ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಭೆ ಜರುಗಿತ್ತು.
ಇಂಡಿ - ಪಟ್ಟಣದ ಮಿನಿ ವಿಧಾನಸೌಧಾ ಸಭಾ ಭವನದಲ್ಲಿ ಇಂದು ಉಪವಿಭಾಗದಂಡಾಧಿಕಾರಿ ಅನುರಾಧಾ ವಸ್ತ್ರದ ಇವರ ಅಧ್ಯಕ್ಷತೆಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಭೆ ಜರುಗಿತ್ತು.
ಈ ಸಂಧರ್ಬದಲ್ಲಿ ಉಪವಿಭಾಗದಂಡಾಧಿಕಾರಿ ಅನುರಾಧಾ ವಸ್ತ್ರದ ಸಭೆಯಲ್ಲಿ ಮಾತನಾಡಿ ಭಾರತ ಸಂವಿಧಾನ ಸರ್ವರಿಗೂ ಸಮಬಾಳು ಸಮಪಾಲು ಅವಕಾಶ ನೀಡಿದೆ ಇಂದು ಪ್ರತಿಯೋಬ್ಬರಿಗೂ ತಮ್ಮದೆಯಾದ ಘನತೆ, ಗೌರವ ಇದೆ. ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳು ಇಂದು ಸಾಮಾಜಿಕ ,ಆರ್ಥಿಕ, ಶೈಕ್ಷಣಿಕ ಮೇಲ್ಪಂಕ್ತಿಗೆ ಬರಬೇಕು ಇಂದು ಗ್ರಾಮೀಣ ಭಾಗಗಳಲ್ಲಿ ಸಮಸ್ಯಗಳು ಏನಾದರೂ ಇದ್ದರೆ ಅಧಿಕಾರಿಗಳು ಕೂಡಲೆ ಕ್ರಮಕೈಗೊಳ್ಳಿ. ದೌರ್ಜನ್ಯ ತಡೆ ಉದ್ದೇಶ ಸಾಮಾನ್ಯ ಜನರ ಮೇಲೆ ಆಗುವ ಕಿರುಕುಳ ತಪ್ಪಿಸುವುದು ಎಂದು ಅರ್ಥ ದೌರ್ಜನ್ಯ ತಡೆಗೆ ಸರಕಾರಿ ಇಲಾಖೆಯೊಂದಿಗೆ ದೌರ್ಜನ್ಯ ತಡೆ ಸಮಿತಿ ಇರುವದರಿಂದ ಅಧ್ಯಕ್ಷರು ಹಾಗೂ ದೌರ್ಜನ್ಯ ಸಮಿತಿ ಎಲ್ಲಾ ಪದಾಧಿಕಾರಿಗಳು ನಮ್ಮೋಂದಿಗೆ ಸಹಕರಿಸಿ ಎಂದು ಸಭೆಯಲ್ಲಿ ತಿಳಿಸಿದರು.
ದೌರ್ಜನ್ಯ ಸಮಿತಿ ಅಧ್ಯಕ್ಷ ಬಾಬು ಗುಡಮಿ ಮಾತನಾಡಿ ಎಸ್ಸಿ .ಎಸ್ಟಿ ಕುಂದು ಕೊರತೆ ಸಾಕಷ್ಟು ಇವೆ ತಾಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಹೋಟೇಲ್‌ಗಳಲ್ಲಿ ಸಾಮೋಹಿಕ ಚಹಾ ಕುಡಿಯಬೇಕಾದರೆ ಇಂದಿಗೂ ಅಸ್ಪçಶ್ಯತೆ ಆಚರಣೆ ಜೀವಂತ , ಕ್ಷರ ಮಾಡಿಸಿಕೊಳ್ಳುವದು ಕನಸಿನ ಮಾತಾಗಿದೆ ದಯಮಾಡಿ ಕಾಟಾಚಾರದ ಸಭೆಯಾಗದೆ ಅಧಿಕಾರಿಗಳು ಆತ್ಮಸಾಕ್ಷಿ ಕೆಲಸಮಾಡಿ ತಾಲೂಕಿನಾದ್ಯೆಂತ ಮಕ್ಕಳಿಗೆ ಹಾಗೂ ಗರ್ಭೀಣಿ ಸ್ತಿçÃಯರಿಗೆ ಸರಿಯಾಗಿ ಮೋಟ್ಟೆ ವಿತರಣೆಯಾಗುತ್ತಿಲ್ಲ ಎಂಬ ಆರೋಪಗಳಿವೆ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಸರಿಯಾಗಿ ವೇತನ ವಿತರಣೆಯಾಗುತ್ತಿಲ್ಲ ಎಂದರೆ ಮೋಟ್ಟೆ ಎಲ್ಲಿಂದ ಖರೀದಿ ಮಾಡಬೇಕು ಇದರ ಬಗ್ಗೆ ಗಮನ ಹರಿಸಿ ಎಂದು ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದರು.
ಬಾಕ್ಸ- ಅಥರ್ಗಾ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರವರ ಸಮುದಾಯ ಭವನಕ್ಕೆ ನಿವೇಶನ ಹಸ್ತಾಂತರಿಸಲು ಪಂಚಾಯತ ಅಭಿವೃದ್ದಿ ಅಧಿಕಾರಿಗೆ ಹಿಂದಿನ ಸಭೆಯಲ್ಲಿ ಚರ್ಚಿಲಾಗಿತ್ತು. ಸಹಾಯಕ ನಿದೇರ್ಶಕರು ತಕ್ಷಣ ನಿವೇಶನ ಇಲಾಖೆಯ ಹೆಸರಿಗೆ ಹಸ್ತಾಂತರಿಸಲು ಕೋರಿದರು ಹಾಗೂ ಅಥರ್ಗಾ ಪರಿಶಿಷ್ಠ ಜಾತಿಯವರಿಗೆ ಸ್ಮಶಾನ ಭೂಮಿ ಇಲ್ಲ ಇದನ್ನು ಕೂಡಾ ಕೂಡಲೆ ಮಂಜೂರಿಗೆ ಕೋರಲಾಗಿದೆ.
ದೌರ್ಜನ್ಯ ಸಮಿತಿ ಸದಸ್ಯ ಶಿವಾನಂದ ಮೂರಮನ್
ತಹಶೀಲ್ದಾರ ಕಡಕಭಾವಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ, ಡಿವಾಯ್ ಎಸ್ಪಿ ಜಗದೀಶ,ಸಮಾಜ ಕಲ್ಯಾಣ ತಾಲೂಕಾಧಿಕಾರಿ ಉಮೇಶ ಲಮಾಣಿ ,ದಲಿತ ಮುಖಂಡ ಶಿವಾನಂದ ಮೂರಮನ್ ಸೇರಿದಂತೆ ದಲಿತ ಸಮುದಾಯದ ಮುಖಂಡರು ಇದ್ದರು.
ಪೋಟೋಕ್ಯಾಪ್ಸನ್ ೨೯ ಇಂಡಿ೦೨- ದೌರ್ಜನ್ಯ ನಿಯಂತ್ರಣ ಸಭೆಯಲ್ಲಿ ಉಪವಿಭಾಗ ದಂಡಾಧಿಕಾರಿ ಅನುರಾಧಾ ವಸ್ತçದ ತಾಲೂಕಾಧಿಕಾರಿಗಳು ದೌಜಣ್ಯ ಸಮಿತಿ ಅಧ್ಯಕ್ಷ ಬಾಬು ಗುಡಮಿ ಹಾಗೂ ಸದಸ್ಯರು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ