ಶರೀರ ಮನಸ್ಸು ಆತ್ಮ ಪರಿಶುದ್ಧಗೊಳ್ಳಬೇಕಾದರೆ ಯೋಗ ಮಾಡಬೇಕು ಯೋಗವು ಮನುಷ್ಯನ ಮಾನಸಿಕ ಆರೋಗ್ಯ ಸದೃಢ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಮತಿ ಅನುರಾಧ ವಸ್ತ್ರದ
ಇಂಡಿ. ಬರದ ನಾಡಿನಲ್ಲಿ ಬಡವರ ವಿದ್ಯಾಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಶ್ರೀ ಭಾಗ್ಯವಂತಿ ವಿದ್ಯಾ ವರ್ಧಕ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವು ವಿಜಯವಾಣಿ ಕನ್ನಡ ದಿನಪತ್ರಿಕೆ ಮತ್ತು ಶ್ರೀ ಭಾಗ್ಯವಂತಿ ವಿದ್ಯಾವರ್ಧಕ ಸಂಘಗ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಇಂಡಿ ಇವರ ಸಹಯೋಗದೊಂದಿಗೆ ಅತ್ಯಂತ ಸಂಭ್ರಮದಿಂದ ಜರುಗಿತು.
ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿರುವ ಶ್ರೀಮತಿ ಅನುರಾಧ ವಸ್ತ್ರದ
ಕಂದಾಯ ಉಪವಿಭಾಗ ಅಧಿಕಾರಿಗಳು ಹಾಗೂ ಉಪ ವಿಭಾಗಿಯ ದಂಡಾಧಿಕಾರಿಗಳು ಇಂಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶರೀರ ಮನಸ್ಸು ಆತ್ಮ ಪರಿಶುದ್ಧಗೊಳ್ಳಬೇಕಾದರೆ ಯೋಗ ಮಾಡಬೇಕು ಯೋಗವು ಮನುಷ್ಯನ ಮಾನಸಿಕ ಆರೋಗ್ಯ ಸದೃಢ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಫೋಟೋ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಶ್ರೀ ಕೋಟೆಪ್ಪ ಕಾಂಬಳೆ ಹಿರಿಯ ದಿವಾನಿ ನ್ಯಾಯಾಧೀಶರು ಇಂಡಿ ಇವರು ನಮ್ಮ ಮನಸ್ಸನ್ನು
ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ ಯೋಗವು ತುಂಬಾ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ
ಶ್ರೀ ಸಿ ಎಸ್ ದಶವಂತ ಪ್ರಾಚಾರ್ಯರು
ಶ್ರೀ ಭಾಗ್ಯವಂತಿ ಪದವಿ ಪೂರ್ವ ಕಾಲೇಜು ಚವಡಿಹಾಳ ಇವರು ಮಾತನಾಡುತ್ತಾ ನಮ್ಮ ಶಿಕ್ಷಣ ಸಂಸ್ಥೆಯು ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ
ಶ್ರೀ ಶಾಂತಪ್ಪ ಪಿ ದಶವಂತ ಇವರು ಮಾತನಾಡುತ್ತಾ ಮಕ್ಕಳ ಮನಸ್ಸು ಶಾಂತಚಿತ್ತವಾಗಲೂ ಯೋಗ ಇನ್ನಷ್ಟು ಸರಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅದೇ ರೀತಿಯಾಗಿ ಯೋಗವು ಮಕ್ಕಳ ಓದಿಗೆ ಪೂರಕವಾಗಿದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಾಂತಪ್ಪ ಪಿ ದಶವಂತ , ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಾನಂದ ದಶವಂತ, ಸಲಹಾ ಸಮಿತಿಯ ಅಧ್ಯಕ್ಷರಾದ ಅಪ್ಪಾರಾಯ ದಶವಂತ, ಅನುದಾನಿತ ಪ್ರೌಢಶಾಲೆ ಅಧ್ಯಕ್ಷರಾದ ಕಾಮಣ್ಣ ದಶವಂತ, ಪ್ರಾಥಮಿಕ ವಿಭಾಗದ ಅಧ್ಯಕ್ಷರಾದ ಅಶೋಕ್ ದಶವಂತ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿ ಎಸ್ ದಶವಂತ ,
ಶ್ರೀ ಭಾಗ್ಯವಂತಿ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಯರಾದ ಬಸವರಾಜ ಸಿ ರೋಡಗಿ, ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳಾದ ಪ್ರಕಾಶ್ ಹಲಸಂಗಿ, ಹಾಗೂ ಚವಡಿಹಾಳ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಎಲ್ಲ ಪಾಲಕರು ಹಾಗೂ ಎಲ್ಲ ಶಿಕ್ಷಕ ವೃಂದ, ಉಪನ್ಯಾಸಕ ವರ್ಗ ಮತ್ತು ಬೋಧಕೇತರ
ಉಪಸ್ಥಿತರಿದ್ದರು
ವಿಜಯಕುಮಾರ್ ಶಿಂದೆ ಉಪನ್ಯಾಸಕರು ನಿರೂಪಿಸಿದರು ಪ್ರಕಾಶ್ ಹಲಸಂಗಿ ಸ್ವಾಗತಿಸಿದರು ಮಚೇಂದ್ರ ಸಿಂಧೆ ವಂದನಾರ್ಪಣೆ ಸಲ್ಲಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ