ಯುವಕರು ಉಲಮಾ ಅವರೊಂದಿಗೆ ಸೇರಿ, ಕುರ್’ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ಜೀವನ ನಡೆಸಿ, ಧರ್ಮದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು:- ಅಬ್ದುಲ್ ಅಝೀಮ್ ಉಮರಿ ಮದನೀ
ಇಂಡಿ – ಪಟ್ಟಣದ ಉಮರ ಪಂಕಶನ ಹಾಲ್‌ನಲ್ಲಿ ಬಿಜಾಪುರ ಜಿಲ್ಲಾ ಜಮೀಯತ್ ಅಹ್ಲೆ ಹದೀಸ್ ಇವರು ಆಯೋಜಿಸಿದ ಜಿಲ್ಲಾ ಮಟ್ಟದ ಇಸ್ಲಾಮಿಕ ಕ್ವಿಜ್ ಸ್ಪರ್ಧೆ ನಡೆಯಿತು, ಇದರಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಲೆ ಮತ್ತು ಮದರಸಾಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮದೀನಾ ಮಸೀದ್ ಮದರಸಾ ಹುಂಚ್ಯಾಳ 3 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ದ್ವಿತೀಯ ಸ್ಥಾನ ಪಡೆದ ತಾಳೀಕೋಟ್ ಶೈಫುಲ್ಲಾ ಮದರಸಾದ ವಿದ್ಯಾರ್ಥಿಗಳಿಗೆ ಸೈಕಲ್, ಮತ್ತು ತೃತೀಯ ಸ್ಥಾನ ಪಡೆದ ಮದರಸ ದಾರ್ ಅಲ್ ಅರ್‌ಕಂ ತಾಳೀಕೋಟ್ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ವಾಚ್ ಹಾಗೂ ಪ್ರಾಕ್ಟಿಕಲ್ ಬಾಕ್ಸ್ ಪ್ರಶಸ್ತಿಯಾಗಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶೇಖ್ ಅಬ್ದುಲ್ ಅಝೀಮ್ ಉಮರಿ ಮದನೀ ಅವರು ಧಾರ್ಮಿಕ ಶಿಕ್ಷಣದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಧಾರ್ಮಿಕ ಜ್ಞಾನವನ್ನು ಪಡೆಯಲು ಪ್ರೋತ್ಸಾಹಿಸಿದರು. ಧರ್ಮದ ರಕ್ಷಣೆಯು ಉಲಮಾ ಮತ್ತು ಯುವಕರ ಜವಾಬ್ದಾರಿಯಾಗಿದೆ. ಯುವಕರು ಉಲಮಾ ಜೊತೆಗೂಡಿ ಧರ್ಮ ಸೇವೆಯಲ್ಲಿ ಮುಂದಾಗಬೇಕು.
ಇವರು ಆಧುನಿಕ ಯುಗದಲ್ಲಿ ನಿಜವಾದ ಧಾರ್ಮಿಕ ಜ್ಞಾನ ಮತ್ತು ಆಚರಣೆಯ ಅಗತ್ಯವನ್ನು ಪ್ರಸ್ತಾಪಿಸಿ, ಯುವಕರು ಉಲಮಾ ಅವರೊಂದಿಗೆ ಸೇರಿ, ಕುರ್’ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ಜೀವನ ನಡೆಸಿ, ಧರ್ಮದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಿಜಾಪುರ ಜಿಲ್ಲಾ ಜಮೀಯತ್ ಅಹ್ಲೆ ಹದೀಸ್ ಅಮೀರ್ ಮುಖ್ತಾರ್ ಅರಬ್, ಮೌಲಾನಾ ಮುಜೀಬ್ ಉರ್ ರಹ್ಮಾನ್ ಉಮರಿ ಜಮೀಯತ್ ಅಹ್ಲೆ ಹದೀಸ್ ಬಿಜಾಪುರ ನಾಜಿಮ್, ಅಬ್ದುಲ್ ಗಫಾರ್ ಇಂಡಿಕರ್, ಅತಿಕ್ ಮೋಮಿನ್, ಮಹಬೂಬ್ ಶೇಖ್, ಝಕಿ ಅಹ್ಮದ್ ಶೋಲಾಪುರ್, ಗುಮ್ಮಟ ನಗರಿ ಇಂಡಿ ತಾಲೂಕ ವರದಿಗಾರ ಸದ್ದಾಮ್ ಹುಸೇನ್ ಜಮಾದಾರ, ಮುಜೀಬ್ ಉರ್ ರಹ್ಮಾನ್ ಅಫ್ಜಲ್‌ಪುರ, ಇಮ್ರಾನ್ ನಾಗಠಾಣ, ಮೌಲಾನಾ ಉಮರ್ ಜಾಮಯಿ, ಅರ್ಷದ್ ಅಹ್ಮದ್ ಕನ್ನೂಳಿ, ಇಬ್ರಾಹಿಂ ಉಮರಿ, ಮೌಲಾನಾ ಅತಾಉರಹೇಮಾನ ಜಾಮಯಿ, ಹಾಗೂ ಕ್ವಿಜ್ ಮಾಸ್ಟರ್ ಅಸ್ಲಂ ಮಕಂದಾರ್ ಸೇರಿದಂತೆ ಅನೇಕ ಗಣ್ಯರು, ಉಲಮಾಗಳು, ಶಿಕ್ಷಕರು, ವಿದ್ಯಾರ್ಥಿಗಳು, ಮತ್ತು ಪೋಷಕರು ಭಾಗವಹಿಸಿ, ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ