ನಾವು ನಮ್ಮ ಬಂದ್ ಕರೆ ಯನ್ನು ಹಿಂದೆ ಪಡೆಯುತ್ತೇವೆ ಎಂದು ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ.
ಇಂಡಿ. ಉಪವಿಭಾಗ ಅಧಿಕಾರಿಗಳು ಶ್ರೀಮತಿ ಅನುರಾಧ ವಸ್ತ್ರದ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ಸರ್ಕಾರ ನೀರು ಬಿಡುಗಡೆಗೊಳಿಸಿದೆ ಅದರಿಂದ ನೀವು ಹೋರಾಟ ಹಿಂದೆ ತೆಗೆದುಕೊಳ್ಳಿ ಅಂತ ವಿನಂತಿಸಿದರು ಹೋರಾಟಗಾರರು ನಾವು ನಮ್ಮ ಹೋರಾಟ ಅನ್ನದಾತರ ಪರವಾಗಿದ್ದು ನೀರು ಬಿಡುಗಡೆಗೊಳಿಸಿದ ಸಂತಸದ ವಿಷಯ ನಾವು ನಮ್ಮ ಬಂದ್ ಕರೆ ಯನ್ನು ಹಿಂದೆ ಪಡೆಯುತ್ತೇವೆ ಎಂದು ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಪತ್ರಿಕಾ ಹೇಳಿಕೆ ನೀಡಿದರು.
ಈ ದೇಶದಲ್ಲಿ ಹೋರಾಟವಿಲ್ಲದೇ ಯಾವುದೂ ಸುಲಭವಾಗಿ ದಕ್ಕುವುದಿಲ್ಲ. ಒಂದು ಹಸಿಗೂಸು ಸಹ ತನ್ನ ಹಸಿವನ್ನು ನೀಗಿಸಿಕೊಳ್ಳಬೇಕಾದರೂ ಅಳಬೇಕಾಗುತ್ತದೆ . ಹಾಗೆಯೇ ಜಿಡ್ಡುಗಟ್ಟಿದ ಈ ಆಡಳಿತ ವ್ಯವಸ್ಥೆ ಕಣ್ಣು ತೆರೆಯಬೇಕಾದರೆ ಹೋರಾಟಗಳು, ಸತ್ಯಾಗ್ರಗಳು ಅವಶ್ಯವಿರುತ್ತವೆ. ಕಳೆದ ತಿಂಗಳಲ್ಲಿ ಇಂಡಿ ಮುಖ್ಯ ಕಾಲುವೆಗೆ ನೀರು ಹರಿಸಬೇಕು ಹಾಗೂ ನಷ್ಟ ಆದ ತೂಗರಿ ಪರಿಹಾರ ನೀಡಬೇಕು ಹಾಗೂ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ ಸರ್ಕಾರದ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು ಇಂತಹ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಇಂಡಿಯ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೈತರು, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ನಿರಂತರವಾಗಿ 4 ನಾಲ್ಕಾರು ದಿನಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ 109 ಗಂಟೆ ನಡೆಸಿದ್ದು ಈಗ ಇತಿಹಾಸ. ಧರಣಿ ಮಾಡುವ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ಉಪವಿಭಾಗಾಧಿಕಾರಿಗಳು ಕಾಲಮಿತಿಯಲ್ಲಿ ನೀರು ಬಿಡುಗಡೆಗೊಳಿಸಲು ಕ್ರಮ ತೆಗೆದುಕೊಳ್ಳುವುದಾಗಿಯೂ, ತಾವು ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿಬೆಕೆಂದು ವಿನಂತಿಸಿದ್ದರು. ಅವರ ಮೇಲೆ ಸಂಪೂರ್ಣ ಭರವಸೆ ಇರಿಸಿ, ಇಂಡಿ ಇತಿಹಾಸದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಥಮ ಬಾರಿಗೆ ನಮ್ಮ ಹೋರಾಟ ಅಂತ್ಯಗೊಳಿಸಿದ್ದೆವು. ನಮ್ಮ ಹೋರಾಟಕ್ಕೆ ಮಣಿದು ರೈತರ, ಜನ ಜಾನುವಾರುಗಳ ಪಕ್ಷಿಗಳ ಹಿತದೃಷ್ಟಿಯಿಂದ ಈಗ ಕಾಲುವೆಗೆ ನೀರು ಹರಿಸುತ್ತಿದ್ದಾರೆ ಹಾಗೂ. ಸಮಸ್ತ ರೈತರ ಪರವಾಗಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಾಗೂ"ಸರ್ಕಾರಕ್ಕೆ'ಅಧಿಕಾರಿಗಳಿಗೆ ಧನ್ಯವಾದಗಳು.
ಗ್ರಾಮೀಣ ಪಿಎಸ್ಐ ಸೋಮಶೇಖರ್ ಗೆಜ್ಜೆ, ಬಾಳು ಮುಳಜಿ ಕರವೇ ಅಧ್ಯಕ್ಷರ ಇಂಡಿ, ಸುನೀಲಗೌಡ ಬಿರಾದಾರ, ಮಹೇಶ ಹೂಗಾರ, ಧರ್ಮರಾಜ ಸಾಲೋಟಗಿ, ಅಶೋಕ್ ಅಕಲಾದಿ, ಪ್ರಶಾಂತ್ ಲಾಳಸಂಗಿ, ಮಲ್ಲು ಗುಡ್ಲ, ಸಚಿನ್ ನಾವಿ, ಸಿದ್ದು ಡಂಗಾ, ಶಿವಾನಂದ ಮಡಿವಾಳ, ಶಿವಾನಂದ ಲಕ್ಕುಂಡಿಮಠ, ಮಂಜು ದೇವರ, ಶ್ರೀಕಾಂತ್ ಬಡಿಗೇರ, ಗಿರೀಶ ಪಾಟೀಲ್, ಅಶೋಕಗೌಡ ಬಿರಾದರ, ಎನ್.ಕೆ. ಪೂಜಾರಿ ಕಲ್ಲು, ಮೂಸಲಗಿ ಗದಗಯ ಹಿರೇಮಠ ಆದಿತ್ಯ ಶಿಂದೆ, ಅರವಿಂದ್ ಪಾಟೀಲ, ಅಪ್ಪು ಚಂಡಕೆ, ವಿಜಯಕುಮಾರ್ ರಾಥೋಡ, ವಿವಿಧ ಗ್ರಾಮಗಳಿಂದ ರೈತರ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ