ಈ ತಂಡದ ಕಾರ್ಯ ಶ್ಲಾಘನೀಯ ನಿಮ್ಮ  ಕಾರ್ಯಕ್ಷಮತೆ ಮತ್ತು  ಸೇವಾ ಮನೋಧೋರಣೆಯಿಂದ  ಈಗ ಜಿಒಸಿಸಿ  ಪ್ರತಿಷ್ಠಿತ ಬ್ಯಾಂಕ್  ಆಗಿದೆ ಹಾಗೂ  ಜಿಲ್ಲೆಯಲ್ಲೆ ಇಂಡಿ ತಾಲೂಕಿನ ಶಿಕ್ಷಕರ/ನೌಕರರ    ಸಂಘಟನೆ ನೌಕರರಿಗೆ  ಉತ್ತಮ ಸೇವೆ ನೀಡುತ್ತಿರುವಿರಿ ಇನ್ನಷ್ಟು ಸೇವೆ ತಾಲೂಕಿನ ಮತ್ತು  ಜಿಲ್ಲೆಯ ನೌಕರರಿಗೆ ಸಿಗಲೆಂದು ಆಶಿಸಿದರು. 

 ಸೇವಾನಿರತ ಪದವೀಧರ  ಶಿಕ್ಷಕರ ಸಂಘದಿಂದ ಸಲ್ಲಿಸಿದ PST ಶಿಕ್ಷಕರ ಹಾಗೂ ಇತರೆ  ಸಮಸ್ಯೆಗಳ ಮನವಿಯನ್ನು ,ನ್ಯಾಯಯುತವಾದ ನಿಮ್ಮ ಬೇಡಿಕೆಗಳನ್ನು ಈಡೇರಿಸಲು  ಶಿಕ್ಷಣ ಸಚಿವರಾದ  ಮಧು ಬಂಗಾರೆಪ್ಪನವರಿಗೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ  ಬೇಡಿಕೆಗಳನ್ನು ಈಡೇರಿಸಲು ಆಗ್ರಹಪಡಿಸಿ  ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. 


ವಿವಿಧ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳಿಗೆ ತಾಲ್ಲೂಕಿನ ಎಲ್ಲ ಗುರುಗಳು-ಗುರುಮಾತೆಯರ ಪರವಾಗಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಇಂಡಿ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ವೈ.ಟಿ.ಪಾಟೀಲ, ಕಾರ್ಯದರ್ಶಿ ಅಲ್ತಾಫ ಬೋರಾಮಣಿ, ಜಿಒಸಿಸಿ ಬ್ಯಾಂಕ್ ನಿರ್ದೇಶಕರಾದ  ಅರ್ಜುನ ಲಮಾಣಿ, ಅಲ್ಲಾಬಕ್ಷ ವಾಲಿಕಾರ, ಹನಮಂತ ಕುಣದಿ, ನಿಜಣ್ಣಾ ಕಾಳೆ, ಅಬೂತಾಲಿಬ ಹೂಸುರ, ಎಸ್.ವಿ.ಹರಳಯ್ಯಾ, ಕಾಂತು ಇಂಡಿ, ಸೇರಿದಂತೆ ಇತರರು ಇದ್ದರು. 


 ಶಿಕ್ಷಕರ ಸಮಸ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಶಿಕ್ಷಕರ ಸಂಘಟನೆಯ  ಎಲ್ಲ ವೃಂದ ಸಂಘಗಗಳ ಅಧ್ಯಕ್ಷರುಗಳಿಗೆ ಹಾಗೂ ಪದಾಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು