ಕೆಜಿಪಿಎ ಅಸೋಶಿಯೇಶನ್ ಬಿಜಾಪುರ: ಚಳಿಗಾಲದಲ್ಲಿ ಬಡವರಿಗೆ ಬ್ಲಾಂಕೆಟ್ ವಿತರಣೆ
ಕೆಜಿಪಿಎ ಅಸೋಶಿಯೇಶನ್ ಬಿಜಾಪುರ: ಚಳಿಗಾಲದಲ್ಲಿ ಬಡವರಿಗೆ ಬ್ಲಾಂಕೆಟ್ ವಿತರಣೆ
ಬಿಜಾಪುರ: ಕೆಜೆಪಿಎ ಅಸೋಸಿಯೇಶನ್ ಬಿಜಾಪುರ ವತಿಯಿಂದ ಬಡ ಹಾಗೂ ಆಶ್ರಯವಿಲ್ಲದ ವ್ಯಕ್ತಿಗಳಿಗೆ ಚಳಿಗಾಲದ ಬ್ಲಾಂಕೆಟ್ ವಿತರಣೆ ಕಾರ್ಯಕ್ರಮವು ನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೆದ್ದಾರಿ ಪಕ್ಕದ ಫುಟ್‌ಪಾತದಲ್ಲಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದರ್ಗಾ, ಮಂದಿರದಲ್ಲಿ, ನಿದ್ರಿಸುತ್ತಿರುವ ಬಡಜನರ ನೆರವಿಗೆ ಬಂದ ಸಂಘಟನೆಯ ಕಾರ್ಯಕರ್ತರು, ತಕ್ಷಣವೇ ಬ್ಲಾಂಕೆಟ್‌ಗಳನ್ನು ವಿತರಿಸಿ, ಸಾಮಾಜಿಕ ಕಳಕಳಿಯ ಉದಾಹರಣೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಜಿಯಾ ಪಠಾಣ್ ಚಳಿಗಾಲದಲ್ಲಿ ಬಡವರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ನಮ್ಮ ಸಣ್ಣ ಸಹಾಯದಿಂದ ಅವರು ಚಳಿಯ ತೀವ್ರತೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕೆಜಿಪಿಎ ಅಸೋಸಿಯಶನ್ ಸದಸ್ಯರು ಹೊದಿಕೆ ವಿತರಣೆ ಕಾರ್ಯವನ್ನು ಪ್ರತಿವರ್ಷವೂ ನಡೆಸುತ್ತಾ ಬಂದಿದ್ದಾರೆ. ವಿಶೇಷವಾಗಿ ಡಿಸೆಂಬರ್ ತಿಂಗಳಲ್ಲಿ ಈ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ಡಿಸೆಂಬರ್ ಬಂತೆಂದರೆ ಎಲ್ಲೆಲ್ಲೂ ಚಳಿ ಹೆಚ್ಚಾಗಿರಲಿದ್ದು, ಈ ವೇಳೆ ಅನೇಕರು ಮನೆಯಿಂದ ಹೊರಗೆ ಬರಲು ಸಹ ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಮನೆ ಇಲ್ಲದೆ ಎಲ್ಲೆಂದರಲ್ಲಿ ಬದುಕು ದೂಡುವ ನಿರಾಶ್ರಿತ ಜನರಿಗೆ ನೆರವಾಗುವ ಉದ್ದೇಶದಿಂದ ಕೆಜಿಪಿಎ ಸದಸ್ಯರು ಸದ್ದಿಲ್ಲದೆ ಹೊದಿಕೆ ವಿತರಣೆ ಮಾಡುತ್ತಾ ಬಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರು, ಸ್ಥಳೀಯ ನಾಯಕರು, ಮತ್ತು ಹಲವಾರು ಹಿತೈಷಿಗಳು ಪಾಲ್ಗೊಂಡಿದ್ದರು. ಫುಟ್‌ಪಾತದಲ್ಲಿ ಬಡವರ ಜೊತೆ ನಿಂತು ಅವರ ಮಾತು ಕೇಳಿದ ಕಾರ್ಯಕರ್ತರು, ಮುಂದಿನ ದಿನಗಳಲ್ಲಿ ಈ ರೀತಿಯ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.
ಈ ಕಾರ್ಯವು ಹಲವರ ಪ್ರಶಂಸೆಯನ್ನು ಗಳಿಸಿತು, ಮತ್ತು ಸಾರ್ವಜನಿಕರಲ್ಲಿ ಸಾಮಾಜಿಕ ಜಾಗೃತಿಯ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಯಿತು. ಪ್ರತಿದಿನ ರಾತ್ರಿ 9:30 ರಿಂದ ತಡರಾತ್ರಿ 12 ಗಂಟೆವರೆಗೂ ಸಹ ಈ ಕಾರ್ಯವನ್ನು ಮಾಡುತ್ತಾರೆ.
ಈ ಸಂದರ್ಭದಲ್ಲಿ ಕೆಜಿಪಿಎ ಅಸೋಸಿಯೇಷನ್ ಜೈಂಟ್ ಸೆಕ್ರೆಟರಿ ಸೈಯದ್ ಖಾದರಿ ಗುಡಗುಂಟಿ, ನವೀದ ಶೇಖ್ ಸೇರಿದಂತೆ ಅನೇಕರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ