ನ್ಯಾಯಪ್ರೀಯ ಆಡಳಿತ, ಯುದ್ಧ ತಂತ್ರ ಮತ್ತು ಧರ್ಮ ಸಂಕಲ್ಪ ಇಂದು ಕರ್ನಾಟಕದ ಜನರ ಮನಸ್ಸಿನಲ್ಲಿ ಜೀವಂತವಾಗಿದೆ. ಎಸಿ ಆಬೀದ್ ಗದ್ಯಾಳ
ಇಂಡಿ: ಯಾರ ಹೆಸರು ಮುಖ್ಯವಲ್ಲ ಸಮಾಜಕ್ಕಾಗಿ ದುಡಿದವರು, ಮನುಷ್ಯ ತನ್ನಷ್ಟಕ್ಕಾಗಿ ತಾನು ಬದುಕಿ ಬಾಳದೆ, ತನ್ನ ಜೀವನದ ಜೋತೆಗೆ ಸಮಾಜದ ಏಳಿಗಾಗಿ ಹಗಲಿರುಳು ದುಡಿದವರ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಕಂದಾಯ ಉಪವಿಭಾಗಾಧಿಕಾರಿ ಹಭೀದ ಗದ್ಯಾಳ ಹೇಳಿದರು.
ಅವರು ಪಟ್ಟಣದ ಮಿನಿ ವಿಧಾನ ಸಭಾದ ಸಭಾಗೃಹದಲ್ಲಿ ಚತ್ರಪತಿ ಶಿವಾಜಿ ಮಹಾರಾಜರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ನ್ಯಾಯಪ್ರೀಯ ಆಡಳಿತ, ಯುದ್ಧ ತಂತ್ರ ಮತ್ತು ಧರ್ಮ ಸಂಕಲ್ಪ ಇಂದು ಕರ್ನಾಟಕದ ಜನರ ಮನಸ್ಸಿನಲ್ಲಿ ಜೀವಂತವಾಗಿದೆ. ಈಗಲೂ ಕರ್ನಾಟಕದ ಅನೇಕ ಊರುಗಳಲ್ಲಿ ಶಿವಾಜಿ ಮಹಾರಾಜರ ಜಯಂತಿಯನ್ನು ದೊಡ್ಡ ಗೌರವದಿಂದ ಆಚರಿಸಲಾಗುತ್ತಿದೆ ಎಂದರು.
ಇAಡಿ ಮತಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಕಾಸುಗೌಡ ಬಿರಾದಾರ ಮಾತನಾಡಿ, ಮೋಘಲರು ಶಿವಾಜಿಯ ಹೆಸರು ಕೆಳಿದರೆ ನಡುಗುತ್ತಿದ್ದರಂತೆ, ಅಂತಹ ಮೋಘಲರ ಆತ್ಮವಿಶಾಸವನ್ನೆ ಅಲ್ಲಾಡಿಸಿದ, ಸೊಕ್ಕನ್ನ ಅಡಗಿಸಿದ ಮತ್ತು ಅವರ ಆಡಳಿತವನ್ನೆ ಅಡಗಿಸಿದ ಪರಾಕ್ರಮಿ, ಅವರ ರಾಜಾಡಳಿತ, ಆಡಳಿತದ ನೈಪುಣ್ಯತೆ, ಯುದ್ದ ಕೌಶ್ಯಲ್ಯತೆ, ಹೊಸದನ್ನು ಸಂಶೋಧಿಸಿ ಬೆರೆ ದೇಶದವರು ಈ ತತ್ವವನ್ನು ಅನುಸರಿಸುವಂತೆ ಮಾಡಿದ್ದು ಶಿವಾಜಿ ಮಹಾರಾಜರು ಒಬ್ಬರು ಎಂದರು.
ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವೀದ ಮೊಮೀನ, ಅಯೂಬ ನಾಟಿಕಾರ, ಶ್ರೀಶೈಲಗೌಡ ಪಾಟೀಲ, ಯಮುನಾಜಿ ಸಾಳುಂಕೆ, ಸೋಮು ನಿಂಬರ್ಗಿಮಠ ಮಾನಾಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ
ಸಂಘದ ಅಧ್ಯಕ್ಷ ಬಸವರಾಜ ರಾವುರ, ಬಸವರಾಜ ಗೊರನಾಳ, ಹುಚ್ಚಪ್ಪ ತಳವಾರ, ಸಂತೋಷ ಗವಳಿ, ಕೀರಣ ಕ್ಷತ್ರಿ, ಮಲ್ಲು ಹಾವಿನಾಳಮಠ, ವಿಜು ರಾಠೋಡ, ಶಾಂತು ಕಂಬಾರ, ಅಪ್ಪು ಪವಾರ, ಶ್ರೀಶೈಲ ಪುಜಾರಿ, ನೇತಾಜಿ ಪವಾರ, ಮಲ್ಲು ಬಿರಾದಾರ ಸೇರಿದಂತೆ ಅನೇಕ ಅಧಿಕಾರಿ ವರ್ಗ, ಸಿಬ್ಬಂದಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ