ಇಂದಿನ ಜನಸಾಮಾನ್ಯರು ಅರಣ್ಯ ನಾಶ ಮಾಡುತ್ತಿದ್ದಾರೆ. ನಿಸರ್ಗದಲ್ಲಿರುವ ಗಿಡ ಗಂಟೆಗಳನ್ನು ಕಡಿದರೆ ನಮ್ಮನ್ನು ನಾವು ಕಡಿದುಕೊಂಡಂತೆ : ಶಾಸಕ ಯಶವಂತ್ರಾಯಗೌಡ ಪಾಟೀಲ.

 ಇಂಡಿ: ಇಂದಿನ ಜನಸಾಮಾನ್ಯರು ಅರಣ್ಯ ನಾಶ ಮಾಡುತ್ತಿದ್ದಾರೆ. ನಿಸರ್ಗದಲ್ಲಿರುವ ಗಿಡ ಗಂಟೆಗಳನ್ನು ಕಡಿದರೆ ನಮ್ಮನ್ನು ನಾವು ಕಡಿದುಕೊಂಡಂತೆ. ಇಂತಹ ಗುಡ್ಡದಲ್ಲಿ ಹಲವಾರು ತರಹದ ಗಿಡ-ಮರಗಳನ್ನು ಬೆಳೆಸಿದ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.


ಅವರು ತಾಲೂಕಿನ ಸಾವಳಸಂಗ ಗ್ರಾಮದ ಜ್ಣಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ವೃಕ್ಷೋದ್ಯಾನದಲ್ಲಿ ಶ್ರೀ ಯಶವಂತರಾಯಗೌಡ ವಿ.ಪಾಟೀಲ ಫೌಂಡೇಶನ್(ರಿ), ಪಡನೂರ ಹಾಗೂ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಲಯ(ಅರಣ್ಯ ಇಲಾಖೆ), ಇಂಡಿ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಉಸಿರಿಗಾಗಿ-ಹಸಿರು ಅಭಿಯಾನ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಾವಳಸಂಗ ಗುಡ್ಡದ ಪರಿಸರ ಬೆಳೆಯಲು ವಿಜಯಪುರದ ಸಿದ್ಧೇಶ್ವರ ಶ್ರೀಗಳ ಕಳಕಳಿಯ, ಕನಸಿನ ಕೂಸು ಎಂದೇ ಹೇಳಬಹುದು. ಅವರು ಹಿಂದೆ ಈ ಪಾವನ ನೆಲದಲ್ಲಿ ಕುಳಿತು ಹೊಗಿದ್ದು ಸ್ಮರಣೀಯ, ಹಾಗಾಗಿ ಈ ಪಾವನ ನೆಲಕ್ಕೆ ಜ್ಝಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಎಂದು ನಾಮಕರಣ ಮಾಡಲಾಯಿತು. ಇವತ್ತು ನಾವೇಲ್ಲರು ಅವರ ನೆನಪು, ಬದುಕು, ಜ್ಜಾನಧರೆಯನ್ನು ಈ ಪರಿಸರದಲ್ಲಿ ಕಾಣುತ್ತಿದ್ದೇವೆ. ಆದ್ದರಿಂದ ಇಂದಿನಿಂದಲೇ ಈ ಭಾಗದಲ್ಲಿ ಜನಜಾಗೃತಿ, ಮನಸಾಪೂರ್ವಕ, ಪ್ರಜ್ಝಾಪೂರ್ವಕವಾಗಿ ಮೂಡಿಸಬೇಕು. ಇಂದು ಫೌಂಡೇಶನ ಹುಟ್ಟಿಕೊಂಡಿದ್ದು ಉತ್ತಮ ಆದರೆ ನಿಮ್ಮ ಕಾರ್ಯ ಹಲವಾರು ಸಮಸ್ಯೆಗಳ, ಬಡವರ ಏಳಿಗೆಗಾಗಿ ಕೆಲಸ ಮಾಡಿ ಎಂದ ಅವರು ಇಂದಿನ ಯುವಕರೇ ನಾಳಿನ ನಾಯಕರು ನಿಮ್ಮೇಲ್ಲರ ಹೊಣೆ ಮನೆಗೊಂದು ಮರ ನೆಡುವುದು ಆದರೆ ಯಾರ ಪ್ರೇಮಿಗಳಾಗಬೇಡಿ ಕೆವಲ ಪರಿಸರ ಪ್ರೇಮಿಗಳಾಗಿ ಎಂದರು.

ಈ ಸಂದರ್ಭದಲ್ಲಿ ಕಾತ್ರಾಳ-ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಯಶವಂತರಾಯಗೌಡ ವಿ.ಪಾಟೀಲ ಫೌಂಡೇಶನ ಅಧ್ಯಕ್ಷ ವಿಠ್ಠಲಗೌಡ ಯ.ಪಾಟೀಲ ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಖತರಾದ ಡೊಮನಾಳದ ಎನ್.ಡಿ.ಪಾಟೀಲ, ಬಾದಾಮಿಯ ಎಸ್.ಎಚ್.ವಾಸನ, ವಿಜಯಪುರದ ಅರಣ್ಯಾಧಿಕಾರಿ ವನೀತಾ ಆರ್​, ಇಂಡಿಯ ಎಸಿ ಅನುರಾಧಾ ವಸ್ತ್ರದ ಮಾತನಾಡಿದರು.


ಕಾರ್ಯಕ್ರಮದಲ್ಲಿ ಜಿಪಂ ಉಪಕಾಯದರ್ಶಿ ವಿಜಯಕುಮಾರ ಆಜೂರ, ಡಿವೈಎಸ್​ಪಿ ಜಗದೀಶ ಎಸ್.ಎಚ್​, ತಹಸೀಲದಾರ ಬಿ.ಎಸ್.ಕಡಕಬಾವಿ, ಎಸ್​.ಬಿ.ಇಂಗಳೆ, ಸಂದೀಪ ರಾಠೋಡ, ಸಂಜಯ ಖಡಗೇಕರ, ಮಲ್ಲಿಕಾರ್ಜುನ ಭಜಂತ್ರಿ, ಸುಜಾತಾ ಹುನ್ನೂರ, ಎಸ್. ಆರ್.ನಡುಗಡ್ಡಿ, ಮಹಾದೇವಪ್ಪಾ ಏವೂರ, ಎಚ್.ಎಸ್.ಪಾಟೀಲ, ದುಂಡಪ್ಪ ಸಾಹುಕಾರ ಖೇಡ, ಎಂ.ಆರ್.ಪಾಟೀಲ, ಸಾವಿತ್ರಿ ಮೊರೆ, ಶ್ರೀಮಂತ ಇಂಡಿ, ಜಗದೀಶ ಕ್ಷತ್ರಿ, ಜಾವೀದ ಮೋಮಿನ, ಬೊರಾಮಣಿ, ಜೆಟ್ಟೆಪ್ಪಾ ರವಳಿ, ಪ್ರಶಾಂತ ಕಾಳೆ, ಸದಾಸಿವ ಪ್ಯಾಟಿ, ಕವಲಗಿ ಕಾಕಾ, ವಿನೋದ ಶಾಹಪುರ, ಶಿವು ಬಿಸನಾಳ, ಎ.ಎ.ಜಾಗೀರದಾರ, ಭೀಮು ಗಡ್ಡದ, ಮಹೇಶ ಹೊನ್ನಬಿಂದಗಿ, ಪ್ರೀತು ದಶವಂತ, ನಾಗೇಶ ಬಿರಾದಾರ ಇದ್ದರು.


ಧನರಾಜ ಮುಜಗೊಂಡ, ಬಸು ಗೊರನಾಳ ನಿರೂಪಿಸಿದರು, ಆರ್.ಎಫ್.ಓ ಸಂಗಲಕ ವಂದಿಸಿದರು.

ಪೋಟೋಕ್ಯಾಪ್ಸನ್​ ೦೫ ಇಂಡಿ ೦೧: ತಾಲೂಕಿನ ಸಾವಳಸಂಗ ಗ್ರಾಮದ ಜ್ಣಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ವೃಕ್ಷೋದ್ಯಾನದಲ್ಲಿ ಶ್ರೀ ಯಶವಂತರಾಯಗೌಡ ವಿ.ಪಾಟೀಲ ಫೌಂಡೇಶನ್(ರಿ), ಪಡನೂರ ಹಾಗೂ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಲಯ(ಅರಣ್ಯ ಇಲಾಖೆ), ಇಂಡಿ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಉಸಿರಿಗಾಗಿ-ಹಸಿರು ಅಭಿಯಾನ ಕಾಯಕ್ರಮ ಭಾವಚಿತ್ರಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು