ಸಮಸಮಾಜ ಕಟ್ಟುವಲ್ಲಿ ಕಾಯಕ ಶರಣರ ಕೊಡುಗೆ ಅಪಾರ-ಸಂತೋಷ ಬಂಡೆ

 ಸಮಸಮಾಜ ಕಟ್ಟುವಲ್ಲಿ ಕಾಯಕ ಶರಣರ ಕೊಡುಗೆ ಅಪಾರ-ಸಂತೋಷ ಬಂಡೆ



ಇಂಡಿ: ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

        ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ಕಾಯಕ ಶರಣರ ಜಯಂತಿಯನ್ನು ಉದ್ಧೇಶಿಸಿ ಮಾತನಾಡಿದರು.

      ಕಾಯಕ ಶರಣರ ವಚನಗಳೇ ನಮ್ಮೆಲ್ಲರ ಬದುಕಿಗೆ  ಸಂವಿಧಾನವಾಗಿದೆ. ಐವರು ಕೂಡ ಜಾತಿ, ಧರ್ಮ, ವರ್ಣ, ವರ್ಗವನ್ನು ಮೀರಿದವರು. ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಪ್ರಸ್ತುತ ಎಂದರು.

       ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡು, ಕಾಯಕದ ಮೇಲೆ ಜಾತಿ ಮಾಡಬಾರದು ಎಂದು ಸಾರಿದ್ದಾರೆ ಎಂದು ಅಭಿಪ್ರಾಯಪಟ್ಟರು.

       ಮುಖ್ಯ ಶಿಕ್ಷಕರಾದ ಎಸ್ ಎಸ್ ಅರಬ, ವ್ಹಿ ವೈ ಪತ್ತಾರ ಹಾಗೂ ಶಿಕ್ಷಕರಾದ ಎಸ್ ಎಂ ಪಂಚಮುಖಿ, ಶಾಂತೇಶ ಹಳಗುಣಕಿ, ಮಲ್ಲಮ್ಮ ಗಿರಣಿವಡ್ಡರ, ಜೆ ಸಿ ಗುಣಕಿ, ಸಾವಿತ್ರಿ ಸಂಗಮದ, ಎಫ್ ಎ ಹೊರ್ತಿ, ಎಸ್ ವ್ಹಿ ಬೆನೂರ, ಎಸ್ ಬಿ ಕುಲಕರ್ಣಿ, ಎಸ್ ಡಿ ಬಿರಾದಾರ, ಸುಮಿತ್ರಾ ನಂದಗೊಂಡ, ಸುರೇಶ ದೊಡ್ಯಾಳಕರ, ಶೃದ್ಧಾ ಬಂಕಲಗಾ, ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು