ಪಹಲ್‌ಗಾಂನಲ್ಲಿ ನಡೆದ ಉಗ್ರವಾದಿ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಇಂಡಿ ಯೂತ್ ಕಾವರೇಜ್ ಸಂಘಟನೆ.
ಇಂಡಿ. ಪಹಲ್‌ಗಾಂನಲ್ಲಿ ನಡೆದ ಉಗ್ರವಾದಿ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಇಂಡಿ ಯೂತ್ ಕಾವರೇಜ್ ಸಂಘಟನೆ, ಈ ಉಗ್ರ ಕೃತ್ಯಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಶಹೀದರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಮುಖಂಡರು "ಭಾರತದ ಭದ್ರತೆ ಮತ್ತು ಶಾಂತಿಯು ನಮ್ಮ ಪ್ರಥಮ ಪ್ರಧಾನತೆಯಾಗಿದೆ. ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ಉಗ್ರವಾದಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಹೀದರಾದ ನಮ್ಮ ಸಹೋದರರಿಗೆ ನ್ಯಾಯಾಸಿಗಬೇಕು ಎಂದು ಹೇಳಿದರು.
ಯುವಕರು ಕೇಂದ್ರ ಸರ್ಕಾರ ಮತ್ತು ರಕ್ಷಣಾ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದು, ಭವಿಷ್ಯದಲ್ಲಿ ಇಂಥಹ ದಾಳೆಗಳನ್ನು ತಪ್ಪಿಸಲು ಗಟ್ಟಿಯಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಮತ್ತು ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಮನವಿ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಯುವಕರ ಹೆಚ್ಚಿನ ಹಾಜರಾತಿ ಕಂಡುಬಂದಿತು ಮತ್ತು ದೇಶಭಕ್ತಿಯಿಂದ ತುಂಬಿದ ಘೋಷಣೆಗಳೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಯಿತು. ಹೀಗೆ, ದೇಶದ ಏಕತೆ ಮತ್ತು ಭದ್ರತೆಗೆ ಬೆಂಬಲ ಸೂಚಿಸುವ ಮೂಲಕ, ಇಂಡಿಯಾ ಯೂತ್ ಕಾನ್ವರ್ಜ್ ಸಂಘಟನೆ ಒಂದು ಶಕ್ತಿಶಾಲಿ ಸಂದೇಶವನ್ನು ನೀಡಿದೆ.
ಈ ಸಂದರ್ಭದಲ್ಲಿ ಇಲಿಯಾಸ ಬೋರಾಮಣಿ, ಹುಸೇನ ಜಮಾದಾರ, ಜಾಕೀರ ಮಲಗಾಣ, ಸಮೀರ್ ಶೇಖ್, ಮುಜ್ಮಿಮಿಲ್ ಬಾಗವಾನ, ಹುಸೇನ ಬೇನೂರ, ನವಾಜ ಮಕಾಂದಾರ, ಅಮಜ್ದ್ ಪಠಾಣ, ಹಾಜಿ ಬಾಗವಾನ, ಫರೂಜ್ ಮುಜಾವಾರ, ಅಬ್ದುಲ್ ಆಸ್ಟೇಕರ, ಇರಶಾದ ಸಾಲೋಟಗಿ, ಖಾಜಿ ಸರ್ ಸೇರಿದಂತೆ ಅನೇಕರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ