ಕಾಂಗ್ರಸ್ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಕಾಂಗ್ರೆಸ್ ಪಕ್ಷದ ದುರಾಡಳಿತ ಖಂಡಿಸಿ ವಿಜಯಪುರದಲ್ಲಿ ಏ.17 ರಂದು ಜನಾಕ್ರೋಶ ಸಭೆಯನ್ನು ಹಮ್ಮಿಕೊಂಡಿದ್ದು. ವಿವೇಕ ಡಬ್ಬಿ

 ಇಂಡಿ :   ಕಾಂಗ್ರೆಸ್ ಪಕ್ಷದ ದುರಾಡಳಿತ ಖಂಡಿಸಿ ವಿಜಯಪುರದಲ್ಲಿ ಏ.17 ರಂದು ಜನಾಕ್ರೋಶ ಸಭೆಯನ್ನು ಹಮ್ಮಿಕೊಂಡಿದ್ದು ಇಂಡಿ ತಾಲೂಕಿನ ಪ್ರತಿ ಬೂತ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕ ಡಬ್ಬಿ ಹೇಳಿದರು.


ಪಟ್ಟಣದ ಶ್ರೀ ಸತ್ಯ ನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆದ ಜನಾಕ್ರೋಶ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 

ಕಾಂಗ್ರಸ್ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಮಹಿಳೆಯರಿಗೆ ಉಚಿತ ಬಸ್ಸ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ. ಸಾಮಾಜಿಕ ಇಲಾಖೆಯ ೨೮ ಸಾವಿರ ಕೋಟಿ ಅನುದಾನದಲ್ಲಿ ೧೮ ಸಾವಿರ ಕೋಟಿ ರೂ ಗ್ಯಾರಂಟಿಗೆ ನೀಡಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಸಭೆ ವಿಜಯಪುರದಲ್ಲಿ ನಡೆಯುತ್ತಿದೆ ಎಂದರು.

ಇಂಡಿ ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿ ಇಂಡಿಯಿಂದ ಹೆಚ್ಚು ಕಾರ್ಯಕರ್ತರು ಜನಾಕ್ರೋಶ ಸಭೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಬೂತ ಮಟ್ಟದಲ್ಲಿ ಕಾರ್ಯಕರ್ತರನ್ನು ತರಬೇಕು ಎಂದರು.ಈಗಾಗಲೇ ಮೈಸೂರು, ಶಿವಮೊಗಾ ದಲ್ಲಿ ಯಶಸ್ವಿಯಾಗಿದ್ದು ವಿಜಯಪುರ ಕಾರ್ಯಕ್ರಮ ಯಶಸ್ವಿಗೊಳಿಸಲು ಕೇಳಿಕೊಂಡರು. 

ಮುಳುಗೌಡ ಪಾಟೀಲ ,ಕಾಸುಗೌಡ ಬಿರಾದಾರ,ಶಂಕರಗೌಡ ಪಾಟೀಲ, ದೇವೆಂದ್ರ ಕುಂಬಾರ ಮಾತನಾಡಿ ಕಾಂಗ್ರೆಸ ಸರಕಾರ ಎಲ್ಲ ಬೆಳವಣೆಗೆಗಳಿಗೂ ಕೇಂದ್ರದ ಕಡೆಗೆ ಬೊಟ್ಟು ಮಾಡುವದನ್ನು ಬಿಟ್ಟು ಅಭಿವೃದ್ದಿ ಕಡೆಗೆ ಗಮನ ನೀಡಬೇಕು.

ರಸ್ತೆಗಳು ಹದೆಗೆಟ್ಟಿವೆ. ಮತಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಲ್ಲ. ಹೀಗಾಗಿ ಜನತೆ ಹತಾಸೆಗೊಂಡಿದ್ದಾರೆ. ಕಾರಣ ವಿಜಯೇಂದ್ರ ಶಕ್ತಿ ಬಲಪಡಿಸಲು ಹೆಚ್ಚಿನ ಕಾರ್ಯಕರ್ತರು ಜನಾಕ್ರೋಶ ಸಭೆಗೆ ಬರಲು ಕೇಳಿಕೊಂಡರು.

ಸಭೆಯಲ್ಲಿ ಶಂಕರಗೌಡ ಪಾಟೀಲ,ಶೀವಂತ ಉಮರಾಣಿ,ಅನೀಲ ಜಮಾದಾರ, ಸಿದಲಿಂಗ ಹಂಜಗಿ,ಹಣಮಂತ ಗೌಡ ಪಾಟೀಲ,ವಿಜಯಲಕ್ಷಿö್ಮÃ ರೂಗಿಮಠ,ರಾಘವೇಂದ್ರ ಕಾಪಸೆ, ಬಾಳು ಮುಳಜಿ, ಮಹೇಂದ್ರ ಹೂಗಾರ,ರಾಮಸಿಂಗ ಕನ್ನೊಳ್ಳಿ ಮತ್ತಿತರಿದ್ದರು.

ಇಂಡಿಯಲ್ಲಿ ನಡೆದ ಬಿಜೆಪಿ ಪಕ್ಷದ ಪೂರ್ವಭಾವಿ ಸಭೆಯಲ್ಲಿ ವಿವೇಕ ಡಬ್ಬಿ ಮಾತನಾಡಿದರು. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು