ಆರೋಗ್ಯವಿಲ್ಲದಿದ್ದರೆ ಜಗತ್ತಿನ ಎಲ್ಲಾ ಐಶ್ವರ್ಯವೂ ವ್ಯರ್ಥ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

 ಇಂಡಿ.  ಮಾನವನಿಗೆ ಜೀವದಲ್ಲಿ ಎಲ್ಲವಕ್ಕೂ ಮಿಗಿಲಾಗಿ ಆರೋಗ್ಯವೇ ಮೊದಲು.  ಆರೋಗ್ಯವಿಲ್ಲದಿದ್ದರೆ ಜಗತ್ತಿನ ಎಲ್ಲಾ ಐಶ್ವರ್ಯವೂ ವ್ಯರ್ಥ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.


 ಪಟ್ಟಣದ ತಾಲೂಕಾ  ಸರ್ಕಾರಿ ಆಸ್ಪತ್ರೆಯಲ್ಲಿ 15ನೇ ಹಣಕಾಸು ಆಯೋಗದ ಅಡಿಯಲ್ಲಿ ನಿರ್ಮಿಸಲಾದ ತಾಲೂಕಾ   ಸಾರ್ವಜನಿಕ  ಆರೋಗ್ಯ ಘಟಕ  ಪ್ರಯೋಗಾಲಯದ ಉದ್ಘಾಟನೆ ನೆರವೆರಿಸಿ ಮಾತನಾಡಿದ ಅವರು ಮಾನವನಿಗೆ ಈ ಬದುಕಿನಲ್ಲಿ ಆರೋಗ್ಯವೇ ಶ್ರೇಷ್ಠ ಆಸ್ತಿ. ಹಣ, ಹುದ್ದೆ, ಹೆಸರು ಎಲ್ಲವೂ ತಾತ್ಕಾಲಿಕ, ಆದರೆ ಆರೋಗ್ಯ ಶಾಶ್ವತವಾದ ನಿಜವಾದ ಸಂಪತ್ತು ಎಂದು ಹೇಳಿದರು.

ಸ್ವಸ್ಥ ಸಮಾಜವೇ ಸಮೃದ್ಧ ದೇಶದ ಮೂಲಸ್ಥಂಭ. ಈ ಪ್ರಯೋಗಾಲಯದಿಂದ ಜನರಿಗೆ ಆರೋಗ್ಯದತ್ತ ಒಂದು ಹೆಜ್ಜೆ ಹತ್ತಲು ಸಹಾಯವಾಗಲಿದೆ. ಸರ್ಕಾರದ ಉದ್ದೇಶವೇ—ಗ್ರಾಮೀಣ ಭಾಗಕ್ಕೂ ನವೀಕರಿತ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವುದು. ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳ ಕಲ್ಪನೆಯ ಮೂಲಕ ಜನಸಾಮಾನ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ  ಎಂದು ಹೇಳಿದರು.


ಸರ್ಕಾರಿ ಆಸ್ಪತ್ರೆಗಳು ಜನಸಾಮಾನ್ಯರ ಆಶಾಕಿರಣವಾಗಿವೆ. ಇಲ್ಲಿ ಬರೋದು ಬಡಜನರು, ರೈತರು, ಕಾರ್ಮಿಕರು, ದುಡಿಮೆದಾರರು. ಡಾಕ್ಟರ್‌ಗಳು ತಮ್ಮ ಕರ್ತವ್ಯವನ್ನು ಸೇವಾಭಾವದಿಂದಲೇ ನಿರ್ವಹಿಸಬೇಕು. ಇದು ಕೇವಲ ಉದ್ಯೋಗವಲ್ಲ, ಇದು ದೇವರು ನೀಡಿದ ಅವಕಾಶ. ತಾವು ಲಾಭಕ್ಕಾಗಿ ಅಲ್ಲ, ಜನ ಸೇವೆಗಾಗಿ ಇಲ್ಲಿರುವೆನೆಂಬ ನೈತಿಕ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಶಾಸಕರು ತಾಕೀತುಮಾಡಿದರು.

ಡಾಕ್ಟರ್ ಆಗಿ ಯಾರೊಬ್ಬರ ಬದುಕು ಉಳಿಸೋದೇ ಒಂದು ದೊಡ್ಡ ಪುಣ್ಯ. ಹಣದ ಹಿಂದೆ ಓಡೋ ಬದಲಿಗೆ, ಇಲ್ಲಿಗೆ ಬರುವ ಬಡಜನರ ನೆರವಿಗೆ ನಿಂತು ಅವರ ಆಶೀರ್ವಾದ ಪಡೆಯಿರಿ. ನಿಜವಾದ ಸಂತೋಷ ಅದು. ಸರ್ಕಾರದಿಂದ ಸಿಗುವ ವೇತನದ ಜೊತೆಗೆ ದೇವರಿಂದ ಸಿಗುವ ಪುಣ್ಯವೂ ಸೇರಬೇಕು,” ಎಂದು ಅವರು ಪ್ರೇರಣಾತ್ಮಕ ಭಾಷಣದಲ್ಲಿ ಹೇಳಿದರು.

ಈ ಹೊಸ ಲ್ಯಾಬ್‌ನಲ್ಲಿ  ಡೆಂಗ್ಯೂ, ಚಿಕನ್ ಗುನ್ಯಾ, ನೀರಿನ ಪರೀಕ್ಷೆ, ಮಿಸೆಲ್ಸ್ ರುಬೆಲ್ಲಾ, ಸೇರಿದಂತೆ  ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಶುಗರ್, ಟೈಫಾಯ್ಡ್, ಮಲೇರಿಯಾ, ಲಿಪಿಡ್ ಪ್ರೊಫೈಲ್ ಸೇರಿದಂತೆ ವಿವಿಧ ತ್ವರಿತ ಪರೀಕ್ಷೆಗಳು ಖುದ್ದಾಗಿ ಸ್ಥಳದಲ್ಲಿಯೇ ಮಾಡಲು ಅವಕಾಶ ಸಿಗಲಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಾವಿರಾರು ಜನರಿಗೆ ಹೆಚ್ಚಿನ ಖರ್ಚಿಲ್ಲದೇ ಗುಣಮಟ್ಟದ ವೈದ್ಯಕೀಯ ಸೇವೆ ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ , ತಹಸೀಲ್ದಾರ ಕಡಖಭಾವಿ, ಅರೋಗ್ಯ ಅಧಿಕಾರಿ ಅರಚನಾ ಕುಲಕರ್ಣಿ, ಇಲಿಯಾಸ ಬೋರಾಮಣಿ, ಬಾಬು ರಾಠೋಡ, ಅಪ್ಪಾಸಾಬ ಇನಾಮದಾರ, ಪ್ರಶಾಂತ ಕಾಳೆ, ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ, ಅನ್ನಪ್ಪಾ ಅಹಿರಸಂಗ, ಭೀಮಣ್ಣ ಕೌಲಗಿ, ಆರ್.ಟಿ.ಕೋಳೆಕರ, ಪ್ರಭು ಹೊಸಮನಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. 

ಜನತೆಯ ಪ್ರತಿಕ್ರಿಯೆ:

ಸ್ಥಳೀಯ ನಾಗರಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಈ ಹೊಸ ಪ್ರಯೋಗಾಲಯ ಉದ್ಘಾಟನೆಯನ್ನು ಸ್ವಾಗತಿಸುತ್ತಾ, “ಇದು ನಿಜಕ್ಕೂ ನಮ್ಮ ಪಟ್ಟಣದ ಆರೋಗ್ಯ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿದೆ,” ಎಂದು ಸಂತೋಷ ವ್ಯಕ್ತಪಡಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು