ಯಶಸ್ಸಿಗೆ ನಿರಂತರ ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆ ಅನಿವಾರ್ಯ ಅತ್ಯಗತ್ಯ. ಯಶಸ್ಸಿಗೆ ಪರಿಶ್ರಮದ ಹೊರತಾದ ಅಡ್ಡಮಾರ್ಗಗಳಿಲ್ಲ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ
ಇಂಡಿ: ಯಶಸ್ಸಿಗೆ ನಿರಂತರ ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆ ಅನಿವಾರ್ಯ ಅತ್ಯಗತ್ಯ. ಯಶಸ್ಸಿಗೆ ಪರಿಶ್ರಮದ ಹೊರತಾದ ಅಡ್ಡಮಾರ್ಗಗಳಿಲ್ಲ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆ ಹಾಗೂ ಪಿ.ಯು ಕಾಲೇಜಿನ ಆಶ್ರಯದಲ್ಲಿ ಜರುಗಿದ ಎಸ್ - ಎಸ್ ಎಲ್ ಸಿ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳ ಬಿಳ್ಕೊಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಆಶಯ. ಶಿಕ್ಷಣ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಒಳ್ಳೆಯ ಗುಣನಡತೆಗಳನ್ನು ರೂಢಿಸಿಕೊಳ್ಳಬೇಕು. ಪ್ರೀತಿ, ತ್ಯಾಗ, ಪರೋಪಕಾರ, ಸತ್ಯ, ನ್ಯಾಯ, ಕರುಣೆ, ಅನುಕಂಪದಂತಹ ಸದ್ಗುಣಗಳನ್ನು ರೂಢಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು.
ಬಡತನದಲ್ಲಿ ಹುಟ್ಟಿದ್ದು ತಪ್ಪಲ, ಆದರೆ ಬಡತನದಲ್ಲಿ ಸಾಯುವುದು ತಪ್ಪು, ಬಡತನವನ್ನು ಮೆಟ್ಟಿ ಈ ನಿಲ್ಲಲು ಬಡತನವನ್ನು ಚಾಲೆಂಜಾಗಿ ಸ್ವೀಕಾರ ಮಾಡಬೇಕು. ನಿಮ್ಮಲ್ಲಿರುವ ಬಡತನವನ್ನು ಓಡಿಸುವ ಜೊತೆಗೆ ನಿಮ್ಮ ಸುತ್ತಮುತ್ತಲಿರುವ ಪರಿಸರ, ಪ್ರಕೃತಿಯಲ್ಲಿಯ ಬಡತನ ಓಡಿಸಬೇಕು.
ಪ್ರಾಥಮಿಕ ಪ್ರೌಢ ಹಂತದಲ್ಲಿ ಪಡೆಯುವ ಶಿಕ್ಷಣವು ಮುಂದಿನ ಉನ್ನತ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ಜೀವನದಲ್ಲಿ ಒಳ್ಳೆಯ ನಡತೆ, ಇತರರ ನೋವಿಗೆ ಸ್ಪಂದಿಸುವಂತಹ ಸದ್ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗೇಶ ಮುರಡಿ ಹಾಸ್ಯ ಕಲಾವಿದರು, ರವಿಚಂದ್ರ ಕಾಂಬಳೆ
ಪ್ರಾಂಶುಪಾಲರು ಎಮ್ ಎಂ ಡಿ ಆರ್ ಎಸ್ ಇಂಡಿ, ಜೆ.ಎನ್. ಬಡಲ್ಲಿ, ಬಸವರಾಜ್ ಕಣ್ಣಿ ಅಧ್ಯಕ್ಷರು ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆ ವಿಜಯಪುರ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮ ನಿರೂಪಣೆ ಆನಂದಕುಮಾರ್ ಕಟವಾಣಿ ಶಿಕ್ಷಕರು , ಸ್ವಾಗತ ಯು.ಎನ್. ಬ್ಯಾಕೋಡಗ ಶಿಕ್ಷಕರು, ವಂದನೆ ಶ್ರೀಮತಿ ಜಯಶ್ರೀ ಗುರುಮಾತೆ ಮಾಡಿದರು.
ಎಂ.ಎಸ್. ಬಿರಾದಾರ, ಎಂ.ಎಸ್. ಡೊಲಿ, ಶರಣು ಕೋರೆ, ಸುಭಾಶ ಕೋಟಕೋಡ್, ಎ. ಕೆ ಗೊಂಡಬೌಡಿ ಮೇಡಮ್,ಶಶಿಕಲಾ ಮೇಡಮ್, ಎಸ್. ಎ. ಪಾಟೀಲ್ ಮೇಡಮ್ ಹಾಗೂ ನಿಲಯಪಾಲಕರಾದ ಸಾಹೇಬಗೌಡ ಪಾಟೀಲ್ ಉಪಸ್ಥಿತಿ ಇದರು.
ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು
ಕು// ಆಕಾಶ್ ಬ್ಯಾಳಿ
ಕೂ// ಅಪ್ಸನಾ ಕುಮಾಸಾಗಿ
ಕೂ//ನೌಶದ ನದಾಫ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ