ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಆಗಲು ಬಹಳ ಸ್ಪರ್ಧೆ ಎದುರಿಸಬೇಕಾಗುತ್ತದೆ. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗಲು ಯಾವುದೇ ಸ್ಪರ್ಧೆ ಇಲ್ಲ ಎಂದು ಇಂಡಿ ಉಪ ವಿಭಾಗಾಧಿಕಾರಿಗಳಾದ ಆಬೀದ ಗದ್ಯಾಳ ಹೇಳಿದರು.
ಇಂಡಿ: ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಆಗಲು ಬಹಳ ಸ್ಪರ್ಧೆ ಎದುರಿಸಬೇಕಾಗುತ್ತದೆ. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗಲು ಯಾವುದೇ ಸ್ಪರ್ಧೆ ಇಲ್ಲ ಎಂದು ಇಂಡಿ ಉಪ ವಿಭಾಗಾಧಿಕಾರಿಗಳಾದ ಆಬೀದ ಗದ್ಯಾಳ ಹೇಳಿದರು.
ನಗರದ ಪ್ರಸಿದ್ದ ಶಿಕ್ಷಣ ಸಂಸ್ಥೆ ರಾಯಲ್ ಇಂಟರ್ ನ್ಯಾಷನಲ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನದ ಉದ್ಘಾಟಿಸಿದ ನಂತರ ಮಾತನಾಡಿದರು.
"ಮನುಷ್ಯ ಒಂದು ಅಂತಹ ಯಂತ್ರ, ಅದಕ್ಕೆ ಸಮಾನವಾದ ಇನ್ನೊಂದು ಯಂತ್ರ ಇಲ್ಲ." ದೇವರು ಮನುಷ್ಯನಿಗೆ ಅದ್ಭುತ ಶಕ್ತಿ, ಸಾಮರ್ಥ್ಯ ಮತ್ತು ತಂತ್ರಜ್ಞಾನವನ್ನು ನೀಡಿದ್ದಾರೆ, ಅದು ಇತರ ಯಾವ ಯಂತ್ರದಲ್ಲಿಯೂ ಇಲ್ಲ. ನಮಗೆ ಈ ಶಕ್ತಿ ನೀಡಿರುವ ದೇವರಿಗೆ ಕೃತಜ್ಞರಾಗಬೇಕು. ಮತ್ತು ಈ ಶಕ್ತಿಯ ಸರಿಯಾದ ಬಳಕೆ ಮಾಡಿ ಗಗನಮಂಡಲದ ಎತ್ತರವನ್ನು ತಲುಪಬೇಕು. ಇಂದು ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ನೈತಿಕತೆ ಹಾಗೂ ಉತ್ತಮ ಶಿಕ್ಷಣ ನೀಡುವ ಮೂಲಕ ಒಳ್ಳೆಯ ವ್ಯಕ್ತಿತ್ವ ನಿರ್ಮಿಸಬೇಕು.
"ಮಕ್ಕಳ ಭವಿಷ್ಯ ನಿರ್ಮಾಣವಾಗುವುದು ಗುಣಮಟ್ಟದ ಶಿಕ್ಷಣದ ಮೂಲಕವೇ." ಈ ಜಗತ್ತಿನಲ್ಲಿ ಬದುಕಲು ಶಿಕ್ಷಣದ ಅಗತ್ಯವಿದೆ, ಆದರೆ ಉತ್ತಮ ಜೀವನಕ್ಕಾಗಿ ಸಂಸ್ಕೃತಿಯೂ ಅಗತ್ಯವಾಗಿದೆ. ಜೀವನ ಅಮೂಲ್ಯವಾದ್ದು. ಅದರಲ್ಲಿ ತಪ್ಪುಗಳಾಗಬಹುದು, ಆದರೆ ಅವುಗಳನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು. ಯಶಸ್ಸು ಅವಶ್ಯಕ. ಆದರೆ ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನ ಇಲ್ಲದೆ ಅದನ್ನು ಸಾಧಿಸಲಾಗದು. ತಂದೆ-ತಾಯಿ ಮತ್ತು ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅವರು ನೀಡುವ ಮಾರ್ಗದರ್ಶನದಲ್ಲಿ ಚಿಂತನೆ ಮಾಡಿ, ಸರಿಯಾದ ದಾರಿಯಲ್ಲಿ ನಡೆಯಬೇಕು.
ಈ ಸಂದರ್ಭ ನಿವೃತ್ತ ನ್ಯಾಯಾಧೀಶ ಬಿ.ಸಿ. ಬರಾದಾರ್ ಮತ್ತು ಕೆನರಾ ಬ್ಯಾಂಕಿನ ಮ್ಯಾನೇಜರ್ ಸಿದ್ಧನಗೌಡ ಬಚ್ಚಲಾಪುರ ಮಾತನಾಡಿ ಮಕ್ಕಳು ತಮ್ಮ ಗುರಿಯನ್ನು ಸಾಧಿಸಲು ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಹೆಚ್ಚಿನ ಅಂಕ ಪಡೆದು ತಮ್ಮ ಗುರಿಯತ್ತ ಸಾಗಬೇಕು ಹಾಗೂ ಮಕ್ಕಳಿಗೆ ಪಾಲಕರ ಹೆಚ್ಚಿನ ಜವಾಬ್ದಾರಿ ವಹಿಸಿ ಅವರ ತಮ್ಮ ಗುರಿ ಮುಟ್ಟುವಹಾಗೆ ಸಹಕರಿಸಬೇಕು. ಮಕ್ಕಳಿಗೆ ಶಿಕ್ಷಕರು ಎಷ್ಟು ಅವಶ್ಯವೋ ಅಷ್ಟೆ ತಂದೆ ತಾಯಿಯರ ಜವಾಬ್ದಾರಿ ಮುಖ್ಯವಾಗಿದೆ. ಈಗ ಕಲಿಯುತ್ತಿರುವ ಮಕ್ಕಳು ಮೊಬೈಲ ಹಾಗೂ ರಾಜಕಿಯ ವ್ಯಾಮೊಹಕ್ಕೆ ಒಳಗಾಗದೆ ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಉನ್ನತ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಪಡೆದು ತಾವು ಕಲಿತ ಸಂಸ್ಥೆಗೆ ಹಾಗೂ ಪಾಲಕರ ಕೀರ್ತಿಯನ್ನು ಹೆಚ್ಚಿಸಬೇಕೆಂದರು.ಈ ಸಂಸ್ಥೆಯು ಇನ್ನು ಉತ್ತರುತ್ತರವಾಗಿ ಬೆಳೆಯಲು ನನ್ನ ಸಹಾಯ ಹಸ್ತ ಯಾವಾಗಲೂ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ಲಂ ಪಟೇಲ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ದೇವರಾಜ ಟಿ., ಗೀತಾ ಟಿ.ಎಂ, ಶಬ್ನಮ್ ಕೊಕಣಿ, ಬಸವರಾಜ, ನೂರಅಹ್ಮದ್ ವಾಚಮೇಕರ್, ಮೊಹಮ್ಮದ್ ಗುಲ್ಬರ್ಗಾ, ರಿಯಾಜ್ ಹಂಡೀಕರ್, ಅಶೋಕ್ ಧೋತ್ರೆ, ಅಸ್ಲಂ ಕಡ್ನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ