ಶೋಷಿತರ ಏಳಿಗೆಯನ್ನೇ ಜೀವನದ ಗುರಿಯಾಗಿಸಿಕೊಂಡಿದ್ದ ಮಹಾನ್ ಮಾನವತಾವಾದಿ ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡಕರರು. ಅನುರಾದಾ ವಸ್ತ್ರದ
ಇಂಡಿ : ಶೋಷಿತರ ಏಳಿಗೆಯನ್ನೇ ಜೀವನದ ಗುರಿಯಾಗಿಸಿಕೊಂಡಿದ್ದ ಮಹಾನ್ ಮಾನವತಾವಾದಿ ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡಕರರು ಸಾಮಾಜಿಕ ಸಮಾನತೆ ಮತ್ತು ಅಸ್ಪೃಶೃತಾ ನಿವಾರಣೆಗಾಗಿ ಹೋರಾಡಿದ ಭಾರತೀಯ ಅಗ್ರರಲ್ಲಿ ಬಾಬಾ ಸಾಹೇಬ ಅಂಬೇಡಕರ ಕೂಡ ಒಬ್ಬರು ಎಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಪಟ್ಟಣದ ಗುರುಭವನ ಸಭಾಭವನದಲ್ಲಿ ಡಾ. ಬಿ.ಆರ್ ಅಂಬೇಡಕರರವರ ಜನ್ಮ ದಿನದ ನಿಮಿತ್ಯ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಉಪನ್ಯಾಸ ನೀಡಿದ ನಾದ ಪ್ರೌಢಶಾಲೆಯ ಸಹಶಿಕ್ಷಕ ಆರ್.ಬಿ.ಬಿರಾದಾರ ಮಾತನಾಡಿ ಶಿಕ್ಷಣ ಹಕ್ಕು, ಉದ್ಯೋಗ ಹಕ್ಕು, ಮಾಹಿತಿ ಹಕ್ಕು, ಅಹಾರ ಭದ್ರತೆಯ ಹಕ್ಕು, ಬಾಳುವ ಹಕ್ಕು, ಆದಿವಾಸಿಗಳಿಗೆ ಸಂಪನ್ಮೂಲ ಸಂಗ್ರಹಿಸುವ ಹಕ್ಕು, ಈ ಎಲ್ಲದರ ಹಿಂದೆ ಕೆಲಸ ಮಾಡಿರುವದು ಅಂಬೇಡಕರರವರು, ಮಹಿಳೆಯರು, ದಲಿತರು, ಶೂದ್ರರು, ಕೃಷಿಕರು, ಕಾರ್ಮಿಕರು, ಸೇರಿದಂತೆ ಎಲ್ಲ ಶ್ರೀ ಸಾಮಾನ್ಯರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾತನಾಡಿದವರು ಅಂಬೇಡಕರರವರು, ಕೃಷಿ ಬದುಕು, ಭೂ ಒಡೆತನ, ನೀರಾವರಿ ಕೈಗಾರಿಕೆಗಳ ಸ್ಥಿತಿಗತಿ ಬಗ್ಗೆ ಅಂಬೆಡಕರರವರು ಸ್ವಾತಂತ್ರ ಪೂರ್ವದಲ್ಲಿಯೇ ಚಿಂತಿಸಿದ್ದಾರೆ. ಈ ಎಲ್ಲ ಒಳಗೊಂಡಿರುವ ಅರ್ಥಶಾಸ್ತçದ ಬಗ್ಗೆಯೂ ಬಾಬಾ ಸಾಹೇಬರು ಪ್ರಗತಿಪರ ವಿಚಾರಧಾರೆ ಮುಂದಿಟ್ಟಿದ್ದಾರೆ ಎಂದರು.
ರಮೇಶ ನಿಂಬಾಳಕರರವರು ಮಾತನಾಡಿ ಭಾರತದ ಸಂವಿಧಾನ ನಿರ್ಮಾತೃ ಅಂಬೇಡಕರ ದಮನಿರತರ ದನಿಯಾಗಿದ್ದರು. ಸಮಾನತೆಗೆ ಶ್ರಮಿಸಿದರು. ೨೦ ನೇ ಶತಮಾನ ಭಾರತ ಸೃಜಿಸಿದ ಮಹಾನ ದಾರ್ಶನಿಕ ಎಂದರು.
ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಬಸವರಾಜ ಗೊರನಾಳ ಮಾತನಾಡಿದರು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ನಂದೀಪ ರಾಠೋಡ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಟಿ.ಎಸ್.ಅಲಗೂರ, ಜಾವೇದ ಮೋಮಿನ್, ವಿನಾಯಕ ಗುಣಸಾಗರ, ಬಾಬು ಗುಡುಮಿ, ಮತ್ತಿತರಿದ್ದರು.
ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈದಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಭಾವಚಿತ್ರದ ಮೆರವಣೆಗೆ ಅಂಬೇಡಕರ ವೃತ್ತದಿಂದ ಮಹಾವೀರ ವೃತ್ತ, ಬಸವೇಶ್ವರ ವೃತ್ತದ ಮೂಲಕ ಗುರುಭವನ ತಲುಪಿ ಅಲ್ಲಿ ಕಾರ್ಯಕ್ರಮ ನಡೆಯಿತು.
ಇಂಡಿ ಪಟ್ಟಣದ ಗುರು ಭವನದಲ್ಲಿ ನಡೆದ ಅಂಬೇಕರ ಜಯಂತಿ ಕಾರ್ಯಕ್ರಮದಲ್ಲಿ ಎಸಿ ಅನುರಾಧಾ ವಸ್ತ್ರದ ಮಾತನಾಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ