ಇಂಡಿ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಪುಜಾರಿ ಅವರ ವತಿಯಿಂದ ದನಗಳು ಮಾಲೀಕರಿಗೆ ನೋಟಿಸ್.
ಇಂಡಿ. ಪಟ್ಟಣ ಬಹುತೇಕ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ವಾಹನ ಸವಾರರು, ಜನರು, ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 30ರಿಂದ 40 ದನಗಳು ನಿತ್ಯ ಕಂಡು ಬರುತ್ತವೆ. ರಸ್ತೆ ಮೇಲೆ ಕುಳಿತರೆ ಮೇಲೆ ಏಳುವುದೇ ಇಲ್ಲ.
ಪಟ್ಟಣದ ಪ್ರಮುಖ ರಸ್ತೆಗಳಾದ ಸಿಂದಗಿ ರಸ್ತೆ, ವಿಜಯಪುರ ರಸ್ತೆ, ಅಗರಖೇಡ ರಸ್ತೆ, ಚಡಚಣ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳ ಓಡಾಡಿಕೊಂಡಿವೆ. ಅಲ್ಲದೆ ಬಸವೇಶ್ವರ ವೃತ್ತದಲ್ಲಿ ನಿಲ್ದಾಣದಲ್ಲಿ, ರಸ್ತೆ ಮೇಲೆ ಕುಳಿತುಕೊಳ್ಳುವ ದನಗಳು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ. ಕೆಲವೊಮ್ಮೆ ವಾಹನಗಳು ದನಗಳ ಕಾಲುಗಳ ಮೇಲೆಯೇ ಹಾದು ಹೋಗಿರುವ ಘಟನೆಗಳೂ ನಡೆದಿವೆ. ಆದರೂ ದನಗಳ ಮಾಲೀಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಗಾಂಧಿ ವೃತ್ತದಲ್ಲಿಯ ತರಕಾರಿ ಮಾರುಕಟ್ಟೆಯಲಂತೂ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ. ಮಾರಟಕ್ಕೆ ಇಟ್ಟ ಹಣ್ಣು–ತರಕಾರಿಗಳನ್ನು ತಿನ್ನಲು ನುಗ್ಗಿ ಬರುತ್ತವೆ. ದನಗಳನ್ನು ಮಾರುಕಟ್ಟೆಯಿಂದ ಓಡಿಸಲು ವ್ಯಾಪಾರಿಗಳು ಹರಸಾಹಸ ಪಡುವಂತಾಗಿದೆ. ಒಂದು ಕಡೆ ಓಡಿಸಿದರೆ ಮತ್ತೊಂದು ಅಂಗಡಿಗಳಿಗೆ ನುಗ್ಗುತ್ತವೆ. ನಿತ್ಯ ವ್ಯಾಪಾರ ಮಾಡುವುದಕ್ಕಿಂತ ಹೆಚ್ಚಾಗಿ ದನ ಓಡಿಸುವುದೇ ದೊಡ್ಡ ಕೆಲಸವಾಗಿದೆ. ಸಂತೆಯ ದಿನ ವ್ಯಾಪಾರಕ್ಕೆ ಬಂದ ಮಕ್ಕಳು, ಮಹಿಳೆಯರು, ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ.ಸೇರಿದಂತೆ ವಿವಿಧ ವಾರ್ಡಗಲ್ಲಿ ಕೂಡಾ ದನಗಳ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದರಿಂದ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ತಿವೃ ತೊಂದರೆಯಾಗುತಿದೆ.
ಈ ಸಂಬಂಧ ಪುರಸಭೆ ವತಿಯಿಂದ ದನಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಕೂಡಲೆ ಸಂಬಂದ ಪಟ್ಟ ಮಾಲೀಕರು ತಮ್ಮ ದನಗಳನ್ನು ಹಾಗೂ ಹಂದಿಗಳನ್ನು ರಸ್ತೆಗಳ ಮೇಲೆ ಬಿಡದೆ ಮುಂಜಾಗೃತ ಕ್ರಮಕೈಗೊಳ್ಳಬೇಕು ಇಲ್ಲಾ 7 ದಿನಗಳಲ್ಲಿ ಬೇರೆಡೆ ಸಾಗಿಸಬೇಕು. ಒಂದು ವೇಳೆ ಈ ಅವದಿಯಲ್ಲಿ ಸಾಗಿಸದೆ ಇದ್ದಲ್ಲಿ ದನಗಳನ್ನು ಗೋಶಾಲೆಗೆ ಇನ್ನೂ ಹಂದಿಗಳನ್ನು ಬೇರೆಡೆ ಸಾಗಿಸಲಾಗುವುದು. ಇವುಗಳನ್ನು ಯಾವುದೆ ಕಾರಣಕ್ಕೂ ಮರಳಿ ಕೊಡುವುದಿಲ್ಲ ಎಂದು ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ