ರೇವಣಸಿದ್ಧೇಶ್ವರ ಏತನೀರಾವರಿ ಓಪನ್ ಕಾಲುವೆ ಮೂಲಕ ನೀರು ಹರಿಸಲು ಮನವಿ
ರೇವಣಸಿದ್ಧೇಶ್ವರ ಏತನೀರಾವರಿ ಓಪನ್ ಕಾಲುವೆ ಮೂಲಕ ನೀರು ಹರಿಸಲು ಮನವಿ
ಇಂಡಿ.ರೇವಣಸಿದ್ದೇಶ್ವರ ಏತನೀರಾವರಿಯ ಯೋಜನೆಯ ಕಾಮಗಾರಿ ಈ ಗ್ರಾಮಗಳಾದ ಕೋಳ್ಳೂರಗಿ, ಹೊರ್ತಿ,ಹಳಗುಣಕಿ,ಬಬಲಾದ, ಹಂಜಗಿ,ನಿಂಬಾಳ, ಝಳಕಿ,ಜವೂರ,ಭತಗುಣಕಿ,ಅಂಜುಟಗಿ, ಬೂದಿಹಾಳ,ಚೌಡಿಹಾಳ, ನಿಂಬಾಳ,ದೇಗಿನಾಳ,ತಡವಲಗಾ,ಬಸನಾಳ,ಅಗಸನಾಳ,ಕೂಡಗಿ, ಹಂಜಗಿ,ಕಪನಿಂಬರಗಿ,ಗುಂದವಾನ, ಮುಂತಾದ ಗ್ರಾಮಗಳಿಗೆ ಕೇವಲ ಪೈಪಲೈನ ಮೂಲಕ ಕಾಮಗಾರಿಗ ಪ್ರಾರಂಭಿಸಿದ್ದಾರೆ.ಆದರೆ ಇದರಿಂದ ಪ್ರಯೋಜನವಿಲ್ಲ ಆದ್ದರಿಂದ ಓಪನ್ ಕಾಲುವೆ ಮೂಲಕ ಕಾಮಗಾರಿ ಪ್ರಾರಂಭಸಿ ನೀರು ಹರಿಸಿದರೆ ಹಳ್ಳ,ಕೋಳ್ಳಗಳು, ಹಾಗೂ ಬತ್ತಿದ ಬಾವಿಗಳಿಗೆ ಅಂತರ ಜಲ್ ಮಟ್ಟ ಹೆಚ್ಚಾಗಿ ರೈತಾಪಿ ವರ್ಗಕ್ಕೆ ಅನುಕೂಲವಾಗುವದು ಕಾರಣ ಇಂದು ಜೆಡಿಎಸ್ ಮುಖಂಡರಾದ ಬಿ.ಡಿ.ಪಾಟೀಲರ ನೇತೃತ್ವದಲ್ಲಿ ರೈತಾಪಿ ವರ್ಗ ಇಂದು ವಿಜಾಪೂರ ಸಂಸದರಾದ ಶ್ರೀ ರಮೇಶ್ ಜೀಗಜಿಣಗಿ ಯವರಿಗೆ ರೈತ ನಿಯೋಗ ಭೇಟಿ ನೀಡಿ ವಾಸ್ತವ ಸಮಸ್ಯೆ ಮನವರಿಕೆ ಮಾಡಲಾಗಿತ್ತು.ಸಂಸದರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮರೇಪ್ಪ ಗಿರಣಿವಡ್ಡರ,ಸಿದ್ದಾರಾಮ ನಿಚ್ಚಳ, ಸುಭಾಷ್ ಅಚ್ಚೇಗಾರ ,ಬಾಬಾ ಹಂಚಿನಾಳ,ಮುಂತಾದ ರೈತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ