ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025 ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.
ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ
ಇಂಡಿ: ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025 ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯು ದಿ: 09-05-2025 ರಿಂದ ಆರಂಭವಾಗಿ ದಿ: 28-05-2025 ರವರೆಗೆ ಅವಕಾಶ ಇರುತ್ತದೆ. ಈ ತರಬೇತಿ ಸಂಸ್ಥೆಯಲ್ಲಿ ಫಿಟ್ಟರ್-2 ವರ್ಷ, ಎಲೆಕ್ಟ್ರಿಶಿಯನ್-2 ವರ್ಷ, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್-2 ವರ್ಷ, ಸಿ ಎನ್ ಸಿ ಮಶಿನಿಂಗ್ ಟೆಕ್ನಿಶಿಯನ್-2 ವರ್ಷದ ಕೋರ್ಸ್ ಗಳು ಲಭ್ಯವಿದ್ದು, 10 ನೇ ತರಗತಿ ಪಾಸಾದ ವಿದ್ಯಾರ್ಥಿಗಳು www.cite.karnataka.gov.in ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಾಚಾರ್ಯ ಪಿ ವೈ ರಜನಿಕರ (8073341505) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ