ರಮಜಾನ ಹಬ್ಬದ ನಮಾಜ ಸಂದರ್ಭದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ವಕ್ಫ್ ತಿದ್ದುಪಡಿಗೆ ವಿರೋಧ.
ರಮಜಾನ ಹಬ್ಬದ ನಮಾಜ ಸಂದರ್ಭದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ವಕ್ಫ್ ತಿದ್ದುಪಡಿಗೆ ವಿರೋಧ.
ಇಂಡಿ. ಈದ್ ನಮಾಜ್ ವೇಳೆ, ಮುಸ್ಲಿಂ ಸಮುದಾಯದ ಜನರು ವಕ್ಫ್ ತಿದ್ದುಪಡಿ ವಿರುದ್ಧ ಕಪ್ಪು ಪಟ್ಟಿಯನ್ನು ಧರಿಸಿ ತಮ್ಮ ಅಸಮ್ಮತಿಯವನ್ನು ವ್ಯಕ್ತಪಡಿಸಿದರು. ಈ ನಿರ್ಧಾರ ಸಮುದಾಯದ ಹಿತಾಸಕ್ತಿಗಳನ್ನು ಉಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಯಿತು.
ಈದ್ ಪ್ರಯುಕ್ತ ನಡೆದ ಸಭೆಯಲ್ಲಿ ಮೌಲಾನಾ ಶಾಕಿರ್ ಹುಸೇನ್ ಕಾಸ್ಮಿ ಮಾತನಾಡಿ, "ವಕ್ಫ್ ತಿದ್ದುಪಡಿಯು ಸಮುದಾಯದ ಹಕ್ಕುಗಳನ್ನು ಹಾನಿಗೊಳಿಸುತ್ತದೆ. ಇದಕ್ಕೆ ನಾವು ಶಾಂತಿಯುತವಾಗಿ ವಿರೋಧ ವ್ಯಕ್ತಪಡಿಸುತ್ತೇವೆ" ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಕಿರ್ ಹುಸೇನ್ ಕಾಸ್ಮಿ, ಮುಫತಿ ಅಬ್ದುಲ್ ರಹಿಮಾನ್ ಅರಬ್, ಅಂಜುಮಾನ್ ಕಮಿಟಿ ಅಧ್ಯಕ್ಷ ಹಾಜಿಯಾಲಿ ಬಾಗವಾನ್, ಕಾರ್ಯದರ್ಶಿ ಹುಸೇನ್ ಸಾಬ್ ಜಮಾದಾರ, ಜಾವೀದ್ ಮೊಮಿನ್, ಅಯ್ಯುಬ್ ಬಾಗವಾನ್, ಅಬ್ದುಲ್ ರಶೀದ್ ಅರಬ್, ಬಾಬು ಸಾಬ್ ಸೌದಾಗರ್, ಜಾನುದ್ದೀನ್ ಬಾಗವಾನ್, ರಯಿಸ ಅಸ್ಟೇಕರ್, ಯಾಸಿನ್ ತುರಕಿ ಮುಸ್ತಾಕ್ ಇಂಡಿಕರ, ಮಹಿಬೂಬ ಅರಬ, . ಪಠಾಣ್ ನಿಸಾರ್ ಬಾಗವಾನ್, ರಾಜ್ಹಮದ್ ತುರ್ಕರಗರಿ, ಮುಸ್ತಾಕ್ ನಾಯ್ಕೋಡಿ, ಹಜರತಲಿ ಮುಲ್ಲಾ, ಅಸ್ಲಂ ಪಟೇಲ್, ಮೊಹಮ್ಮದ್ ಗುಲ್ಬರ್ಗಾ, ಅಬುತಾಲಿಬ ಹೊಸೂರು, ಯೂನುಸ್ ರೆವರ್ಕರ್, ಬಶೀರ್ ಇನಾಮದಾರ, ಮಹಿಬೂಬ್ ಮಕಾಂದರ್, ಅಬ್ದುಲ್ ರಹಿಮಾನ್ ಬಾಗವಾನ್, ಅಸ್ಲಂ ಕಡಣಿ, ರಫೀಕ ಇಂಡಿಕರ, ಶಬ್ಬಿರ ಖಾಜಿ, ಹುಸೇನ ಬೇಪಾರಿ, ಹಸನ ಮುಜಾವರ, ಸಮುದಾಯದ ಹಿರಿಯರು, ಯುವಕರು, ಮತ್ತು ಇತರ ಪ್ರಮುಖರು ಈ ನಿರ್ದಿಷ್ಟ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ