ಶ್ರೀ ಎಂ ಎಂ ವಾಲಿಕಾರ ಶಿಕ್ಷಕರಿಗೆ ಗೌರವದ ಸನ್ಮಾನ

 ಶ್ರೀ ಎಂ ಎಂ ವಾಲಿಕಾರ ಶಿಕ್ಷಕರಿಗೆ ಗೌರವದ ಸನ್ಮಾನ



ಶ್ರೀ ಎಂ ಎಂ ವಾಲಿಕಾರ ಶಿಕ್ಷಕರು ಸರ್ಕಾರಿ ಹೆಣ್ಣು ಮಕ್ಕಳ ಶಾಸಕರ ಮಾದರಿ ಪ್ರಾಥಮಿಕ ಶಾಲೆ ತಾಂಬಾ ತಾ.ಇಂಡಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರದ ಜಿಲ್ಲಾ ಉಪಾಧ್ಯಕ್ಷರು ಇವರಿಗೆ ಡಾಕ್ಟರೇಟ್ ಪದವಿಯನ್ನು ಪಡೆದಿರುವುದಕ್ಕಾಗಿ, ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮದ ಶಾಲೆಯ ಗುರುಬಳಗದ ವತಿಯಿಂದ ಸನ್ಮಾನಿಸಿ, ಹೃದಯಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. 

ಶ್ರೀ ಎಂ ಎಂ ವಾಲಿಕಾರ ಗುರುಗಳು ವೃತ್ತಿಯಿಂದ ಶಿಕ್ಷಕರಾಗಿದ್ದು ಪ್ರವೃತ್ತಿಯಿಂದ ರಂಗಭೂಮಿ ಕಲಾವಿದರಾಗಿ ಅದರಲ್ಲೂ ವಿಶೇಷವಾಗಿ ಖಳನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ ಇವರಲ್ಲಿದೆ."ಬಡವ ಬದುಕಲೇಬೇಕು"ಎಂಬ ಸುಂದರ ಸಾಮಾಜಿಕ ನಾಟಕದಲ್ಲಿ ಖಳನಾಯಕನ ಕ್ರೌರ್ಯದ ಪಾತ್ರಕ್ಕೆ ಜೀವತುಂಬಿ, ಅಭಿನಯಿಸುತ್ತಿರುವಾಗಲೇ ಅದೆಷ್ಟೋ ಜನ ರಂಗ ಸಚಿಕೆಯಲ್ಲಿ ಬಂದು ಬೈದವರುಂಟು, ಅದೆಷ್ಟೋ ಜನ ಕಲ್ಲು ಹೊಡೆದವರುಂಟು, ಇಷ್ಟೊಂದು ಯಶಸ್ವಿ ಪಾತ್ರವನ್ನು ಅಭಿನಯಿಸಲು ಎತ್ತಿದ ಕೈ ನಮ್ಮ ಶ್ರೀ ಎಂ ಎಂ ವಾಲಿಕಾರ ಗುರುಗಳು.

            ಇದಷ್ಟೇ ಅಲ್ಲದೆ ಹಲವಾರು ನಾಟಕಗಳನ್ನು ರಚಿಸಿ ತಮ್ಮ ಶಿಷ್ಯರಿಂದಲೇ ಆ ನಾಟಕಗಳನ್ನು ಅಭಿನಯಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ,ನೈತಿಕ ಮೌಲ್ಯಗಳನ್ನು ನೀಡುವ ನಾಟಕ,ರೂಪಕಗಳನ್ನು ರಚಿಸಿ, ತನ್ನೊಳಗೊಬ್ಬ ಎಲೆ ಮರೆಯಕಾಯಿಯಂತೆ ಜೀವಿಸುವ ಕವಿಯೊಬ್ಬ ಇದ್ದಾನೆ ಎನ್ನುವುದಂತೂ ಪಕ್ಕಾ.

               ಶ್ರೀ ಎಂ ಎಂ ವಾಲಿಕಾರ ಗುರುಗಳು ಗ್ರಾಮದಲ್ಲಿ ನಡೆಯುವ ಜಾತ್ರೆ , ಉರುಸ್ಗಳಲ್ಲಿ ಅಭಿನಯಿಸುವ ಎಲ್ಲ ನಾಟಕಗಳಿಗೆ ನಿರ್ದೇಶಕರಾಗಿ,ಹೆಗಲಿಗೆ ಹೆಗಲು ಕೊಟ್ಟು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಇನ್ನೂ ತಮ್ಮ ವೃತ್ತಿ ಜೀವನದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ,ತಾಲೂಕ ಶಿಕ್ಷಕರ ಸಂಘದ ಎರಡು ಅವಧಿಗೆ ಅಧ್ಯಕ್ಷರಾಗಿ, ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಗುರುಭವನ ಉದ್ಘಾಟನೆಗೊಂಡದ್ದು ಇವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಈಗ ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ ಶಿಕ್ಷಕರ ಸರ್ವ ಸಮಸ್ಯೆಗಳಿಗೂ, ಶಿಕ್ಷಕರ ಪರವಾಗಿ ನಿಂತು ಹೋರಾಟ ಮಾಡುವವರಲ್ಲಿ ಇವರು ಮೊದಲಿಗರಾಗಿದ್ದಾರೆ, ನಿರಾಡಂಬರದ ಅತ್ಯಂತ ಸರಳ ಜೀವಿ, ಸಜ್ಜನ ಸಂಪನ್ನ ಶಿಕ್ಷಕರಿವರು. ಸರ್ವ ಧರ್ಮದವರೊಂದಿಗೆ ಅತ್ಯಂತ ಪ್ರೀತಿ ವಾತ್ಸಲ್ಯದಿಂದ, ಸ್ನೇಹಜೀವಿಯಾಗಿ, ಹಿರಿದು ಕಿರಿದೆನ್ನದೆ, ಸಮನ್ವಯತೆಯಿಂದ, ಸಹಬಾಳ್ವೆಯಿಂದ, ಸರ್ವರೊಂದಿಗೆ ಬೆರೆತು, ಎಲ್ಲರೊಳಗೊಂದಾಗಿರುವವರು ನಮ್ಮ ಹೆಮ್ಮೆಯ ಶ್ರೀ ಎಂ ಎಂ ವಾಲಿಕಾರ ಗುರುಗಳು.

              ಇವರ ಸಾಹಿತ್ತಿಕ ಸೇವೆ, ಸಾಮಾಜಿಕ ಸೇವೆ, ಶೈಕ್ಷಣಿಕ ಸೇವೆ, ಶಿಕ್ಷಕರ ಸೇವೆ ಇದೆಲ್ಲದರ ಒಟ್ಟುಗೂಡಿಸಿ,ಉತ್ತಮ ವ್ಯಕ್ತಿತ್ವದ ಶಿಕ್ಷಕರಿಗೆ ಡಾಕ್ಟರೇಟ್ ಪದವಿ ದೊರೆತಿರುವುದು ಸ್ವಾಗತರ್ಹವಾಗಿದೆ. ಇವರಿಗೆ  ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ ವಿಶ್ವವಿದ್ಯಾನಿಲಯಕ್ಕೂ ಗೌರವದ ಅಭಿನಂದನೆಗಳು. ಹಾಗೂ ಡಾ. ಶ್ರೀ ಎಂ ಎಂ ವಾಲಿಕಾರ ಗುರುಗಳಿಗೆ ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗುರುಬಳಗ ಅತ್ಯಂತ ಗೌರವ ಪೂರ್ವಕವಾಗಿ ಸನ್ಮಾನಿಸಿ, ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಒಂದು ಧನ್ಯತಾ ನುಡಿ ನಮ್ಮ ಹೆಮ್ಮೆಯ ಡಾ. ಶ್ರೀ ಎಂ ಎಂ ವಾಲಿಕಾರ ಗುರುಗಳಿಗಾಗಿ. ಗುರುಗಳ ಬಾವಿ ಭವಿಷ್ಯವು ಇನ್ನೂ ಉಜ್ವಲವಾಗಲಿ, ತಮ್ಮ ಸಾಹಿತ್ಯಿಕ,ಸಾಂಸ್ಕೃತಿಕ ಸೇವೆ ಹೆಚ್ಚು ಹೆಚ್ಚು ಮುಂದುವರೆಯಲಿ. ಜನಮಾನಸದಲ್ಲಿರುವ ಓರೆ- ಕೋರೆಗಳನ್ನು ತಿದ್ದುವಂತಹ ನಾಟಕಗಳು ಹೊರಹೊಮ್ಮಲಿ, ಆ ದೇವರು ಗುರುಗಳಿಗೆ ಸದಾ ಒಳ್ಳೆಯದನ್ನೇ ಮಾಡಲಿ ಎಂದು ಆಶಿಸುತ್ತಾ ಸನ್ಮಾನಿಸಿದ ಗುರು ಬಳಗದ ಆಶಯದ ನುಡಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು