ಸಾಹಿತ್ಯ ಪ್ರೀಯರಿಗೆ ಖುಷಿಯ ಸುದ್ದಿ: ಇಂಡಿ ನಗರದಲ್ಲಿ ಅಝಿಮುಶ್ಶಾನ ಉರ್ದು ಮುಶಾಯರಾ.
ಇಂಡಿ: ಎಲ್ಲ ಸಾಹಿತ್ಯ ಪ್ರೇಮಿಗಳು ಮತ್ತು ಉರ್ದು ಸಾಹಿತ್ಯಾಸಕ್ತರಿಗೆ ತಿಳಿಸಬೇಕಾದುದು ಏನೆಂದರೆ, ಇಂಡಿ ನಗರದಲ್ಲಿ ರಾಯಲ್ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ಆಲ್ ಇಂಡಿಯಾ ಅಝಿಮುಶ್ಶಾನ ಮುಶಾಯರಾ (ಕವಿ ಸಮಾವೇಶ) ಆಯೋಜಿಸಲಾಗಿದೆ. ಈ ಸಾಂಸ್ಕೃತಿಕ ಸಮಾರಂಭದಲ್ಲಿ ದೇಶದ ಪ್ರಖ್ಯಾತ ಮತ್ತು ಪ್ರಸಿದ್ಧ ಕವಿಗಳು ಭಾಗವಹಿಸುತಿದ್ದಾರೆ ಮತ್ತು ತಮ್ಮ ಸುಂದರ ಕಾವ್ಯಗಳ ಮೂಲಕ ಶ್ರೋತೃಗಣರನ್ನು ಮಂತ್ರಮುಗ್ಧಗೊಳಿಸುತ್ತಾರೆ.
ಈ ಮುಶಾಯರಾ ಉರ್ದು ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಒಂದು ಪ್ರಮುಖ ಹಂತವಾಗಿದ್ದು, ಸಾಹಿತ್ಯಾಸಕ್ತರಿಗಾಗಿ ಒಂದ ಸ್ವರ್ಣ ಅವಕಾಶವಾಗಿದೆ. ಈ ಸ್ಮರಣೀಯ ಸಮಾರಂಭದಲ್ಲಿ ಭಾಗವಹಿಸಿ, ಅದನ್ನು ಯಶಸ್ವಿ ಮಾಡಲು ನಿಮ್ಮೆಲ್ಲರಿಗೂ ವಿನಂತಿ.
ದಿನಾಂಕ: ಶನಿವಾರ, 1 ಫೆಬ್ರವರಿ 2025, ಸಂಜೆ 8 ಗಂಟೆಗೆ ಸ್ಥಳ: ರಾಯಲ್ ಇಂಟರ್ ನ್ಯಾಷನಲ್ ಶಾಲೆ, ಲಚ್ಚಾನ್ ರಸ್ತೆ, ಇಂಡಿ
ಕಾವ್ಯ ಮತ್ತು ಸಾಹಿತ್ಯವನ್ನು ಪ್ರೀತಿಸುವವರಿಗಾಗಿ ಇದು ಒಂದು ಅಪೂರ್ವ ಅವಕಾಶ. ಖ್ಯಾತ ಕವಿಗಳ ಸುಂದರ ಕಾವ್ಯವನ್ನು ಆಲಿಸಿ, ಉರ್ದು ಸಾಹಿತ್ಯದ ಮಧುರ ಸುಗಂಧವನ್ನು ಅನುಭವಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅಸ್ಲಂ ಪಟೇಲ್: 9686645050, ಮೊಹಮ್ಮದ್ ರಫೀಕ್ ಗುಲ್ಬರ್ಗಾ: 9945786044

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ